ನವದೆಹಲಿ:ಕೇಂದ್ರ ಸರ್ಕಾರ ಕೋವಿಡ್ -19ನಿಂದಾದ ಸಾವುಗಳನ್ನು ಮರೆಮಾಚುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.
ಭಾರತ ಸರ್ಕಾರ ಕೋವಿಡ್ನ ಸಾವುಗಳನ್ನ ನೈಜ ದಾಖಲೆಯನ್ನು ಮರೆಮಾಚುತ್ತಿದೆ ಎಂದು ಮಾಧ್ಯಮ ವರದಿಯೊಂದನ್ನು ಟ್ವೀಟ್ ಮಾಡುವ ಮೂಲಕ ಆರೋಪಿಸಿದ್ದಾರೆ.
ಇದಕ್ಕು ಮುನ್ನ ಅವರು ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡುವಂತೆ ದೇಶದ ಜನತೆ ಸರ್ಕಾರಕ್ಕೆ ಆಗ್ರಹಿಸಬೇಕೆಂದು ಹೇಳಿದ್ದರು.
" ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ನಮ್ಮನ್ನು ರಕ್ಷಿಸಲು ಲಸಿಕೆಗಳು ಪ್ರಬಲವಾದ ಅಸ್ತ್ರ. ನೀವೆಲ್ಲರೂ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ ವಿತರಿಸುವಂತೆ ಧ್ವನಿ ಎತ್ತಿ ಕೇಂದ್ರ ಸರ್ಕಾರವನ್ನು ಎಚ್ಚರಗೊಳಿಸಬೇಕು" ಎಂದು ರಾಹುಲ್ #SpeakUpForFreeUniversalVaccination ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದ್ದರು.
ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಕೂಡ ವ್ಯಾಕ್ಸಿನೇಷನ್ ಮಂದಗತಿಯ ಬಗ್ಗೆ ಕಿಡಿಕಾರಿದ್ದರು.
ನಾವು ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಲ್ಲಿ ಒಬ್ಬರಾಗಿದ್ದೇವೆ. ಆದರೆ ಇಲ್ಲಿಯವರೆಗೆ ನಮ್ಮ ಜನಸಂಖ್ಯೆಯ ಕೇವಲ ಶೇ. 3.4 ರಷ್ಟು ಮಂದಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗಿದೆ. ಭಾರತದ ಗೊಂದಲ ಮತ್ತು ಮಂದಗತಿಯಲ್ಲಿ ಸಾಗುತ್ತಿರುವ ವ್ಯಾಕ್ಸಿನೇಷನ್ ಕಾರ್ಯಕ್ರಮಕ್ಕೆ ಕಾರಣಕರ್ತರು ಯಾರು? ಎಂದು ಟ್ವೀಟ್ ಮಾಡಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಇದನ್ನು ಓದಿ:ಮೋದಿ ಸರ್ಕಾರದ ಶೂನ್ಯ ಲಸಿಕೆ ನೀತಿ ಮಾತೃ ಭಾರತದ ಹೃದಯದಲ್ಲಿ ಕತ್ತಿಯಾಗಿದೆ: ರಾಹುಲ್ ಟೀಕೆ