ಕರ್ನಾಟಕ

karnataka

ETV Bharat / bharat

ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧನ: ಆಂಧ್ರ ರಾಜ್ಯಾದ್ಯಂತ ಪ್ರವಾಸಕ್ಕೆ ಪತ್ನಿ ನಿರ್ಧಾರ

ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರ ಬಂಧನದಿಂದ ಆಘಾತಗೊಂಡು ಮೃತಪಟ್ಟ ಜನರ ಕುಟುಂಬಸ್ಥರನ್ನು ಭೇಟಿ ಮಾಡಲು ಪತ್ನಿ ನಾರಾ ಭುವನೇಶ್ವರಿ ನಿರ್ಧರಿಸಿದ್ದಾರೆ.

By ETV Bharat Karnataka Team

Published : Oct 19, 2023, 5:33 PM IST

ನಾರಾ ಭುವನೇಶ್ವರಿ
ನಾರಾ ಭುವನೇಶ್ವರಿ

ಅಮರಾವತಿ (ಆಂಧ್ರ ಪ್ರದೇಶ):ಜನರನ್ನು ತಲುಪುವ ಪ್ರಯತ್ನದ ಭಾಗವಾಗಿ ಸದ್ಯ ಜೈಲಿನಲ್ಲಿರುವ ಟಿಡಿಪಿ ಮುಖ್ಯಸ್ಥ, ಮಾಜಿ ಸಿಎಂ ಎನ್.ಚಂದ್ರಬಾಬು ನಾಯ್ಡು ಅವರ ಪತ್ನಿ ನಾರಾ ಭುವನೇಶ್ವರಿ ಅವರು ಆಂಧ್ರಪ್ರದೇಶ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ನಾಯ್ಡು ಬಂಧನದ ಬಗ್ಗೆ ಸುದ್ದಿ ಕೇಳಿ ನೊಂದು ಮೃತಪಟ್ಟ ಜನರ ಕುಟುಂಬಗಳನ್ನು ಈ ಸಂದರ್ಭದಲ್ಲಿ ಅವರು ಭೇಟಿ ಮಾಡುವರು. ಭುವನೇಶ್ವರಿ ವಾರಕ್ಕೆ ಕನಿಷ್ಠ ಎರಡರಿಂದ ಮೂರು ಸ್ಥಳಗಳನ್ನು ತಲುಪುವ ಪ್ರವಾಸ ಯೋಜನೆ ರೂಪಿಸಿದ್ದಾರೆ.

ಕೌಶಲ್ಯಾಭಿವೃದ್ಧಿ ನಿಗಮದ ಹಗರಣ ಆರೋಪ ಪ್ರಕರಣದಲ್ಲಿ ನಾಯ್ಡು ಬಂಧನದ ನಂತರ ಸ್ಥಗಿತಗೊಂಡಿದ್ದ 'ಭವಿಷ್ಯತುಕು ಗ್ಯಾರಂಟಿ' (ಭವಿಷ್ಯದ ಭರವಸೆ) ಕಾರ್ಯಕ್ರಮವನ್ನು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಮುನ್ನಡೆಸಲಿದ್ದಾರೆ ಎಂದು ಟಿಡಿಪಿ ಪತ್ರಿಕಾ ಪ್ರಕಟಣೆ ಗುರುವಾರ ತಿಳಿಸಿದೆ. ಈ ಮಧ್ಯೆ, ಆಂಧ್ರದ ಪ್ರಮುಖ ಪ್ರತಿಪಕ್ಷವಾದ ಟಿಡಿಪಿ ತನ್ನ ಭವಿಷ್ಯದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ವಿವರಿಸಲು ಮುಂದಿನ ಕೆಲವು ದಿನಗಳಲ್ಲಿ ಸಭೆ ನಡೆಸಲಿದೆ.

ಕೌಶಲ್ಯಾಭಿವೃದ್ಧಿ ನಿಗಮದ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ನಾಯ್ಡು ಅವರನ್ನು ಸದ್ಯ ರಾಜಮಹೇಂದ್ರವರಂ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಈ ಹಗರಣದಿಂದಾಗಿ ರಾಜ್ಯದ ಬೊಕ್ಕಸಕ್ಕೆ 300 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಭ್ರಷ್ಟಾಚಾರ ಪ್ರಕರಣ: ಚಂದ್ರಬಾಬು ನಾಯ್ಡು ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ABOUT THE AUTHOR

...view details