ನವದೆಹಲಿ:ಪರಿಶಿಷ್ಟ ಪಂಗಡದ (ಎಸ್‌ಟಿ) ಸಮುದಾಯದವರಿಗೆ ಟಿಡಿಎಸ್ ಬಡ್ಡಿ ಪಾವತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಘೋಷಣೆಯೊಂದನ್ನು ಮಾಡಿದೆ. ಈ ಘೋಷಣೆಯ ಮೂಲಕ ಆದಾಯ ತೆರಿಗೆ ಕಾಯ್ದೆ-1961 ಅಡಿಯಲ್ಲಿನ ಕೆಲವು ನಿಯಮಗಳನ್ನು ಸರ್ಕಾರ ಸಡಿಲಿಸಿದೆ.
ಶೆಡ್ಯೂಲ್ಡ್ ಬ್ಯಾಂಕ್ಗಳಲ್ಲಿ (Scheduled Banks) ಪರಿಶಿಷ್ಟ ಪಂಗಡದವರು ಠೇವಣಿ ಇಟ್ಟಿದ್ದು, ಅಂಥವರಿಗೆ ಬರುವ ಬ್ಯಾಂಕ್ ಬಡ್ಡಿಯ ಮೇಲೆ ಯಾವುದೇ ತೆರಿಗೆ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಪರಿಶಿಷ್ಟ ಪಂಗಡದ ವ್ಯಕ್ತಿ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ವಾಸವಿರಲಿ, ಸೆಕ್ಯೂರಿಟೀಸ್ ಮೇಲಿನ ಬಡ್ಡಿಯನ್ನು ಹೊರತುಪಡಿಸಿ, ಆ ವ್ಯಕ್ತಿಯ ಪಾವತಿಯ ಮೇಲೆ ತೆರಿಗೆ ಕಡಿತ ಮಾಡುವುದಿಲ್ಲ ಎಂದು ಹಣಕಾಸು ಇಲಾಖೆ ಹೇಳಿದೆ.
ಠೇವಣಿದಾರರಿಗೆ ಸಮಾಧಾನ ತಂದರೆ ಮಾತ್ರ ಈ ಹೊಸ ಸಡಿಲಿಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್-200(3)ರ ಅಡಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಆದರೆ ಹಿಂದಿನ ವರ್ಷದಲ್ಲಿ ಅವರು ಮಾಡಿದ ಪಾವತಿ ಅಥವಾ ಒಟ್ಟು ಮೊತ್ತವು 20 ಲಕ್ಷ ರೂಪಾಯಿಗಳನ್ನು ಮೀರಬಾರದು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಶೆಡ್ಯೂಲ್ಡ್ ಬ್ಯಾಂಕ್?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೆಲವೊಂದು ಬ್ಯಾಂಕ್ಗಳನ್ನು ಶೆಡ್ಯೂಲ್ಡ್ ಬ್ಯಾಂಕ್ ಎಂದು ಕರೆಯುತ್ತದೆ. Reserve Bank of India Act, 1934ರ ಅಡಿಯಲ್ಲಿ ಈ ಬ್ಯಾಂಕ್ಗಳನ್ನು ಹೆಸರಿಸಲಾಗಿದೆ. ಇವುಗಳನ್ನು ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳೂ ಇರುತ್ತವೆ.
ಇದನ್ನೂ ಓದಿ:ಎರಡೇ ದಿನದಲ್ಲಿ 1,100 ಕೋಟಿ ರೂ.ಮೌಲ್ಯದ Electric scooters ಮಾರಾಟ ಮಾಡಿದ Ola