ಕರ್ನಾಟಕ

karnataka

ETV Bharat / bharat

ಮಂಕಿಪಾಕ್ಸ್​ ಕಾಯಿಲೆ ತಡೆಗೆ ಕೇಂದ್ರದಿಂದ ರಾಜ್ಯಗಳಿಗೆ ಮಾರ್ಗಸೂಚಿ ಬಿಡುಗಡೆ - monkeypox guideline

ಮಂಕಿಪಾಕ್ಸ್​ ಕಾಯಿಲೆ ಕುರಿತು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

monkeypox
ಮಂಕಿಪಾಕ್ಸ್​ ಕಾಯಿಲೆ

By

Published : Jul 15, 2022, 9:38 AM IST

ನವದೆಹಲಿ:ಕೇರಳದಲ್ಲಿ ಮಂಕಿಪಾಕ್ಸ್​ನ ಮೊದಲ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಗಳಿಗೆ ಪತ್ರ ಬರೆದಿದ್ದು, ರೋಗ ನಿಯಂತ್ರಣ ಸಂಬಂಧ ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದೆ.

ಮಂಕಿಪಾಕ್ಸ್ ಕಾಯಿಲೆ ಹಲವು ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಭಾರತದ ಕೆಲವೆಡೆ ರೋಗದ ಲಕ್ಷಣಗಳು ಕಂಡುಬಂದಿದ್ದು ರಾಜ್ಯಗಳ ಗಡಿಗಳಲ್ಲಿ ಆರೋಗ್ಯ ತಪಾಸಣೆ ಮಾಡಬೇಕು. ಕಾಯಿಲೆ ಗುಣಲಕ್ಷಣಗಳು ಕಂಡುಬಂದಲ್ಲಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಸೋಂಕಿತರನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಬೇಕು. ಸೋಂಕಿತ ವ್ಯಕ್ತಿಯ ಸಂಪರ್ಕಿತರನ್ನು ಪತ್ತೆ ಹಚ್ಚಿ, ರೋಗದ ಮಾದರಿಯನ್ನು ಸಂಗ್ರಹಿಸಿ ತಕ್ಷಣ ಪರೀಕ್ಷೆಗೆ ಕಳುಹಿಸಬೇಕು. ಸೋಂಕಿತ ಪ್ರದೇಶಗಳಲ್ಲಿ ಸದಾ ನಿಗಾ ವಹಿಸಲು ಹಾಗೂ ಚಿಕಿತ್ಸೆ ವೇಳೆ ವೈದ್ಯರು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಕೋವಿಡ್ ಬೂಸ್ಟರ್ ಆರಂಭ, ಬಿಜೆಪಿ ಚಿಂತನ ಮಂಥನ ಸೇರಿ ಇಂದಿನ ವಿದ್ಯಮಾನಗಳಿವು

ABOUT THE AUTHOR

...view details