ಕರ್ನಾಟಕ

karnataka

ETV Bharat / bharat

ಒಟಿಟಿ ನಿಯಂತ್ರಣಕ್ಕೆ ಕ್ರಮ: ಕೇಂದ್ರ ಸರ್ಕಾರದಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ರಿಲೀಸ್​

ಒಟಿಟಿ(ಓವರ್​-ದಿ-ಟಾಪ್​)ಯಲ್ಲಿ ಪ್ರಸಾರಗೊಳ್ಳುತ್ತಿರುವ ಕೆಲವೊಂದು ದೃಶ್ಯಗಳ ಬಗ್ಗೆ ಆಕ್ಷೇಪಾರ್ಹ ಕೇಳಿ ಬರುತ್ತಿರುವ ಕಾರಣ ಕೇಂದ್ರ ಸರ್ಕಾರ ಇದೀಗ ಕಟ್ಟುನಿಟ್ಟಿನ ಮಾರ್ಗಸೂಚಿ ರಿಲೀಸ್ ಮಾಡಿದೆ.

Union Minister Prakash Javadekar
Union Minister Prakash Javadekar

By

Published : Feb 25, 2021, 5:55 PM IST

ನವದೆಹಲಿ:ಸಾಮಾಜಿಕ ಜಾಲತಾಣ, ಒಟಿಟಿ ಹಾಗೂ ವೆಬ್​ಸೈಟ್​ಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇಂದು ಮಹತ್ವದ ಮಾರ್ಗಸೂಚಿ ಹೊರಡಿಸಿದ್ದು, ಇದರ ಬಗ್ಗೆ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಪ್ರಮುಖವಾಗಿ ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಬಿಡುಗಡೆಯಾಗುತ್ತಿರುವ ಸರಣಿ ಚಿತ್ರಗಳ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದು, ಇದರ ಬಗ್ಗೆ ಮಹತ್ವದ ಮಾರ್ಗಸೂಚಿ ಹೊರಬಿದ್ದಿದೆ.

ಒಟಿಟಿ ಬಗ್ಗೆ ಪ್ರಕಾಶ್ ಜಾವಡೇಕರ್ ಮಾಹಿತಿ

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳ ದುರಪಯೋಗವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವರಾದ ರವಿಶಂಕರ್‌ ಪ್ರಸಾದ್ ಮತ್ತು ಪ್ರಕಾಶ್‌ ಜಾವಡೇಕರ್‌ ಮಹತ್ವದ ಮಾರ್ಗಸೂಚಿ ರಿಲೀಸ್ ಮಾಡಿದ್ದಾರೆ.

ಇದನ್ನೂ ಓದಿ: ಸೋಷಿಯಲ್​ ಮೀಡಿಯಾಕ್ಕೆ ಮಾರ್ಗಸೂಚಿ ಮೂಲಕ ಕಡಿವಾಣ ಹಾಕಿದ ಕೇಂದ್ರ ಸರ್ಕಾರ

ಹೊಸ ಮಾರ್ಗಸೂಚಿ ಈ ಕೆಳಗಿನಂತಿವೆ

  • ಫೇಸ್​ಬುಕ್​, ಟ್ವೀಟರ್​ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿನ ಆಕ್ಷೇಪಾರ್ಹ ವಿಷಯ ತೆಗೆದು ಹಾಕುವುದು
  • ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ದುರುಪಯೋಗ, ನಕಲಿ ಸುದ್ದಿಗಳ ಹರಡುವಿಕೆ, ಇತರ ಆತಂಕಗಳ ನಡುವೆ ಈ ಹೊಸ ನಿಯಮ
  • ಒಟಿಟಿ ವೇದಿಕೆ ನ್ಯಾಯದಾನ ಪ್ರಕ್ರಿಯೆ ವ್ಯಾಪ್ತಿಯೊಳಗೆ ತರಲು ನಿರ್ಧಾರ
  • ಲೈಂಗಿಕ ಕಿರುಕುಳ, ಮಹಿಳೆಯ ಅಂಗಾಂಗ ಪ್ರದರ್ಶನ ಅಥವಾ ಅಶ್ಲೀಲ ವಿಡಿಯೋ ಇದ್ದರೆ 24 ಗಂಟೆಯೊಳಗೆ ಡಿಲೀಟ್​
  • ಸರ್ಕಾರದ ನಿಯಮ ಪಾಲನೆ ಮಾಡಲು ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಅಧಿಕಾರಿ ನೇಮಕ ಮಾಡಿಕೊಂಡಿರಬೇಕು ಹಾಗೂ ಅವರು ಭಾರತದಲ್ಲಿ ಇರಬೇಕು. ಮೂರು ತಿಂಗಳ ಒಳಗೆ ಕಾನೂನು ಅನುಷ್ಠಾನ
  • ವ್ಯಕ್ತಿಗಳ ಮಾನಹಾನಿ, ಆಕ್ಷೇಪಾರ್ಹ ವಿಡಿಯೋ, ಜನಾಂಗೀಯ ನಿಂದನೆ, ಅಪ್ರಾಪ್ತರಿಗೆ ಹಾನಿಕಾರಕವಾಗಿರುವ, ದೇಶದ ಭದ್ರತೆ-ಸಾರ್ವಭೌಮತೆ-ಏಕತೆಗೆ ಧಕ್ಕೆ ತರುವ ಹಾಗೂ ಬೇರೆ ದೇಶಗಳೊಂದಿಗೆ ಭಾರತದ ಸಂಬಂಧಕ್ಕೆ ಧಕ್ಕೆ ತರುವ ವಿಷಯ ಪ್ರಕಟ ಮಾಡುವಂತಿಲ್ಲ.
  • ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಸಾರ್ವಜನಿಕರು ಆನ್​ಲೈನ್​​ ದೂರು ಸಲ್ಲಿಕೆ ಮಾಡಲು ವ್ಯವಸ್ಥೆ
  • ಒಟಿಟಿ ಪ್ಲಾಟ್‌ಫಾರ್ಮ್‌ಗಾಗಿ ಸುಪ್ರೀಂ ಕೋರ್ಟ್‌ ಅಥವಾ ಹೈ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವಯಂ ನಿಯಂತ್ರಣ ವ್ಯವಸ್ಥೆ ಅಳವಡಿಕೆ
  • ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗಾಗಿ ಮೂರು ಹಂತದ ವ್ಯವಸ್ಥೆ ಜಾರಿ, ನೋಂದಣಿ ಕಡ್ಡಾಯವಲ್ಲ, ಆದರೆ ಮಾಹಿತಿ ನೀಡುವುದು ಅವಶ್ಯ
  • ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುವ ಕಂಟೆಂಟ್‌ ಪ್ರೇಕ್ಷಕರ ವಯಸ್ಸಿಗೆ ಅನುಗುಣವಾಗಿ 5 ವಿಭಾಗಗಳಲ್ಲಿ ವಿಂಗಡನೆ
  • ಯು (ಯೂನಿವರ್ಸಲ್‌), ಯು/ಎ 7+, ಯು/ಎ 13+, ಯು/ಎ 16+ ಮತ್ತು ಎ (ವಯಸ್ಕರಿಗೆ ಮಾತ್ರ) ಎಂದು ಸಿನಿಮಾ & ವೆಬ್‌ ಸಿರೀಸ್‌ಗಳನ್ನು ವಿಭಾಗಿಸಬೇಕು. ಯು/ಎ 13+ ಮೇಲ್ಪಟ್ಟ ಎಲ್ಲ ಕಂಟೆಂಟ್‌ಗಳಿಗೆ ಪೇರೆಂಟೆಲ್‌ ಲಾಕ್‌ ಅಳವಡಿಸುವಂತೆ ಸೂಚನೆ

ABOUT THE AUTHOR

...view details