ಕರ್ನಾಟಕ

karnataka

ETV Bharat / bharat

ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್​ಸಿಂಗ್​ ಹೆಸರು.. ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ ಘೋಷಣೆ

ಸೆಪ್ಟೆಂಬರ್​ 28 ಕ್ಕೆ ವೀರಪುತ್ರ ಭಗತ್​ ಸಿಂಗ್​ ಅವರ ಜಯಂತಿ. ಇದಕ್ಕೂ ಮುಂಚಿತವಾಗಿ ಅವರಿಗೆ ಗೌರವ ಸಲ್ಲಿಸಲು ಚಂಡೀಗಢದ ವಿಮಾನ ನಿಲ್ದಾಣವನ್ನು, ಭಗತ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

chandigarh-airport-will-be-named-on-bhagat-singh
ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್​ಸಿಂಗ್​ ಹೆಸರು

By

Published : Sep 25, 2022, 3:27 PM IST

ಹೈದರಾಬಾದ್ ಡೆಸ್ಕ್:ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇಶದ ಹೆಮ್ಮೆಯ ಪುತ್ರ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಭಗತ್​ ಸಿಂಗ್​ ಅವರ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಮಾಸಿಕ ಕಾರ್ಯಕ್ರಮವಾದ "ಮನ್ ಕಿ ಬಾತ್" ರೇಡಿಯೋ ಕಾರ್ಯಕ್ರಮದ 93ನೇ ಸಂಚಿಕೆಯಲ್ಲಿ ಈ ಬಗ್ಗೆ ಮಾತನಾಡಿದ ಪ್ರಧಾನಿ, ಸೆಪ್ಟೆಂಬರ್ 28 ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್​ ಸಿಂಗ್ ಅವರ ಅಮೃತ ಮಹೋತ್ಸವ ನಡೆಯಲಿದೆ. ವೀರಪುತ್ರನ ಸ್ಮರಣೆ ಹಿನ್ನೆಲೆಯ ಚಂಡೀಗಢದ ವಿಮಾನ ನಿಲ್ದಾಣವನ್ನು ಇನ್ನು ಮುಂದೆ ಭಗತ್​ ಸಿಂಗ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡಲಾಗುವುದು ಎಂದರು.

ಈ ಮೊದಲು ಪ್ರಧಾನಿ ಕಚೇರಿ ಕೂಡ ಭಗತ್ ಸಿಂಗ್ ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಲು ಮಹತ್ವದ ನಿರ್ಧಾರವನ್ನು ಘೋಷಿಸಲಾಗುವುದು ಎಂದು ಟ್ವೀಟ್​ ಮಾಡಿತ್ತು.

2ನೇ ವೀರಪುತ್ರನಿಗೆ ನಮನ:ಕೆಲ ದಿನಗಳ ಹಿಂದೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್​ನ ಕರ್ತವ್ಯ ಪಥದಲ್ಲಿ ಸ್ಥಾಪಿಸಲಾಗಿತ್ತು. ಅಲ್ಲಿ ಈ ಮೊದಲು ಕಿಂಗ್​ ಜಾರ್ಜ್ ವಿಗ್ರಹ ನಿಲ್ಲಿಸಲಾಗಿತ್ತು. ಅದೇ ಜಾಗದಲ್ಲಿ ನೇತಾಜಿಯ ಏಕಶಿಲಾ ವಿಗ್ರಹವನ್ನು ಪ್ರತಿಷ್ಠಾಪಿಸಿ ಗೌರವ ಸಲ್ಲಿಸಲಾಗಿತ್ತು. ಇದೀಗ ಭಗತ್​ ಸಿಂಗ್​ ಅವರಿಗೆ ಗೌರವಸೂಚಕವಾಗಿ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡಲಾಗಿದೆ.

ಇದಕ್ಕೂ ಮೊದಲು ಪಂಜಾಬ್‌ನಲ್ಲಿ ಆಡಳಿತದಲ್ಲಿರುವ ಆಪ್​ ಸರ್ಕಾರ ಚಂಡೀಗಢ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಶಹೀದ್ ಭಗತ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡುವ ಕುರಿತು ನಿರ್ಧಾರ ತೆಗೆದುಕೊಂಡಿತ್ತು. ಈ ಕುರಿತಾಗಿ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ನಡುವೆ ಒಪ್ಪಂದ ಕೂಡ ನಡೆದಿತ್ತು.

ಇದನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್​ ಮಾನ್ ಅವರು ಆಗಸ್ಟ್ 20 ರಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಹರಿಯಾಣದ ಉಪಮುಖ್ಯಮಂತ್ರಿ ದುಷ್ಯಂತ್ ಚೌಟಾಲಾ ಅವರನ್ನು ಭೇಟಿ ಮಾಡಿ ಈ ಕುರಿತಾಗಿ ಚರ್ಚಿಸಿದ ಬಗ್ಗೆ ಹೇಳಿಕೊಂಡಿದ್ದರು.

ಓದಿ:ಇಂಡೋ ಫೆಸಿಫಿಕ್​ ರಾಷ್ಟ್ರಗಳ ಅಭಿವೃದ್ಧಿಗೆ ಜಿ 20 ಸದಸ್ಯರೊಂದಿಗೆ ಕೆಲಸ.. ಜೈಶಂಕರ್​

ABOUT THE AUTHOR

...view details