ಕರ್ನಾಟಕ

karnataka

ETV Bharat / bharat

ರೈತರಿಗೆ ಬಂಪರ್​​: ರಸಗೊಬ್ಬರಕ್ಕೆ 1.10 ಲಕ್ಷ ಕೋಟಿ ಹೆಚ್ಚುವರಿ ಸಬ್ಸಿಡಿ, ಸಿಮೆಂಟ್ ದರ ಇಳಿಸಲು ನಿರ್ಧಾರ - ರಸಗೊಬ್ಬರ ಸಬ್ಸಿಡಿ ಏರಿಕೆ

ರೈತರಿಗೆ ಗುಡ್​ನ್ಯೂಸ್ ನೀಡಿರುವ ಕೇಂದ್ರ ಸರ್ಕಾರ ರಸಗೊಬ್ಬರದ ಮೇಲೆ 1.10 ಲಕ್ಷ ಕೋಟಿ ಹೆಚ್ಚುವರಿ ಸಬ್ಸಿಡಿ ಘೋಷಣೆ ಮಾಡಿದೆ.

Government rise fertiliser subsidy
Government rise fertiliser subsidy

By

Published : May 21, 2022, 8:03 PM IST

ನವದೆಹಲಿ:ದೇಶದಲ್ಲಿ ಹೆಚ್ಚಾಗುತ್ತಿರುವ ಹಣದುಬ್ಬರ ಹತೋಟಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ. ದಿಢೀರ್ ಬೆಳವಣಿಗೆಯೊಂದರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೈಲದ ಮೇಲಿನ ಅಬಕಾರಿ ಸುಂಕ ಇಳಿಕೆ ಸೇರಿದಂತೆ ಅನೇಕ ಮಹತ್ವದ ಘೋಷಣೆ ಹೊರಹಾಕಿದ್ದಾರೆ. ಇದರಿಂದ ದೇಶದ ಅನ್ನದಾತರಿಗೂ ಶುಭ ಸುದ್ದಿ ಕೊಟ್ಟಿದ್ದಾರೆ.

ರಸಗೊಬ್ಬರಕ್ಕೆ ಹೆಚ್ಚುವರಿ ಸಬ್ಸಿಡಿ ಘೋಷಣೆ ಮಾಡಲಾಗಿದ್ದು, ಬಜೆಟ್​ನಲ್ಲಿ ₹ 1.05 ಲಕ್ಷ ಕೋಟಿ ಸಬ್ಸಿಡಿ ಜೊತೆಗೆ ಇದೀಗ ಹೆಚ್ಚವರಿಯಾಗಿ ₹1.10 ಲಕ್ಷ ಕೋಟಿ ಘೋಷಣೆ ಮಾಡಿದ್ದಾರೆ. ಇದರಿಂದ ರೈತರಿಗೆ ಮತ್ತಷ್ಟು ಲಾಭ ಆಗಲಿದ್ದು, ಕಡಿಮೆ ಬೆಲೆಗೆ ರಸಗೊಬ್ಬರ ಖರೀದಿ ಮಾಡಲು ಪುಷ್ಟಿ ಸಿಕ್ಕಂತಾಗುತ್ತದೆ.

ಇದರ ಜೊತೆಗೆ ಆಮದು ಪ್ಲಾಸ್ಟಿಕ್​​ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಲಾಗಿದ್ದು, ಇದರಿಂದ ಅವುಗಳ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡು ಬರಲಿದೆ. ಉಳಿದಂತೆ ಸಿಮೆಂಟ್​ ದರ ಇಳಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ದೇಶಾದ್ಯಂತ ಸಿಮೆಂಟ್ ಲಭ್ಯತೆ ಸುಧಾರಿಸಲು ಹಾಗೂ ಬೆಲೆ ಇಳಿಕೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಮುಂದಿನ ಕೆಲ ಗಂಟೆಗಳಲ್ಲೇ ಇದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಗುಡ್​ನ್ಯೂಸ್​: ಕೇಂದ್ರದಿಂದ ಅಬಕಾರಿ ಸುಂಕ ಕಡಿತ; ಪೆಟ್ರೋಲ್ 9.5, ಡಿಸೇಲ್ ದರ 7 ರೂ. ಇಳಿಕೆ

ಪ್ರಮುಖವಾಗಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಅಡುಗೆ ಅನಿಲ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಇದೀಗ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಅನಿಲ ಸಿಲಿಂಡರ್ ಬಳಕೆ ಮಾಡುವವರಿಗೂ ಕೇಂದ್ರ ಗುಡ್​ನ್ಯೂಸ್ ನೀಡಿದ್ದು, ಪ್ರತಿ ಅಡುಗೆ ಸಿಲಿಂಡರ್​​ಗೆ 200 ರೂ. ಸಹಾಯಧನ ನೀಡಲು ನಿರ್ಧರಿಸಿದೆ. ಈ ಎಲ್ಲ ನಿರ್ಧಾರಗಳಿಂದ ದೇಶದಲ್ಲಿ ಹೆಚ್ಚಾಗುತ್ತಿರುವ ಹಣದುಬ್ಬರ ಹತೋಟಿಗೆ ತರಲು ಮೊದಲ ಹೆಜ್ಜೆ ಇಟ್ಟಿದೆ.

ABOUT THE AUTHOR

...view details