ಕರ್ನಾಟಕ

karnataka

ETV Bharat / bharat

600 ಕೆಜಿ ಸ್ಫೋಟಕ ಬಳಸಿ ಪುಣೆಯ ಚಾಂದಿನಿ ಚೌಕ್ ಹಳೆಯ​ ಸೇತುವೆ ನೆಲಸಮ - Chandni Chowk in Pune

ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿದ್ದ ಮಹಾರಾಷ್ಟ್ರದ ಚಾಂದಿನಿ ಚೌಕ್​ ಸೇತುವೆಯನ್ನು ಸರ್ಕಾರ ಭಾನುವಾರ ಮಧ್ಯರಾತ್ರಿ ಕೆಡವಿ ಹಾಕಿದೆ.

chandni chowk bridge demolish
ಚಾಂದಿನಿ ಚೌಕ್ ಹಳೆಯ​ ಸೇತುವೆ ನೆಲಸಮ

By

Published : Oct 2, 2022, 11:28 AM IST

ಪುಣೆ (ಮಹಾರಾಷ್ಟ್ರ):ಟ್ರಾಫಿಕ್​ ಜಾಮ್​ಗೆ ಕಾರಣವಾಗಿದ್ದ ಹಳೆಯ ಚಾಂದಿನಿ ಚೌಕ್​ ಸೇತುವೆಯನ್ನು ಸ್ಫೋಟಕ ಬಳಸಿ ಕೆಡವಲಾಗಿದೆ. ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ 600 ಕೆ.ಜಿ ಸ್ಫೋಟಕವನ್ನು ಬಳಸಿ ಉಡಾಯಿಸಲಾಗಿದೆ. ಆದರೆ, ಸ್ಫೋಟಿಸಿದರೂ ಸಂಪೂರ್ಣ ಸೇತುವೆ ಏಕಕಾಲಕ್ಕೆ ಬಿದ್ದಿಲ್ಲ.

ದೆಹಲಿಯ ಅವಳಿ ಗೋಪುರಗಳನ್ನು 12 ಸೆಕೆಂಡುಗಳಲ್ಲಿ ಕೆಡವಿದ ಕಂಪನಿಗೆ ಈ ಸೇತುವೆಯನ್ನು ಬೀಳಿಸಲು ಗುತ್ತಿಗೆ ನೀಡಲಾಗಿತ್ತು. ಕಂಪನಿ ಯೋಜಿಸಿದಂತೆ ಇಡೀ ಸೇತುವೆ ಏಕಕಾಲದಲ್ಲಿ ನೆಲಸಮವಾಗಿಲ್ಲ. ಸೇತುವೆಗೆ ಹೆಚ್ಚಿನ ಪ್ರಮಾಣದಲ್ಲಿ ಉಕ್ಕು ಬಳಸಿದ ಕಾರಣ ಅದು ಬಿದ್ದಿಲ್ಲ. ಬಳಿಕ ಜೆಸಿಬಿ, ಡ್ರಿಲ್ಲಿಂಗ್​ ಯಂತ್ರಗಳನ್ನು ಬಳಸಿ ತೆರವು ಮಾಡಲಾಗಿದೆ.

ಕಿರಿದಾದ ಸೇತುವೆಯನ್ನು ದಾಟಲು ವಾಹನಗಳು ನಿಧಾನಗತಿಯಲ್ಲಿ ಸಾಗಬೇಕಾಗಿದ್ದ ಕಾರಣ ಇಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗುತ್ತಿತ್ತು. ಮುಂಬೈನಿಂದ ಸತಾರಾ ಕಡೆಗೆ ಹೋಗುವ ಮತ್ತು ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿರುವುದೇ ಟ್ರಾಫಿಕ್​ಗೆ ಮತ್ತೊಂದು ಕಾರಣವಾಗಿತ್ತು.

ಇದರಿಂದ ಸರ್ಕಾರ ಸೇತುವೆಯನ್ನು ನಿರ್ನಾಮ ಮಾಡಿ ರಸ್ತೆ ಅಗಲೀಕರಣಕ್ಕೆ ಮುಂದಾಗಿದೆ. ಕೆಡವಲು ಯೋಜಿಸಿದ್ದರಿಂದ ಸೇತುವೆಯ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿರ್ಬಂಧಿಸಲಾಯಿತು. ರಾತ್ರಿ 11ರ ನಂತರ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು. ಸೇತುವೆಯನ್ನು ಸ್ಫೋಟಿಸಿದಾಗ ಅದರ ತುಂಡುಗಳು ಅಥವಾ ಧೂಳು ಹಾರದಿರಲಿ ಎಂಬ ಕಾರಣಕ್ಕಾಗಿ ಎರಡೂ ಬದಿಗಳನ್ನು ದೊಡ್ಡ ಪರದೆಯಿಂದ ಮುಚ್ಚಲಾಯಿತು.

ಸ್ಫೋಟ ಹೊಣೆ ಹೊತ್ತಿದ್ದ ಕಂಪನಿ, 6 ಸೆಕೆಂಡಲ್ಲಿ ಅದನ್ನು ನಿರ್ನಾಮ ಮಾಡುವ ಗುರಿ ಹೊಂದಿತ್ತು. 600 ಕೆಜಿ ಸ್ಫೋಟಕ ಬಳಸಿ ಸಿಡಿಸಿದರೂ ಸೇತುವೆಯ ತುದಿಗಳು ಹಾಗೆಯೇ ಉಳಿದುಕೊಂಡಿದ್ದವು. ಅಧಿಕ ಉಕ್ಕು ಮತ್ತು ದೃಢತೆಯ ಕಾರಣ ಸೇತುವೆ ಸಂಪೂರ್ಣ ಏಕಕಾಲಕ್ಕೆ ಕುಸಿದು ಬೀಳಲಿಲ್ಲ. ಬೆಳಗ್ಗೆ ಹೊತ್ತಿಗಾಗಲೇ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದ್ದ ಕಾರಣ ಪೊಕ್ಲೆನ್, ಜೆಸಿಬಿ, ಡ್ರಿಲ್ಲಿಂಗ್​ ಮಷಿನ್​ ಬಳಸಿ ಸೇತುವೆಯನ್ನು ಕೆಡವಲಾಯಿತು.

16 ಅಗೆಯುವ ಯಂತ್ರಗಳು, ನಾಲ್ಕು ಬುಲ್ಡೋಜರ್‌ಗಳು, ನಾಲ್ಕು ಜೆಸಿಬಿಗಳು, 30 ಟಿಪ್ಪರ್‌ಗಳು, 2 ಡ್ರಿಲ್ಲಿಂಗ್ ಯಂತ್ರಗಳು, 2 ಅಗ್ನಿಶಾಮಕ ಯಂತ್ರಗಳು, 3 ಆಂಬ್ಯುಲೆನ್ಸ್‌ಗಳು, 2 ನೀರಿನ ಟ್ಯಾಂಕರ್‌ಗಳು, ಸುಮಾರು 210 ಕಾರ್ಮಿಕರು ಶ್ರಮಿಸಿದರು.

ಓದಿ:600ಕೆಜಿಯ ಸ್ಫೋಟಕ ಬಳಿಸಿ 6 ಸೆಕೆಂಡ್​ನಲ್ಲಿ​​ ಚಾಂದಿನಿ ಚೌಕ್​ ಸೇತುವೆ ಉಡೀಸ್​!

ABOUT THE AUTHOR

...view details