ನವದೆಹಲಿ:ಕೇಂದ್ರ ಸರ್ಕಾರದಿಂದ ರಾಜ್ಯಗಳ ಪಾಲಿನ ತೆರಿಗೆ ಹಣದ ಕಂತು ರಿಲೀಸ್ ಆಗಿದ್ದು, 28 ರಾಜ್ಯಗಳಿಗೆ ಒಟ್ಟು 95,000 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ಪೈಕಿ, ಕರ್ನಾಟಕಕ್ಕೆ 3,467.62 ಕೋಟಿ ರೂ. ಸಿಕ್ಕಿದೆ.
ಕೇಂದ್ರ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆ ಆಗಿದೆ. ಎರಡು ಕಂತಿನ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಿರುವ ಕಾರಣ ಇಷ್ಟೊಂದು ಹಣ ಬಿಡುಗಡೆಯಾಗಿದೆ. ಕಳೆದ ವಾರ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್ ಸಭೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಗಳಿಗೆ ತೆರಿಗೆ ಹಣ ರಿಲೀಸ್ ಮಾಡುವುದಾಗಿ ಭರವಸೆ ನೀಡಿದ್ದರು.
ಇದನ್ನೂ ಓದಿ:ಗಂಡನ ಮನೆಯವರ ವರದಕ್ಷಿಣೆ ಕಿರುಕುಳ: ಆತ್ಮಹತ್ಯೆಗೆ ಶರಣಾದ 21ರ ವಿವಾಹಿತೆ
ಯಾವ ರಾಜ್ಯಕ್ಕೆ ಎಷ್ಟು ತೆರಿಗೆ ಹಣ?
ಕೇಂದ್ರ ಸರ್ಕಾರದಿಂದ ರಿಲೀಸ್ ಆಗಿರುವ ಹಣದಲ್ಲಿ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು 17056.66 ಕೋಟಿ ಸಿಕ್ಕಿದೆ. ಉತ್ತರಾಖಂಡ್ಗೆ 1063.02 ಕೋಟಿ ರೂ., ಮಧ್ಯಪ್ರದೇಶಕ್ಕೆ 7463.92 ಕೋಟಿ ರೂ. ಛತ್ತೀಸ್ಘಡಕ್ಕೆ 3239.54 ಕೋಟಿ ರೂ. ಮಹಾರಾಷ್ಟ್ರಕ್ಕೆ 6006.30 ಕೋಟಿ, ಗುಜರಾತ್ಗೆ 3306.94 ಕೋಟಿ ರೂ. ಹಾಗೂ ಗೋವಾಗೆ 367.02 ಕೋಟಿ ರೂ. ಸಿಕ್ಕಿದೆ. ಉಳಿದಂತೆ ಪಂಜಾಬ್ಗೆ 1718.16 ಕೋಟಿ ರೂ., ಹರಿಯಾಣ 1039.24 ಕೋಟಿ ರೂ., ರಾಜಸ್ಥಾನಕ್ಕೆ 5729.64 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 789.16 ಕೋಟಿ ರೂ., ಆಂಧ್ರಪ್ರದೇಶಕ್ಕೆ 3847.96 ಕೋಟಿ ರೂ., ತೆಲಂಗಾಣ 1998.62 ಕೋಟಿ ರೂ., ತಮಿಳುನಾಡಿಗೆ 3878.38 ಕೋಟಿ ರೂ., ಕರ್ನಾಟಕಕ್ಕೆ 3467.62 ಕೋಟಿ ರೂ ಹಾಗೂ ಕೇರಳಕ್ಕೆ 1830.38 ಕೋಟಿ ರೂ. ಸಿಕ್ಕಿದೆ.
ಪಶ್ಚಿಮ ಬಂಗಾಳಕ್ಕೆ 7152.96 ಕೋಟಿ ರೂ., ಬಿಹಾರ 9563.30 ಕೋಟಿ ರೂ., ಜಾರ್ಖಂಡ್ 3144.34 ಕೋಟಿ ರೂ. ಒಡಿಶಾ 4305.32 ಕೋಟಿ, ಅಸ್ಸೋಂಗೆ 2974.16 ಕೋಟಿ ರೂ. ಅರುಣಾಚಲ ಪ್ರದೇಶ 1670.58 ಕೋಟಿ ರೂ. ಸಿಕ್ಕಿಂ 368.94 ಕೋಟಿ ರೂ. ಮಣಿಪುರ 680.80 ಕೋಟಿ ರೂ.ಮೇಘಾಲಯ 729.28 ಕೋಟಿ ರೂ. ಮಿಜೋರಾಂ 475.42 ಕೋಟಿ ರೂ. ತ್ರಿಪುರಾ 673.32 ಕೋಟಿ ರೂ. ನಾಗಾಲ್ಯಾಂಡ್ 541.02 ಕೋಟಿ ರೂ. ಪಡೆದುಕೊಂಡಿದೆ.
ಕೇಂದ್ರ ಹಣಕಾಸು ಇಲಾಖೆ ಪ್ರತಿ ಸಲ ತೆರಿಗೆ ಹಣ ರಿಲೀಸ್ ಮಾಡುವಾಗಲೂ 47 ಸಾವಿರ ಕೋಟಿ ರೂ. ಬಿಡುಗಡೆ ಮಾಡುತ್ತಿತ್ತು. ಆದರೆ ಇದೀಗ ದೇಶದ ಕೆಲವೊಂದು ರಾಜ್ಯಗಳಲ್ಲಿ ನೆರೆಹಾವಳಿ ಉಂಟಾಗಿರುವ ಕಾರಣ ಎರಡು ಹಂತದ ಹಣ ಒಟ್ಟಿಗೆ ನೀಡಿದೆ.