ಚಂಡೀಗಢ: ವಿದ್ಯಾರ್ಥಿನಿಯೋರ್ವಳು ತನ್ನ ಹಾಸ್ಟೆಲ್ ಸಹಪಾಠಿ ಸ್ನಾನ ಮಾಡುತ್ತಿರುವ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಇತರರ ಜೊತೆ ಹಂಚಿಕೊಂಡಿದ್ದಾಳೆ ಎನ್ನಲಾದ ಪ್ರಕರಣವೊಂದು ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸೋನು ಸೂದ್ ಪ್ರತಿಕ್ರಿಯಿಸಿ, ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
'ಚಂಡೀಗಡ ವಿಶ್ವವಿದ್ಯಾಲಯದ ಘಟನೆ ತುಂಬಾ ದುರದೃಷ್ಟಕರ. ಈ ಸಮಯದಲ್ಲಿ ನಾವು ನಮ್ಮ ಸಹೋದರಿಯರೊಂದಿಗೆ ನಿಲ್ಲಬೇಕು. ಇದು ಸಮಾಜಕ್ಕೆ ಮಾದರಿಯಾಗಬೇಕಾದ ಸಮಯ, ನಮಗೆ ಪರೀಕ್ಷಾ ಸಮಯ. ಸಹೋದರಿಯರಿಗೆ ಸಂಬಂಧಿಸಿದ ಯಾವುದೇ ವಿಡಿಯೋಗಳನ್ನು ಎಲ್ಲಿಯೂ ಶೇರ್ ಮಾಡಬೇಡಿ. ಜವಾಬ್ದಾರಿಯುತವಾಗಿರಿ' ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.