ಹೈದರಾಬಾದ್: ಬೆಂಗಳೂರಿನಿಂದ ಹೈದರಾಬಾದ್‌ಗೆ ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿ ಎಂಬ ತೆಲಂಗಾಣ ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ. ರಾಮರಾವ್ ಅವರ ಹೇಳಿಕೆಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಸವಾಲನ್ನು ಸ್ವೀಕಾರ ಮಾಡಿದ್ದಾರೆ.
ಡಿಕೆಶಿ ಹಾಗೂ ಕೆಟಿಆರ್ನಡುವಿನ ಟ್ವೀಟ್ :ನನ್ನ ಸ್ನೇಹಿತರಾದ ಕೆ.ಟಿ. ರಾಮರಾವ್ ಅವರೇ.. ನಾನು ನಿಮ್ಮ ಸವಾಲನ್ನು ಸ್ವೀಕರಿಸುತ್ತೇನೆ. 2023ರ ಅಂತ್ಯದ ವೇಳೆಗೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ನಾವು ಬೆಂಗಳೂರಿನ ಕೀರ್ತಿಯನ್ನು ಹೆಚ್ಚಿಸಿ ಭಾರತದ ಅತ್ಯುತ್ತಮ ನಗರವಾಗಿ ಮರುಸ್ಥಾಪಿಸುತ್ತೇವೆ ಎಂದು ಶಿವಕುಮಾರ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡುರುವ ಕೆಟಿಆರ್, ಡಿಯರ್ ಡಿಕೆ ಶಿವಕುಮಾರ್ ಅಣ್ಣ.. ನನಗೆ ಕರ್ನಾಟಕ ರಾಜಕೀಯದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಯಾರು ಗೆಲ್ಲುತ್ತಾರೆ ಎನ್ನುವುದು ತಿಳಿದಿಲ್ಲ. ಆದರೆ, ನಿಮ್ಮ ಚಾಲೆಂಜ್ ಸ್ವೀಕರಿಸುವೆ. ಬೆಂಗಳೂರು, ಹೈದ್ರಾಬಾದ್ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡಲಿ.. ಯುವಕರಿಗೆ ಉದ್ಯೋಗ, ಉತ್ತಮ ಸೌಹಾರ್ದ ಸಂಬಂಧ ಏರ್ಪಡಲಿ. ಮೂಲಸೌಕರ್ಯ, IT, BT ಕಡೆ ಗಮನ ಇರಲಿ, ಹಲಾಲ್, ಹಿಜಾಬ್ ಕಡೆ ಗಮನಹರಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಇಲ್ಲಿಂದ ಆರಂಭ :ಈ ಹಿಂದೆ ಬೆಂಗಳೂರಿನ ಉದ್ಯಮಿ ರವೀಶ್ ನರೇಶ್ ಅವರು ಕೋರಮಂಗಲದ ಹೆಚ್ಎಸ್ಆರ್ನಲ್ಲಿ (ಭಾರತದ ಸಿಲಿಕಾನ್ ವ್ಯಾಲಿ) ಸ್ಟಾರ್ಟ್‌ಅಪ್‌ಗಳು ಈಗಾಗಲೇ ಶತಕೋಟಿ ಡಾಲರ್ ತೆರಿಗೆಯನ್ನು ಉತ್ಪಾದಿಸುತ್ತಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ನಮ್ಮಲ್ಲಿ ಹದಗೆಟ್ಟ ರಸ್ತೆಗಳು, ಬಹುತೇಕ ದಿನನಿತ್ಯದ ವಿದ್ಯುತ್ ಕಡಿತ, ಕಳಪೆ ಗುಣಮಟ್ಟದ ನೀರು ಸರಬರಾಜು, ಬಳಸಲಾಗದ ಕಾಲುದಾರಿಗಳು ಇವೆ. ಭಾರತದ ಸಿಲಿಕಾನ್ ವ್ಯಾಲಿಗಿಂತ ಅನೇಕ ಗ್ರಾಮೀಣ ಪ್ರದೇಶಗಳು ಈಗ ಉತ್ತಮ ಮೂಲಸೌಕರ್ಯ ಹೊಂದಿವೆ. ಹಾಗೆ ವಿಮಾನ ನಿಲ್ದಾಣಕ್ಕೆ 3 ಗಂಟೆಗಳ ದೂರ ಸಂಚಾರ ದಟ್ಟಣೆಯಲ್ಲೇ ಕ್ರಮಿಸಬೇಕುಎಂದು ಹೇಳಿಕೆ ನೀಡಿದ್ದರು.