ಚಂಡೀಗಢ(ಪಂಜಾಬ್):ಚಂಡೀಗಢದ ವ್ಯಕ್ತಿಯಲ್ಲಿ ಕಂಡು ಬಂದಿದ್ದ ಒಮಿಕ್ರಾನ್ ರೂಪಾಂತರದ ಕೊರೊನಾ ವರದಿ ಇದೀಗ ನೆಗೆಟಿವ್ ಬಂದಿದೆ. ಇದರಿಂದಾಗಿ ಆರೋಗ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ.
ಇಟಲಿಯಿಂದ ಬಂದಿದ್ದ 20 ವರ್ಷದ ಯುವಕನಲ್ಲಿ ಒಮಿಕ್ರಾನ್ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಸೋಂಕು ದೃಢೀಕರಣಕ್ಕೆ ಜಿನೋಮಿಕ್ ಪರೀಕ್ಷೆಗಾಗಿ ಎನ್ಸಿಡಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇಂದು ಸಂಜೆ ತಡವಾಗಿ ಬಂದ ಪರೀಕ್ಷಾ ವರದಿ ನೆಗೆಟಿವ್ ಎಂದು ಬಂದಿದೆ.
ನವೆಂಬರ್ 22ರಂದು ಇಟಲಿಯಿಂದ ಚಂಡೀಗಢಕ್ಕೆ ಬಂದಿದ್ದ ಯುವಕನನ್ನ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಡಿಸೆಂಬರ್ 1ರಂದು ಕೊರೊನಾ ಪರೀಕ್ಷೆ ನಡೆಸಿದಾಗ ವರದಿ ಪಾಸಿಟಿವ್ ಆಗಿತ್ತು. ಬಳಿಕ ಒಮಿಕ್ರಾನ್ ದೃಢೀಕರಣಕ್ಕೆ ಜೀನೋಮಿಕ್ ಪರೀಕ್ಷೆಗೆ ಮಾದರಿ ಕಳುಹಿಸಲಾಗಿತ್ತು.
ಇದನ್ನೂ ಓದಿ: Omicron: ಕೇರಳ, ಆಂಧ್ರ, ಚಂಢಿಗಡದಲ್ಲಿ ಒಮಿಕ್ರಾನ್ ಮೊದಲ ಪ್ರಕರಣ ಪತ್ತೆ.. ಭಾರತದಲ್ಲಿ ಒಟ್ಟು 38 ಹೊಸ ರೂಪಾಂತರಿ ಕೇಸ್
ಡಿ.11ರಂದು ನಡೆಸಿದ ಪರೀಕ್ಷೆಯಲ್ಲಿ ಯುವಕನಲ್ಲಿ ಒಮಿಕ್ರಾನ್ ರೂಪಾಂತರಿ ದೃಢಪಟ್ಟಿತ್ತು. ಇದಾದ ಬಳಿಕ ಇಂದು(ಭಾನುವಾರ) ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿದೆ. ಈ ಮೂಲಕ ಚಂಡೀಗಢಕ್ಕೆ ಒಮಿಕ್ರಾನ್ ರೂಪಾಂತರಿ ಆತಂಕ ಇಲ್ಲವಾಗಿದೆ.