ನವದೆಹಲಿ: ತ್ಯಾಗರಾಜ್ ಕ್ರೀಡಾಂಗಣದಲ್ಲಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ನಂತರ ಕೇಂದ್ರ ಗೃಹ ಸಚಿವಾಲಯವು ಐಎಎಸ್ ಅಧಿಕಾರಿಗಳಾದ ಸಂಜೀವ್ ಖಿರ್ವಾರ್ ಮತ್ತು ಪತ್ನಿ ರಿಂಕು ದುಗ್ಗಾ ಅವರನ್ನು ಕ್ರಮವಾಗಿ ದೆಹಲಿಯಿಂದ ಲಡಾಕ್ ಮತ್ತು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ.
ಆರೋಪವೇನು?:ನಾಯಿ ಜೊತೆ ಐಎಎಸ್ ಅಧಿಕಾರಿಗಳಿಬ್ಬರು ವಾಕಿಂಗ್ ಮಾಡಲು ತರಬೇತಿ ಪಡೆಯುತ್ತಿದ್ದ ಅಥ್ಲಿಟ್ಗಳನ್ನೇ ಮೈದಾನದಿಂದ ಪ್ಯಾಕಪ್ ಮಾಡಿಸಿ ಹೊರಕಳುಹಿಸಿದ್ದರು. ಫ್ಲಡ್‌ಲೈಟ್ಸ್ ಮೂಲಕ ಕ್ರೀಡಾಪಟುಗಳಿಗೆ ರಾತ್ರಿ ವೇಳೆಯೂ ತರಬೇತಿ ನೀಡಲಾಗುತ್ತಿತ್ತು. ಆದರೆ ಈ ಅಧಿಕಾರಿಗಳು ತಮ್ಮ ನಾಯಿಯ ಜೊತೆ ಟರ್ಫ್ ಮೇಲೆ ವಾಕಿಂಗ್ ಮಾಡುವ ಸಲುವಾಗಿ ಕ್ರೀಡಾಪಟುಗಳನ್ನೇ ಮನೆಗೆ ಕಳುಹಿಸುತ್ತಿದ್ದರು.! ಕಳೆದ ಕೆಲವು ತಿಂಗಳುಗಳಿಂದ ದೆಹಲಿ ಸರ್ಕಾರ ವತಿಯಿಂದ ತ್ಯಾಗರಾಜ ಸ್ಟೇಡಿಯಂನಲ್ಲಿ ಅಥ್ಲೀಟ್ಗಳು ಹಾಗೂ ಕೋಚ್ಗಳಿಗೆ ತರಬೇತಿ ನೀಡಲಾಗುತ್ತಿದೆ.