ಕರ್ನಾಟಕ

karnataka

ETV Bharat / bharat

ನೋಟಿಸ್​ಗೆ ಬಂಡೋಪಾಧ್ಯಾಯ ಉತ್ತರ: ಪರಿಶೀಲಿಸಿ ಕೇಂದ್ರದಿಂದ ಕ್ರಮ ಸಾಧ್ಯತೆ - ನೋಟಿಸ್​ಗೆ ಬಂಡೋಪಾಧ್ಯಾಯ ಉತ್ತರ

ಕೇಂದ್ರ ಕಳುಹಿಸಿದ ಶೋಕಾಸ್ ನೋಟಿಸ್‌ಗೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ ಉತ್ತರಸಿದ್ದಾರೆ. ಕೇಂದ್ರವು ಸಹ ಇದನ್ನು ಪರಿಶೀಲಿಸುತ್ತಿದ್ದು, ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂಬ ಮಾಹಿತಿ ಇದೆ. ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿ ಕೇಂದ್ರ ಸರ್ಕಾರ ಬಂಡೋಪಾಧ್ಯಾಯರಿಗೆ ಶೋಕಾಸ್ ನೋಟಿಸ್ ನೀಡಿತ್ತು.

Alapan Bandyopadhyay replies to show-cause notice
ನೋಟಿಸ್​ಗೆ ಬಂಡೋಪಾಧ್ಯಾಯ ಉತ್ತ

By

Published : Jun 4, 2021, 3:34 PM IST

ನವದೆಹಲಿ: ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡ್ಯೋಪಾಧ್ಯಾಯಗೆ ಶೋಕಾಸ್ ನೋಟಿಸ್‌ ಉತ್ತರವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

"ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡ್ಯೋಪಾಧ್ಯಾಯ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಕ್ಷಿಪ್ತ ಮಾಹಿತಿ ನೀಡಬೇಕಾಗಿತ್ತು. ಆದರೆ, ಪ್ರಧಾನ ಮಂತ್ರಿ ಬ್ರೀಫಿಂಗ್‌ಗೆ ಬಂದಾಗ ಅವರು ಹಾಜರಿರಲಿಲ್ಲ. ಪ್ರಧಾನಿ ಮುಂತಾದವರು ಸಂಪರ್ಕಿಸಿದ ನಂತರ ಸಭೆಗೆ ತಡವಾಗಿ ತೆರಳಿದ್ದರು. ಕೇಂದ್ರ ಸರ್ಕಾರದ ನಿರ್ದೇಶನದಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ವರದಿ ಸಲ್ಲಿಸಲು ವಿಫಲವಾದ ಕಾರಣ ಸೋಮವಾರ ಅಲಪನ್ ಬಂಡೋಪಾಧ್ಯಾಯಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.

ಕೇಂದ್ರ ಸರ್ಕಾರ ಮೇ 28 ರಂದು ಬಂಡೋಪಾಧ್ಯಾಯ ಕೇಂದ್ರ ಸೇವೆಗೆ ಕರೆಸಿಕೊಳ್ಳಲು ತಕ್ಷಣದಿಂದ ಜಾರಿಗೆ ಬರುವಂತೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿತ್ತು. ಬಂಡ್ಯೋಪಾಧ್ಯಾಯರನ್ನು ವಾಪಾಸ್ ಕರೆಸಿಕೊಳ್ಳುವ ಕೇಂದ್ರ ಸರ್ಕಾರದ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಬ್ಯಾನರ್ಜಿ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದರು. ನಂತರ ಸೋಮವಾರ, ಬಂಡೋಪಾಧ್ಯಾಯ ಸೇವೆಯಿಂದ ನಿವೃತ್ತರಾಗಿದ್ದಾರೆ. ದೆಹಲಿಗೆ ಬರುವುದಿಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ಮುಖ್ಯ ಸಲಹೆಗಾರರಾಗಿದ್ದಾರೆ ಎಂದಿದ್ದರು.

ಬೀಮ್ಸ್​​ ಆಡಳಿತ ಅಧಿಕಾರಿಯಾಗಿ ವಿಭಾಗೀಯ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾ ಬಿಸ್ವಾಸ್ ನೇಮಕ

ABOUT THE AUTHOR

...view details