ಕರ್ನಾಟಕ

karnataka

By

Published : May 31, 2021, 4:36 PM IST

ETV Bharat / bharat

ಕೊರೊನಾದ ಅಸಮರ್ಪಕ ನಿರ್ವಹಣೆ ಶೇ.97ರಷ್ಟು ಭಾರತೀಯರನ್ನು ಬಡವರನ್ನಾಗಿಸಿದೆ : ರಾಹುಲ್ ಗಾಂಧಿ

ಎರಡನೇ ಅಲೆಯು ಭಾರತದ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಹೆಚ್ಚಾಗಿ ಸಂಬಳ ಪಡೆಯುವ ಉದ್ಯೋಗಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. ಇದಲ್ಲದೆ, ಶೇ.97ರಷ್ಟು ಭಾರತೀಯರ ತಮ್ಮ ಆದಾಯದಲ್ಲೂ ತುಂಬಾ ಇಳಿಕೆ ಕಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ..

centres-inept-handling-of-covid-19-pandemic-made-97-pc-indians-poorer-says-rahul-gandhi
centres-inept-handling-of-covid-19-pandemic-made-97-pc-indians-poorer-says-rahul-gandhi

ನವದೆಹಲಿ: ಕೊರೊನಾ ಎರಡನೇ ಅಲೆ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಸೊಕ್ಕಿನ ನಿರ್ಣಯಗಳಿಂದ ಶೇ. 97 ಪ್ರತಿಶತ ಭಾರತೀಯರು ಬಡತನಕ್ಕೆ ಒಳಗಾಗಿದ್ದಾರೆ ಎಂದು ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹಾಗೆಯೇ, ಕೊರೊನಾ ವೈರಸ್​ನ ವಿವಿಧ ರೂಪಾಂತರಿತವು ಆರ್ಥಿಕ ದಿವಾಳಿತನಕ್ಕೆ 2ನೇ ಕಾರಣವಾಗಿದೆ ಎಂದು ಇದೇ ವೇಳೆ ಅವರು ಉಲ್ಲೇಖಿಸಿದ್ದಾರೆ. ಎರಡನೇ ಅಲೆಯನ್ನು ನಿಭಾಯಿಸಲು ದೇಶದ ವಿವಿಧ ಭಾಗಗಳಲ್ಲಿ ಲಾಕ್‌ಡೌನ್‌ಗಳನ್ನು ಹೇರಲಾಯಿತು.

ಇದರಿಂದ ಶೇ.97ರಷ್ಟು ಭಾರತೀಯರನ್ನು ಬಡವರನ್ನಾಗಿ ಮಾಡಲಾಗಿದೆ ಎಂದು ವರದಿಯೊಂದನ್ನು ಹಂಚಿಕೊಂಡಿದ್ದಾರೆ. "ಒಬ್ಬ ವ್ಯಕ್ತಿ ಮತ್ತು ಅವನ ದುರಹಂಕಾರ + ಒಂದು ವೈರಸ್ ಮತ್ತು ಅದರ ಅಲೆಗಳು " ಎಂದು ಟ್ವೀಟ್​ ಮಾಡಿ ಪ್ರಧಾನಿ ಮೋದಿ ಹಾಗೂ ಅವರ ನಿರ್ಧಾರಗಳನ್ನು ಖಂಡಿಸಿದ್ದಾರೆ.

ರಾಹುಲ್ ಅವರು ಹಂಚಿಕೊಂಡ ವರದಿಯ ಪ್ರಕಾರ, ಎರಡನೇ ಅಲೆಯು ಭಾರತದ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತಿದೆ. ಭಾರತದಲ್ಲಿ ಹೆಚ್ಚಾಗಿ ಸಂಬಳ ಪಡೆಯುವ ಉದ್ಯೋಗಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. ಇದಲ್ಲದೆ, ಶೇ.97ರಷ್ಟು ಭಾರತೀಯರ ತಮ್ಮ ಆದಾಯದಲ್ಲೂ ತುಂಬಾ ಇಳಿಕೆ ಕಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ)ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ವ್ಯಾಸ್ ಅವರ ಹೇಳಿಕೆ ಉಲ್ಲೇಖಿಸಿ, ಆದಾಯದ ದೃಷ್ಟಿಯಿಂದ (ಒಂದು ವರ್ಷದ ಹಿಂದೆ) ಹೋಲಿಸಿದರೆ ಭಾರತದ ಜನಸಂಖ್ಯೆಯ ಶೇ.97ಕ್ಕಿಂತಲೂ ಹೆಚ್ಚು ಜನರು ಬಡವರಾಗಿದ್ದಾರೆ ಎಂದು ಹೇಳಿದ್ದಾರೆ.

ABOUT THE AUTHOR

...view details