ಚಂಡೀಗಢ :ಯುಟಿ ಪೊಲೀಸ್‌ನ ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ನಕಲಿ ಸಬ್‌ಇನ್‌ಸ್ಪೆಕ್ಟರ್ ಮತ್ತು ಮಹಿಳಾ ಪೇದೆಯನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಹರಿಯಾಣದ ಅಂಬಾಲಾ ಜಿಲ್ಲೆಯ ನಿವಾಸಿ 24 ವರ್ಷದ ತೇಜೇಂದ್ರ ಸಿಂಗ್ ಹಾಗೂ ಮಹಿಳೆಯನ್ನು 25 ವರ್ಷದ ದೇರಾಬಸ್ಸಿ ನಿವಾಸಿ ಎಂದು ಗುರುತಿಸಲಾಗಿದೆ.
ಚಂಡೀಗಢ ಪೊಲೀಸ್‌ನ ಉನ್ನತ ಅಧಿಕಾರಿಗಳ ನಿರ್ದೇಶನದ ಮೇರೆಗೆ ಜಿಲ್ಲಾ ಅಪರಾಧ ವಿಭಾಗದ ಎಎಸ್‌ಐ ರಾಹುಲ್ ಭಾರದ್ವಾಜ್ ಅವರು ತಮ್ಮ ತಂಡದೊಂದಿಗೆ ಪೊಲೀಸ್ ಠಾಣೆ 49ರ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಚಂಡೀಗಢ ನಂಬರ್‌ನ ಟೊಯಿಟಾ ಕರೋಲಾ ವಾಹನದಲ್ಲಿ ಇಬ್ಬರು ಶಂಕಿತರು ಪೊಲೀಸ್ ಸಮವಸ್ತ್ರದಲ್ಲಿರುವ ಮಾಹಿತಿ ಸಿಕ್ಕಿತ್ತು.
ಈ ಮಾಹಿತಿ ಆಧಾರದಲ್ಲಿ ಪೊಲೀಸರು ತಕ್ಷಣವೇ ಸೆಕ್ಟರ್ 49ರ ಗುರುದ್ವಾರ ಸಾಹಿಬ್ ಬಳಿ ನಾಕಾ ಹಾಕಿ ಬರುವ ಎಲ್ಲಾ ವಾಹನಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ. ಪರಿಶೀಲನೆ ವೇಳೆ ಟೊಯೊಟಾ ಕೊರೊಲಾ ವಾಹನವೊಂದರಲ್ಲಿ ಚಂಡೀಗಢ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಮವಸ್ತ್ರ ಧರಿಸಿದ್ದ ಚಾಲಕ ಹಾಗೂ ಮಕ್ಕದಲ್ಲೇ ಪೇದೆಯ ಸಮವಸ್ತ್ರ ಧರಿಸಿದ್ದ ಮಹಿಳೆ ಸಿಕ್ಕಿಬಿದ್ದಿದ್ದಾರೆ.
ಈ ವೇಳೆ ವಿಚಾರಣೆ ನಡೆಸಿದಾಗ ಆರೋಪಿಗಳು ತಮ್ಮನ್ನು ಚಂಡೀಗಢ ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡಿದ್ದಾರೆ. ಇಬ್ಬರೂ ಆರೋಪಿಗಳು ತಮ್ಮ ಗುರುತಿನ ಚೀಟಿಯನ್ನೂ ತೋರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ಚಂಡೀಗಢ ಪೊಲೀಸರ ಗುರುತಿನ ಚೀಟಿಗೆ ಹೋಲಿಸಿ ನೋಡಿದಾಗ ಮೇಲ್ಕಂಡ ಆರೋಪಿಗಳ ಗುರುತಿನ ಚೀಟಿ ನಕಲಿ ಎಂದು ತಿಳಿದು ಬಂದಿದೆ.
ಇಬ್ಬರೂ ಆರೋಪಿಗಳನ್ನು ಹೆಚ್ಚಿನ ತನಿಖೆಗೊಳಪಡಿಸಿದಾಗ ಚಂಡೀಗಢ ಪೊಲೀಸರ ನಕಲಿ ಗುರುತಿನ ಚೀಟಿಯ ಜೊತೆಗೆ ಇನ್ನೂ 5 ಪೊಲೀಸ್ ಸಿಬ್ಬಂದಿಯ ಗುರುತಿನ ಚೀಟಿಗಳು, ಇನ್ನಷ್ಟು ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆ ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಹೇಳಿಕೆಯ ಪ್ರಕಾರ, ಬಂಧಿತ ಆರೋಪಿಗಳು ಚಂಡೀಗಢ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಮಾಡುವ ಹೆಸರಿನಲ್ಲಿ ಜನರಿಂದ ಎರಡು ಲಕ್ಷ, ನಾಲ್ಕು ಲಕ್ಷ ಮತ್ತು 5 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದರು. ಪೊಲೀಸರು ಅವರಿಂದ ಚಂಡೀಗಢ ಪೊಲೀಸರ ನಕಲಿ ಐಡಿ-ಕಾರ್ಡ್‌ಗಳು, ಚಂಡೀಗಢ ಪೊಲೀಸರ ಲೆಟರ್ ಪ್ಯಾಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಉದ್ಯೋಗಾಕಾಂಕ್ಷಿಗಳಿಗೆ ನಕಲಿ ನೇಮಕಾತಿ ಪತ್ರ ನೀಡುತ್ತಿದ್ದರು ಎಂದರು.
ಇದನ್ನೂ ಓದಿ:ಪ್ರಿಯಕರನಿಗೋಸ್ಕರ ಪತಿಯನ್ನೇ ಕೊಂದ ಪತ್ನಿ; ಮೂರು ತಿಂಗಳ ನಂತರ ಪ್ರಕರಣ ಬೆಳಕಿಗೆ