ನವದೆಹಲಿ: ದೇಶದಲ್ಲಿನ ಸ್ಮಾರಕಗಳು ಮತ್ತು ಸ್ಥಳಗಳಲ್ಲಿ ಹೆಚ್ಚಿನವು ಮೊಘಲ್ ಹಾಗೂ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಾಕ್ಷಿಯಾಗಿದೆ. 1857ರ ಕ್ರಾಂತಿಯಿಂದ ಸ್ವಾತಂತ್ರ್ಯ ಹೋರಾಟದವರೆಗೆ ಈ ಸ್ಮಾರಕಗಳು ಮತ್ತು ಪ್ರದೇಶಗಳು ದೈನಂದಿನ ಜೀವನದ ಭಾಗವಾಗಿಯೇ ಇದ್ದವು. ಅಂತಹ ಸ್ಥಳಗಳ ಪೈಕಿ ದೆಹಲಿಯ ಚಾಂದಿನಿ ಚೌಕ್ ಕೂಡ ಒಂದು.
ಚಾಂದಿನಿ ಚೌಕ್ ರಾಷ್ಟ್ರ ರಾಜಧಾನಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ. ಏಕೆಂದರೆ ಸ್ಮಾರಕ ಎಷ್ಟೋ ಆಡಳಿತಗಾರರಿಗೆ ಸಾಕ್ಷಿಯಾಗಿದೆ. ಆದರೆ, ಇಂದಿಗೂ ತನ್ನ ಹೊಳಹು ಕಳೆದುಕೊಂಡಿಲ್ಲ. ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಪುತ್ರಿ ಜಹಾನಾರಾ 17ನೇ ಶತಮಾನದಲ್ಲಿ ಹಳೆ ದೆಹಲಿಯಲ್ಲಿ ಚಾಂದಿನಿ ಚೌಕ್ ಬಜಾರ್ ಸ್ಥಾಪಿಸಿದರು. ಮೊದಲು ಷಹಜಹಾನಾಬಾದ್ ಎಂದು ಕರೆಯಲಾಯಿತು. ನಂತರ ಬಜಾರ್ ಸುತ್ತಲಿನ ಸಂಪೂರ್ಣ ಪ್ರದೇಶವನ್ನು ಚಾಂದಿನಿ ಚೌಕ್ ಎಂದು ಕರೆಯಲಾಯಿತು ಎಂದು ಇತಿಹಾಸಕಾರರಾದ ಸ್ವಪ್ನಾ ಲಿಡ್ಲ್ ಹೇಳುತ್ತಾರೆ.
1857ರ ದಂಗೆಯ ನಂತರ ಬ್ರಿಟಿಷರು ಕೆಲವು ಕಟ್ಟಡಗಳನ್ನು ಕೆಡವಿದ್ದರೂ ಟೌನ್ ಹಾಲ್ ಹಾಗೂ ಘಂಟಾಘರ್‌ನಂತಹ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಜಹನಾರಾ ಬೇಗಂ ಸ್ವತಃ ಚಾಂದಿನಿ ಚೌಕ್‌ನಲ್ಲಿ ಅಂಗಡಿಗಳು ಮತ್ತು ವಿಶ್ರಾಂತಿ ಸ್ಥಳ (ಸಾರೈ) ನಿರ್ಮಿಸಲು ಆದೇಶಿಸಿದ್ದರು. ಮೊಘಲ್ ಸಾಮ್ರಾಜ್ಯದ ರಾಜಧಾನಿಯನ್ನು ಬದಲಾಯಿಸುವ ಷಹಜಹಾನ್ ಅವರ ಕನಸು 1649 ರಲ್ಲಿ ನೆರವೇರಿತು. ಅದರ 1 ವರ್ಷದ ನಂತರ ಚಾಂದಿನಿ ಚೌಕ್ ಅಸ್ತಿತ್ವಕ್ಕೆ ಬಂತು ಎಂದು ಇತಿಹಾಸಕಾರರು ವಿವರಿಸುತ್ತಾರೆ.