ಚಂಡೀಗಢ (ಹರಿಯಾಣ) :ದೇಶದ ಆಕರ್ಷಕ ಸಿಟಿಗಳಲ್ಲೊಂದಾಗಿರುವ ಚಂಡೀಗಢ ಹಸಿರು ಮತ್ತು ಸೌಂದರ್ಯಕ್ಕೆ ಹೆಸರುವಾಸಿ. ಚಂಡೀಗಢದ ಅಂದಾಜು ಶೇ.45ಕ್ಕಿಂತಲೂ ಹೆಚ್ಚಿನ ಭಾಗ ಅರಣ್ಯದಿಂದ ಆವೃತವಾಗಿದೆ. ಇಲ್ಲಿ ಮರಗಳ ರಕ್ಷಣೆಗೆ ವಿಶೇಷ ಪ್ರಾಮುಖ್ಯತೆ ಇದೆ. ಹಾಗೆಯೇ ಚಂಡೀಗಢದ 31 ಮರಗಳನ್ನು ಪಾರಂಪರಿಕ ಮರಗಳು ಅಂತಲೂ ಘೋಷಿಸಲಾಗಿದೆ.
ಈ ಪಾರಂಪರಿಕ ಮರಗಳ ಪೈಕಿ ಒಂದು ಮರ ಚಂಡೀಗಢದ ಸೆಕ್ಟರ್ 38ರ ಗುರುದ್ವಾರದ ಬಳಿ ಬೆಳೆದು ನಿಂತಿದೆ. ಈ ಆಲದ ಮರ ಸುಮಾರು 300ರಿಂದ 350 ವರ್ಷ ಹಳೆಯದು ಎನ್ನಲಾಗಿದೆ. ರಾಜರ ಆಳ್ವಿಕೆ ಕೊನೆಗೊಂಡು ಚಂಡೀಗಢ ರಚನೆಯಾಗುವವರೆಗೂ ಈ ಗ್ರಾಮ ಅಸ್ತಿತ್ವದಲ್ಲಿತ್ತು.
ಬೃಹತ್ ಮರಗಳ ಉಳಿಸಲು ಪರಿಸರವಾದಿಗಳ ಹೋರಾಟ ಆದರೆ, ನೂತನ ಚಂಡೀಗಢ ಜಾರಿಯಾದ ಬಳಿಕ ಈ ಗ್ರಾಮವನ್ನು ಸೆಕ್ಟರ್ 38ರಲ್ಲಿ ಸೇರಿಸಲಾಗಿದೆ. ಈ ಮರವಿರುವ ಜಾಗಕ್ಕೆ ಸಿಖ್ ಧರ್ಮ ಗುರು ಮತ್ತು ರಾಜಾ ರಂಜಿತ್ ಸಿಂಗ್ ಕೂಡ ಭೇಟಿ ನೀಡಿದ್ದರು ಎಂದು ಇತಿಹಾಸ ಹೇಳುತ್ತದೆ.
ಈ ಮರಗಳಿಗೆ ಪಾರಂಪರಿಕ ವೃಕ್ಷದ ಸ್ಥಾನಮಾನ ನೀಡಲಾಗಿದ್ದರೂ ಸಹ ಸರಿಯಾದ ನಿರ್ವಹಣೆ ಮಾಡಲಾಗುತ್ತಿಲ್ಲ ಅನ್ನೋದು ಪರಿಸರವಾದಿಗಳ ಆರೋಪ. ಈ ಮರಗಳ ಸಂರಕ್ಷಣೆಗೆ ಈಗಿನಿಂದಲೇ ಕೆಲಸ ಆರಂಭವಾಗದಿದ್ದರೆ ಕೆಲವೇ ದಿನದಲ್ಲಿ ಈ ಮರಗಳನ್ನು ನಾವು ಕಳೆದುಕೊಳ್ಳಬಹುದು.
ಈ ಪಾರಂಪರಿಕ ಮರಗಳ ಕೆಳಗೆ ಹಸಿರು ಬೋರ್ಡ್ಗಳನ್ನು ಅಳವಡಿಸಲಾಗಿದೆ. ಈ ಬೋರ್ಡ್ನಲ್ಲಿ ಈ ಮರದ ವಿವರ ಬರೆಯಲಾಗಿದೆ. ಈ ಮರ ಎಷ್ಟು ಹಳೆಯದು, ಯಾಕಾಗಿ ಪಾರಂಪರಿಕ ಸ್ಥಾನಮಾನ ನೀಡಲಾಗಿದೆ ಎಂಬಿತ್ಯಾದಿ ಮಾಹಿತಿ ಅದರಲ್ಲಿದೆ. ಜೊತೆಗೆ ಹಸಿರು ಮಂಡಳಿ ಒಂದು ಕ್ಯೂಆರ್ ಕೋಡ್ ಸಹ ಮುದ್ರಿಸಿದ್ದು, ಆ ಮರದ ಬಗ್ಗೆ ಮಾಹಿತಿ ಬೇಕಾದರೆ ಆ ಕೋಡ್ ಸ್ಕ್ಯಾನ್ ಮಾಡಿದರೆ ಸಾಕು. ಇಡೀ ಮರದ ಇತಿಹಾಸವನ್ನು ನಿಮ್ಮ ಮೊಬೈಲ್ನಲ್ಲೇ ಪಡೆಯಬಹುದು.
ಹಳೆಯ ಮರಗಳಿಗೆ ಪಾರಂಪರಿಕ ಸ್ಥಾನಮಾನ ನೀಡುವ ಮೂಲಕ ಮುಂದಿನ ಪೀಳಿಗೆಗೆ ಅವುಗಳ ಮಹತ್ವ ತಿಳಿಸುವ ಕೆಲಸ ನಡೆಯುತ್ತಿದೆ. ಅರಣ್ಯ ಸಂಪತ್ತು ರಾಜ್ಯದ ದೃಷ್ಟಿಯಿಂದ ಎಷ್ಟು ಮುಖ್ಯವಾಗಿದೆ ಅನ್ನೋದನ್ನು ತಿಳಿಸಲು ಇದೊಂದು ಪ್ರಮುಖ ಮಾರ್ಗ ಅಷ್ಟೇ..