ಮಂಡಿ (ಚಂಡೀಗಢ):ಭೂಕುಸಿತದ ಹಿನ್ನೆಲೆ ಕಳೆದ ಒಂದು ವಾರದಿಂದ ಚಂಡೀಗಢ- ಮನಾಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು. ತೀವ್ರ ತೊಂದರೆ ಅನುಭವಿಸಿದ್ದ ಚಾಲಕರು ಸದ್ಯ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ವಾರದ ನಂತರ ಚಂಡೀಗಢ - ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ವಾಹನ ಸಂಚಾರ ಆರಂಭವಾಗಿದೆ. ಪ್ರಸ್ತುತ ಏಕಮುಖ ವಾಹನಗಳ ಸಂಚಾರಕ್ಕೆ ಮಾತ್ರ ಪುನಾರಂಭಗೊಂಡಿದೆ. ಗಮನಾರ್ಹವಾಗಿ, ಜುಲೈ 8ರಂದು ಸಂಜೆ 6.30ಕ್ಕೆ ಚಂಡೀಗಢ- ಮನಾಲಿ ರಾಷ್ಟ್ರೀಯ ಹೆದ್ದಾರಿಯು 6 ಮೈಲಿಗಳಷ್ಟು ಭಾರಿ ಭೂಕುಸಿತದಿಂದಾಗಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿತು.
ನೆಮ್ಮದಿಯ ನಿಟ್ಟುಸಿರು ಬಿಟ್ಟ ವಾಹನ ಸವಾರರು:ಇದೇ ಸಮಯದಲ್ಲಿ, ಕಮಂದ್‌ನ ಘೋಡಾ ಫಾರ್ಮ್ ಬಳಿ ಭಾರಿ ಭೂಕುಸಿತದಿಂದಾಗಿ ಪರ್ಯಾಯ ಮಾರ್ಗವಾದ ಕಮಂದ್ ಕತೌಲಾವನ್ನು 3 ದಿನಗಳವರೆಗೆ ಮುಚ್ಚಲಾಗಿತ್ತು. ಇದನ್ನು ಸದ್ಯ ವಾಹನ ಸಂಚಾರಕ್ಕೆ ಒಂದು ಮಾರ್ಗವನ್ನು ತೆರೆಯಲಾಗಿದೆ. ಚಂಡೀಗಢ- ಮನಾಲಿ ರಾಷ್ಟ್ರೀಯ ಹೆದ್ದಾರಿಯ ಪುನಶ್ಚೇತನದೊಂದಿಗೆ, ಮಂಡಿಯಿಂದ ಸುಂದರನಗರದವರೆಗೆ ಸಿಲುಕಿರುವ ನೂರಾರು ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಇದೀಗ ಚಂಡೀಗಢ - ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಮುಖ ಸಂಚಾರವನ್ನು ಮಾತ್ರ ಮರುಆರಂಭಿಸಲಾಗಿದೆ. ಇಲ್ಲಿಂದ ಪರ್ಯಾಯ ಮಾರ್ಗದ ಮೂಲಕ ವಾಹನಗಳು ಸಾಗುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪುನಾರಂಭಕ್ಕೆ ಎನ್‌ಎಚ್‌ಎಐ, ಕಂಪನಿ ಹಾಗೂ ಚತುಷ್ಪಥ ಕಾಮಗಾರಿಯಲ್ಲಿ ತೊಡಗಿದ್ದ ಗುತ್ತಿಗೆದಾರರ ಶ್ರಮ ಫಲ ನೀಡಿದೆ.