ಕರ್ನಾಟಕ

karnataka

ETV Bharat / bharat

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌ ; ತುಟ್ಟಿಭತ್ಯೆ ಶೇ.28ಕ್ಕೆ ಹೆಚ್ಚಿಸಲು ಸಂಪುಟ ಸಭೆ ಅನುಮೋದನೆ - ತುಟ್ಟಿಭತ್ಯೆ

ಕಳೆದ ಹಲವು ತಿಂಗಳುಗಳಿಂದ ಡಿಎ ಹೆಚ್ಚಳ ಮಾಡಲಾಗುತ್ತದೆ ಎಂದು ಕಾಯುತ್ತಿದ್ದ ಲಕ್ಷಾಂತರ ಮಂದಿ ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ. ಡಿಎ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ..

Centre hikes DA for central govt employees to 28%
ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌; ತುಟ್ಟಿಭತ್ಯೆ 28ಕ್ಕೆ ಹೆಚ್ಚಳಕ್ಕೆ ಸಂಪುಟ ಸಭೆ ಅನುಮೋದನೆ

By

Published : Jul 14, 2021, 4:04 PM IST

ನವ ದಹೆಲಿ :ಕೇಂದ್ರದ ಸರ್ಕಾರಿ ನೌಕರರಿಗೆ ಪ್ರಧಾನಿ ಮೋದಿ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ತುಟ್ಟಿಭತ್ಯೆ (ಡಿಎ) ಶೇ.28ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದೆ. ಡಿಎ ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕೋವಿಡ್‌ನಿಂದ ಕಳೆದ ವರ್ಷ ಡಿಎ ಹೆಚ್ಚಿಸಲು ಸರ್ಕಾರ ಮನಸು ಮಾಡಿರಲಿಲ್ಲ. ಈ ಮೊದಲು ಶೇ.17ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿತ್ತು. ಈ ಪ್ರಮಾಣವನ್ನು 28ಕ್ಕೆ ಹೆಚ್ಚಳ ಮಾಡಲಾಗಿದೆ. 7ನೇ ವೇತನ ಆಯೋಗದಡಿ ಡಿಎ ಸೌಲಭ್ಯ ಸಿಗಲಿದೆ.

ಕಳೆದ ಹಲವು ತಿಂಗಳುಗಳಿಂದ ಡಿಎ ಹೆಚ್ಚಳ ಮಾಡಲಾಗುತ್ತದೆ ಎಂದು ಕಾಯುತ್ತಿದ್ದ ಲಕ್ಷಾಂತರ ಮಂದಿ ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ. ಡಿಎ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಆದರೆ, ಸರ್ಕಾರ ಮಾತ್ರ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದು ಖಾತ್ರಿಯಾದರೆ ಸೆಪ್ಟೆಂಬರ್‌ನಿಂದ ತುಟ್ಟಿಭತ್ಯೆ ಹೆಚ್ಚಳದ ಸೌಲಭ್ಯವನ್ನು ಕೇಂದ್ರದ ನೌಕರರು ಪಡೆಯಲಿದ್ದಾರೆ. 2021ರ ಜುಲೈನಿಂದಲೇ ಅರಿಯರ್ಸ್‌ (ಹಿಂಬಾಕಿ) ಪಡೆಯಲಿದ್ದಾರೆ.

ಇದನ್ನೂ ಓದಿ:ಪೆಟ್ರೋಲ್ ಬೆಲೆ ಏರಿಕೆ ಆಗಿದ್ರಿಂದ ಎಲೆಕ್ಟ್ರಿಕ್ ವೆಹಿಕಲ್ ತರ್ತಿದ್ದೇವೆ: ಡಿಸಿಎಂ ಅಶ್ವತ್ಥ್ ನಾರಾಯಣ

ಸಚಿವ ಸಂಪುಟ ಸಭೆ ಕೈಗೊಂಡಿರುವ ಇಂದಿನ ನಿರ್ಧಾರಕ್ಕೂ ಮೊದಲು ಕನಿಷ್ಠ ಮೂರು ಡಿಎ ಇನ್‌ಸ್ಟಾಲ್‌ಮೆಂಟ್‌ಗಳು ಬಾಕಿ ಇವೆ. 2020ರಲ್ಲಿ ಎರಡು ಹಾಗೂ ಈ ವರ್ಷದಲ್ಲಿ 1 ಡಿಎ ಬಾಕಿ ಇದೆ.

ABOUT THE AUTHOR

...view details