ಕರ್ನಾಟಕ

karnataka

ETV Bharat / bharat

ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು - ನಿರೀಕ್ಷಣಾ ಜಾಮೀನು

ವೈಎಸ್​ಆರ್​ಸಿಪಿ ಸರ್ಕಾರ ದಾಖಲಿಸಿದ್ದ ಮೂರು ಆಕ್ರಮ ಪ್ರಕರಣಗಳಲ್ಲಿ ಚಂದ್ರಬಾಬು ನಾಯ್ಡು ಅವರಿಗೆ ಅಂಧ್ರ ಹೈಕೋರ್ಟ್​ ನಿರೀಕ್ಷಣಾ ಜಾಮೀನು ನೀಡಿದೆ.

ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು
ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು

By ETV Bharat Karnataka Team

Published : Jan 10, 2024, 5:57 PM IST

ವಿಜಯವಾಡ(ಆಂಧ್ರಪ್ರದೇಶ) :ಟಿಡಿಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಅಂಧ್ರ ಹೈಕೋರ್ಟ್​ ಬಿಗ್​ ರೀಲಿಫ್​ ನೀಡಿದೆ. ವೈಎಸ್​ಆರ್​ಸಿಪಿ ಸರ್ಕಾರ ದಾಖಲಿಸಿದ್ದ ಅಕ್ರಮ ಪ್ರಕರಣಗಳಲ್ಲಿ ಚಂದ್ರಬಾಬು ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮದ್ಯ, ಅಮರಾವತಿ ಇನ್ನರ್ ರಿಂಗ್ ರೋಡ್ ಮತ್ತು ಉಚಿತ ಮರಳು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ಇತ್ತೀಚೆಗಷ್ಟೇ ಮೂರು ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಟಿ.ಮಲ್ಲಿಕಾರ್ಜುನ ರಾವ್ ಅವರು ಇಂದು ಮಧ್ಯಾಹ್ನ ಏಕಕಾಲದಲ್ಲಿ 3 ಪ್ರಕರಣಗಳಲ್ಲಿ ತೀರ್ಪು ನೀಡಿದ್ದು, ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಮುಖ್ಯವಾಗಿ ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿದೆ. ತನಿಖೆಯ ಮೇಲೆ ಪ್ರಭಾವ ಬೀರುವಂತಹ ಹೇಳಿಕೆಗಳನ್ನು ನೀಡದಂತೆ ನಿರ್ದೇಶನದಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ವಿಷಯವನ್ನು ಎಲ್ಲಿಯೂ ಚರ್ಚಿಸಬಾರದು ಎಂಬ ಷರತ್ತಿನ ಮೇಲೆ ಹೈಕೋರ್ಟ್ ಜಾಮೀನು ನೀಡಿದೆ.

ಸಿಇಸಿಗೆ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ದೂರು :ಮಂಗಳವಾರ ವಿಜಯವಾಡದಲ್ಲಿ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಕೇಂದ್ರ ಚುನಾವಣಾ ಆಯೋಗ ನಡೆಸಿದ ಸಭೆಯಲ್ಲಿ ಮತದಾರರ ಪಟ್ಟಿಯಲ್ಲಿನ ಅವ್ಯವಹಾರ ಹಾಗೂ ಆಡಳಿತ ಪಕ್ಷದ ಅವ್ಯವಸ್ಥೆ ಬಗ್ಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್​ ದೂರು ಸಲ್ಲಿಸಿದ್ದರು. ಸಭೆಯಲ್ಲಿ ಸಿಇಸಿ ರಾಜ್ಯದಲ್ಲಿ ಚುನಾವಣಾ ಸಿದ್ಧತೆ ಮತ್ತು ಮತದಾರರ ಅಂತಿಮ ಪಟ್ಟಿಯ ಪರಿಶೀಲನೆ ನಡೆಸುವ ವೇಳೆ ದೂರು ನೀಡಿದ್ದರು.

ಟಿಡಿಪಿ, ಜನಸೇನಾ ಮುಖಂಡರು, ಕಾರ್ಯಕರ್ತರ ಮೇಲೆ 6 ರಿಂದ 7 ಸಾವಿರ ಅಕ್ರಮ ಪ್ರಕರಣ ದಾಖಲಾಗಿದ್ದು, ಪುಂಗನೂರು ಪ್ರಕರಣದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಜೈಲಿಗೆ ಹೋಗಿದ್ದಾರೆ. ಚುನಾವಣೆಯಲ್ಲಿ ಯಾರೊಬ್ಬರು ಕೆಲಸ ಮಾಡದಂತೆ ಅಕ್ರಮ ಪ್ರಕರಣಗಳನ್ನು ಹಾಕಲಾಗಿದೆ. ಈ ಬಗ್ಗೆ ಸಿಇಸಿಗೆ ಮಾಹಿತಿ ನೀಡಲಾಗಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಸಿಇಸಿ ಹೇಳಿದೆ. ಅಗತ್ಯ ಬಿದ್ದರೆ ಕೇಂದ್ರ ಪೊಲೀಸ್ ವೀಕ್ಷಕರನ್ನು ಕಳುಹಿಸಿ ವಿಶೇಷ ಸೆಲ್ ಸ್ಥಾಪಿಸಲಾಗುವುದು. ಪ್ರಜಾಪ್ರಭುತ್ವ ರಕ್ಷಣೆಗೆ ನಮ್ಮ ಕೈಲಾದ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ. ಒಂದು ನಕಲಿ ಮತ ಹಾಕುವುದಕ್ಕೆ ಬಿಡುವುದಿಲ್ಲ. ಇಂತಹ ಕೃತ್ಯಗಳು ನಡೆದರೆ ಚುನಾವಣಾ ಆಯೋಗದ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದು ಸಭೆ ಬಳಿಕ ಚಂದ್ರಬಾಬು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ :ಮತದಾರರ ಪಟ್ಟಿಯಲ್ಲಿನ ಅಕ್ರಮ: ಸಿಇಸಿಗೆ ಚಂದ್ರಬಾಬು ನಾಯ್ಡು, ಪವನ್​ ಕಲ್ಯಾಣ್​ ದೂರು

ABOUT THE AUTHOR

...view details