ಕರ್ನಾಟಕ

karnataka

ETV Bharat / bharat

ಕೋವಿಡ್​ ಸೋಂಕು ಸಂಖ್ಯೆ ಹೆಚ್ಚಳ: ಕರ್ನಾಟಕ ಸೇರಿ ಪಕ್ಕದ ಐದು ರಾಜ್ಯಗಳಿಗೂ ಕೇಂದ್ರದ ಪತ್ರ!

ಕೇಂದ್ರ ಸರ್ಕಾರ ಕರ್ನಾಟಕದೊಂದಿಗೆ ಪಕ್ಕದ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳಕ್ಕೆ ಪತ್ರ ಬರೆದಿದೆ. ಆತಂಕಕಾರಿ ಎಂದರೆ ಈ ನಾಲ್ಕು ರಾಜ್ಯಗಳೊಂದಿಗೂ ಕರ್ನಾಟಕ ಗಡಿ ಹಂಚಿಕೊಂಡಿದೆ.

Centre writes to 5 states over rising Covid cases
ಕೋವಿಡ್​ ಸೋಂಕು ಸಂಖ್ಯೆ ಹೆಚ್ಚಳ: ಕರ್ನಾಟಕ ಸೇರಿ ಪಕ್ಕದ ಐದು ರಾಜ್ಯಗಳಿಗೂ ಕೇಂದ್ರದ ಪತ್ರ

By

Published : Jun 3, 2022, 9:29 PM IST

ನವದೆಹಲಿ:ಕಳೆದ ಕೆಲ ದಿನಗಳಿಂದ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರ ಶುಕ್ರವಾರ ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ಪತ್ರ ಬರೆದಿದೆ. ಕೋವಿಡ್​​ ಸೋಂಕಿನ ಹರಡುವಿಕೆ ನಿಯಂತ್ರಣದ ಮೇಲೆ ನಿಗಾ ಮುಂದುವರೆಸಲು ಕೇಂದ್ರ ಸರ್ಕಾರ ಸೂಚಿಸಿದೆ.

ಕಳೆದ 3 ತಿಂಗಳಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಮತ್ತು ಗಮನಾರ್ಹ ಇಳಿಕೆ ಕಂಡುಬಂದಿದೆ. ಆದಾಗ್ಯೂ, ಕಳೆದ ಒಂದು ವಾರದಿಂದ 15,708 ಪ್ರಕರಣಗಳು ವರದಿಯಾಗಿದ್ದು, ಹೊಸ ಪ್ರಕರಣಗಳ ಸಂಖ್ಯೆ ಸ್ವಲ್ಪ ಏರಿಕೆಯಾಗಿದೆ. ಅಲ್ಲದೇ, ಮೇ 27ಕ್ಕೆ ವಾರದ ಪಾಸಿಟಿವಿಟಿ ದರವು ಶೇ.0.52ರಷ್ಟು ಇತ್ತು. ಜೂನ್​ 3ಕ್ಕೆ ಇದರ ಪಾಸಿಟಿವಿಟಿ ಶೇ.0.73ಕ್ಕೆ ಹೆಚ್ಚಳವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವಲ್ಲಿ ಕೆಲ ರಾಜ್ಯಗಳಲ್ಲಿನ ಸೋಂಕಿನ ಪ್ರಮಾಣ ಏರಿಕೆಯೇ ಕಾರಣವಾಗಿದೆ. ಆದ್ದರಿಂದ ಸಾಂಕ್ರಾಮಿಕವನ್ನು ತ್ವರಿತ ಮತ್ತು ಪರಿಣಾಮಕಾರಿ ನಿರ್ವಹಣೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಈ ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಪ್ರತ್ಯೇಕ ಪತ್ರ ಬರೆದು ಸಲಹೆ ನೀಡಿದೆ.

ಕೇಂದ್ರ ಸರ್ಕಾರ ಕರ್ನಾಟಕದೊಂದಿಗೆ ಪಕ್ಕದ ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳಕ್ಕೆ ಪತ್ರ ಬರೆದಿದೆ. ಆತಂಕಕಾರಿ ಎಂದರೆ ಈ ನಾಲ್ಕು ರಾಜ್ಯಗಳೊಂದಿಗೂ ಕರ್ನಾಟಕ ಗಡಿ ಹಂಚಿಕೊಂಡಿದೆ.

ಇದನ್ನೂ ಓದಿ:ಕೋವಿಡ್​ ಸಾಂಕ್ರಾಮಿಕ ಪೂರ್ವಕ್ಕಿಂತಲೂ ದೇಶದ ಜಿಡಿಪಿ ಹೆಚ್ಚಳ!

ABOUT THE AUTHOR

...view details