ಕರ್ನಾಟಕ

karnataka

ETV Bharat / bharat

ಸುದ್ದಿಗೋಷ್ಟಿಯಲ್ಲಿ ಗಳಗಳನೆ ಕಣ್ಣೀರು ಸುರಿಸಿ ಈ ಪ್ರತಿಜ್ಞೆ ಮಾಡಿದ ಚಂದ್ರಬಾಬು ನಾಯ್ಡು!

ವಿಧಾನಸಭೆಯಲ್ಲಿ ತಮ್ಮ ಪತ್ನಿಗೆ ಅವಮಾನ ಮಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Andhra Pradesh former CM Chandrababu Naidu) ಇಂದು ಸುದ್ದಿಗೋಷ್ಟಿ ನಡೆಸಿ ಕಣ್ಣೀರು ಹಾಕಿದರು.

Chandrababu Naidu
Chandrababu Naidu

By

Published : Nov 19, 2021, 3:15 PM IST

Updated : Nov 19, 2021, 3:36 PM IST

ಮಂಗಳಗಿರಿ(ಆಂಧ್ರಪ್ರದೇಶ):ಟಿಡಿಪಿ ಮುಖ್ಯಸ್ಥ ಹಾಗೂ ಆಂಧ್ರಪ್ರದೇಶದ ಪ್ರತಿಪಕ್ಷ ನಾಯಕ ಚಂದ್ರಬಾಬು ನಾಯ್ಡು (Chandrababu Naidu) ಸುದ್ದಿಗೋಷ್ಟಿಯ ವೇಳೆ ಗಳಗಳನೆ ಕಣ್ಣೀರು ಹಾಕಿರುವ ಪ್ರಸಂಗ ನಡೆಯಿತು.

'ನನ್ನ ರಾಜಕೀಯ ಜೀವನದಲ್ಲಿ ಇಷ್ಟೊಂದು ನೋವು ಹಿಂದೆಂದೂ ಅನುಭವಿಸಿಲ್ಲ. ನನ್ನ ಜೀವನದಲ್ಲಿ ಈ ರೀತಿಯ ಘಟನೆ ನಡೆದಿರುವುದು ಇದೇ ಮೊದಲು' ಎಂದರು.

ಸುದ್ದಿಗೋಷ್ಟಿ ವೇಳೆ ಕಣ್ಣೀರು ಸುರಿಸಿದ ಚಂದ್ರಬಾಬು ನಾಯ್ಡು

ಕಣ್ಣೀರಿಗೆ ಕಾರಣವೇನು?

ವಿಧಾನಸಭೆಯಲ್ಲಿ ನಡೆದ ಬೆಳವಣಿಗೆಯಲ್ಲಿ ಪತ್ನಿ ಭುವನೇಶ್ವರಿ ಅವರಿಗೆ ಆಗಿರುವ ಅವಮಾನಕ್ಕೆ ಸಂಬಂಧಿಸಿದಂತೆ ನಾಯ್ಡು ಕಣ್ಣೀರು ಹಾಕಿದರು. ಮಂಗಳಗಿರಿಯಲ್ಲಿರುವ ಟಿಡಿಪಿ (TDP office in Mangalagiri) ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, 'ನಾನು ಅಧಿಕಾರದಲ್ಲಿದ್ದಾಗ ಯಾರಿಗೂ ಅವಮಾನ ಮಾಡಿಲ್ಲ, ವಿರೋಧ ಪಕ್ಷದಲ್ಲಿ ಕುಳಿತರೂ ನಾನು ಜವಾಬ್ದಾರಿ ಮರೆತವನಲ್ಲ' ಎಂದರು.

ನನ್ನ ಪ್ರತಿಯೊಂದು ಕೆಲಸದಲ್ಲೂ ಹೆಂಡತಿ ನನಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರ ಬಗ್ಗೆ ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ ಎಂದು ನೋವು ತೋಡಿಕೊಂಡರು.

ಇದನ್ನೂ ಓದಿ:ಮನೆ ಕುಸಿದು ನಾಲ್ವರು ಮಕ್ಕಳು ಸೇರಿ 9 ಜನರ ದಾರುಣ ಸಾವು!

ಅಧಿಕಾರಕ್ಕೆ ಬಂದ ಮೇಲೆಯೇ ವಿಧಾನಸಭೆಗೆ ಕಾಲಿಡುವ ಪ್ರತಿಜ್ಞೆ

ಆಡಳಿತಾರೂಢ ವೈಎಸ್​​ಆರ್​ (YSR) ಕಾಂಗ್ರೆಸ್​ ಸದಸ್ಯರು ಮೇಲಿಂದ ಮೇಲೆ ನಿಂದನೆ ಮಾಡ್ತಿರುವುದು, ತುಂಬಾ ನೋವುಂಟು ಮಾಡಿದೆ. ಕಳೆದ ಎರಡೂವರೆ ವರ್ಷಗಳಿಂದ ಅವಮಾನಗಳನ್ನು ಸಹಿಸಿಕೊಂಡಿದ್ದೇನೆ. ಆದರೆ ಇದೀಗ ನನ್ನ ಹೆಂಡತಿಯನ್ನೂ ಗುರಿಯಾಗಿಸಿಕೊಂಡಿದ್ದಾರೆ. ಈ ರೀತಿಯ ಘಟನೆ ನನ್ನ ರಾಜಕೀಯ ಜೀವನದಲ್ಲಿ ನಡೆದಿಲ್ಲ. ನನ್ನ ಪಕ್ಷ ಅಧಿಕಾರಕ್ಕೆ ಬಂದ ನಂತರವೇ ನಾನು ವಿಧಾನಸಭೆಗೆ ಕಾಲಿಡುವೆ ಎಂದು ಪ್ರತಿಜ್ಞೆ ಮಾಡಿದರು.

Last Updated : Nov 19, 2021, 3:36 PM IST

ABOUT THE AUTHOR

...view details