ಬಲೋದ್: ಛತ್ತೀಸ್‌ಗಢದ ಬಲೋದ್ ಜಿಲ್ಲೆಯಲ್ಲಿ ಪುಂಡಾನೆಗಳ ಗುಂಪೊಂದು ಅವಾಂತರ ಸೃಷ್ಟಿಸುತ್ತಿದೆ. ಜಿಲ್ಲಾ ಕೇಂದ್ರದ 2 ಕಿ.ಮೀ ವ್ಯಾಪ್ತಿಯೊಳಗೆ ಆನೆಗಳ ಗುಂಪು ನುಗ್ಗಿದೆ. ಹಾಗಾಗಿ ಜಂಟಿ ಜಿಲ್ಲಾ ಕಚೇರಿ ಅಲರ್ಟ್ ಆಗಿದೆ. ಅಲ್ಲದೇ ಸುಮಾರು ಹನ್ನೇರಡು ಹಳ್ಳಿಗಳಿಗೂ ಎಚ್ಚರಿಕೆ ನೀಡಲಾಗಿದೆ. ಅರಣ್ಯ ಇಲಾಖೆ ತಂಡ ಆನೆಗಳ ಮೇಲೆ ನಿರಂತರ ನಿಗಾ ಇರಿಸಿದೆ. ಆದ್ರೂ ಕೂಡ ಇದೀಗ ಆನೆಗಳ ಹಿಂಡು ಮನೆಯೊಂದನ್ನೂ ಧ್ವಂಸ ಮಾಡಿವೆ. ಇದರಿಂದ ಜನ ಭಯಭೀತರಾಗಿದ್ದಾರೆ.
ಗ್ರಾಮೀಣ ಪ್ರದೇಶಗಳಿಗೆ ಈ ಹಿಂದೆ ಬಲೋದ್ ಆಡಳಿತ ಮತ್ತು ಅರಣ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಆದರೆ ಇದೀಗ ಜಂಟಿ ಜಿಲ್ಲಾಸ್ಪತ್ರೆ ಕೂಡ ಆನೆಗಳ ಪೀಡಿತ ಪ್ರದೇಶಕ್ಕೆ ಸೇರ್ಪಡೆಯಾಗಿದೆ. ಇದರೊಂದಿಗೆ ಗ್ರಾಮತಲ್ಗಾಂವ್, ಆದಮಾಬಾದ್ ವಿಶ್ರಾಂತಿ ಗೃಹ, ಜಂಟಿ ಜಿಲ್ಲಾ ಕಚೇರಿ, ಸಂರಕ್ಷಿತ ಮೀಸಲು ಕೇಂದ್ರ, ಝಲ್ಮಲಾ, ಸಿಯೋನಿ, ಡಿಯೋರ್ತರೈ, ಸೆಮಾರ್ಕೋನಾ, ಆಂಧಿಯಾಟೋಲಾ, ದೇವರಭಟ್, ಗಸ್ತಿತೋಲಾಗಳಲ್ಲೂ ಆನೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾ ಕೇಂದ್ರದಿಂದ 2 ಕಿ.ಮೀ ದೂರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಬಳಿ ಆನೆಗಳ ಗುಂಪು ಓಡಾಡುತ್ತಿದೆ. ಜಲಾಶಯದ ದಡದಲ್ಲಿ ಮೇವು ಹಾಗೂ ನೀರಿನ ಲಭ್ಯತೆ ಇರುವುದರಿಂದ ಆನೆಗಳ ಹಿಂಡು ಇಲ್ಲಿ ಬೀಡು ಬಿಟ್ಟಿವೆ.