ಕರ್ನಾಟಕ

karnataka

'ತೆಲಂಗಾಣದಿಂದ ಕಲ್ಲಿದ್ದಲು ತೆಗೆದುಕೊಂಡು ಹೋಗಲು ಕೇಂದ್ರ ಸಂಚು ರೂಪಿಸುತ್ತಿದೆ'

By

Published : Oct 17, 2021, 1:25 PM IST

Updated : Oct 17, 2021, 2:18 PM IST

ತೆಲಂಗಾಣ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ವಿನೋದ್ ಕುಮಾರ್ ಅವರು, ಸಿಂಗರೇಣಿ ಕಲ್ಲಿದ್ದಲು ಕಂಪನಿ ಲಿಮಿಟೆಡ್ (ಎಸ್ಸಿಸಿಎಲ್) ನಿಂದ ಕಲ್ಲಿದ್ದಲನ್ನು ಬೇರೆ ರಾಜ್ಯಗಳಿಗೆ ಸಾಗಿಸಬಾರದು ಎಂದು ಆಗ್ರಹಿಸಿದ್ದಾರೆ. ಹಾಗೆಯೇ ಹಣಕಾಸು ಸಚಿವ ಟಿ. ಹರೀಶ್ ರಾವ್ ಕೂಡ ಕೇಂದ್ರದ ವಿರುದ್ಧ ಹರಿಹಾಯ್ದಿದ್ದು, ತೆಲಂಗಾಣದಿಂದ ಕಲ್ಲಿದ್ದಲನ್ನು ತೆಗೆದುಕೊಂಡು ಹೋಗಲು ಕೇಂದ್ರ ಸಂಚು ರೂಪಿಸುತ್ತದೆ, ಇದು ನ್ಯಾಯಸಮ್ಮತವಲ್ಲ ಎಂದು ಹೇಳಿದ್ದಾರೆ.

ತೆಲಂಗಾಣ ಕಲ್ಲಿದ್ದಲು ತೆಗೆದುಕೊಂಡು ಹೋಗಲು ಕೇಂದ್ರ ಸಂಚು ರೂಪಿಸುತ್ತಿದೆ
ತೆಲಂಗಾಣ ಕಲ್ಲಿದ್ದಲು ತೆಗೆದುಕೊಂಡು ಹೋಗಲು ಕೇಂದ್ರ ಸಂಚು ರೂಪಿಸುತ್ತಿದೆ

ಹೈದರಾಬಾದ್: ತಾಡಿಚೆರ್ಲಾದಿಂದ ಬೇರೆ ರಾಜ್ಯಗಳಿಗೆ ಕಲ್ಲಿದ್ದಲನ್ನು ಸಾಗಿಸುವ ಯಾವುದೇ ಯೋಜನೆಗಳನ್ನು ಕೈಬಿಡಬೇಕು. ಕೇಂದ್ರದಿಂದ ತೆಲಂಗಾಣದ ಕಲ್ಲಿದ್ದಲು ತೆಗೆದುಕೊಂಡು ಹೋಗಲು ಸಂಚು ರೂಪಿಸಲಾಗಿದೆ ಎಂದು ಹಣಕಾಸು ಸಚಿವ ಟಿ.ಹರೀಶ್ ರಾವ್ ಆರೋಪಿಸಿದ್ದಾರೆ.

ದೇಶವು ಎದುರಿಸುತ್ತಿರುವ ಕಲ್ಲಿದ್ದಲು ಬಿಕ್ಕಟ್ಟನ್ನು ನಿವಾರಿಸಲು ಕೇಂದ್ರವು ಎಸ್‌ಸಿಸಿಎಲ್‌ನಿಂದ ಕಲ್ಲಿದ್ದಲನ್ನು ಖರೀದಿಸುವ ಸುಳಿವು ನೀಡಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಇತರ ರಾಜ್ಯಗಳಿಗೆ ಕಲ್ಲಿದ್ದಲು ಸಾಗಿಸಲು ಕೇಂದ್ರವು ರಾಜ್ಯದ ಮೇಲೆ ಒತ್ತಡ ಹೇರುತ್ತಿದೆ. ತೆಲಂಗಾಣವು 15 ದಿನಗಳವರೆಗೆ ಸಾಕಾಗುವಷ್ಟು ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿದೆ. ನಿಯಮಗಳ ಪ್ರಕಾರ, 22 ದಿನಗಳವರೆಗೆ ಉಷ್ಣ ವಿದ್ಯುತ್ ಕೇಂದ್ರಗಳಲ್ಲಿ ಕಲ್ಲಿದ್ದಲು ನಿಕ್ಷೇಪಗಳು ಇರಬೇಕು. ಆದರೂ ಕೇಂದ್ರವು ಇತರ ರಾಜ್ಯಗಳಿಗೆ ಕಲ್ಲಿದ್ದಲು ನೀಡಲು ಒತ್ತಡ ಹೇರುತ್ತಿದೆ ಎಂದು ಹರೀಶ್​ ಕೇಂದ್ರದ ವಿರುದ್ಧ ಹರಿಹಾಯ್ದರು.

ಬಿಜೆಪಿ ಆಡಳಿತವಿರುವ ರಾಜ್ಯಗಳು ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದ್ಯುತ್ ಕಡಿತ ಉಂಟಾಗುತ್ತಿದೆ. ಈ ಸಮಯದಲ್ಲಿ, ತೆಲಂಗಾಣವು ಎಲ್ಲಾ ಕ್ಷೇತ್ರಗಳಿಗೆ 24x7 ವಿದ್ಯುತ್ ಪೂರೈಸುತ್ತಿದೆ ಎಂದು ಸಚಿವರು ಹೇಳಿದರು.


'ಬೇರೆ ರಾಜ್ಯಗಳಿಗೆ ಸಾಗಿಸಬಾರದು'

ಸಿಂಗರೇನಿ ಕಾಲರೀಸ್ ಕಂಪನಿ ಲಿಮಿಟೆಡ್ (ಎಸ್‌ಸಿಸಿಎಲ್ Singareni Collieries Company) ನ ತಾಡಿಚೆರ್ಲಾ ಗಣಿಗಳಿಂದ ಕಲ್ಲಿದ್ದಲನ್ನು ಬೇರೆ ರಾಜ್ಯಗಳಿಗೆ ಸಾಗಿಸಬಾರದು ಎಂದು ತೆಲಂಗಾಣ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಬಿ.ವಿನೋದ್ ಕುಮಾರ್ ಒತ್ತಾಯಿಸಿದ್ದಾರೆ. ತಾಡಿಚೆರ್ಲಾದ ಕಲ್ಲಿದ್ದಲನ್ನು ಭೂಪಾಲಪಲ್ಲಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಗೆ ಮಾತ್ರ ಕಟ್ಟುನಿಟ್ಟಾಗಿ ಬಳಸಬೇಕು ಎಂದು ಸೂಚಿಸಿದ್ದಾರೆ.

ತಾಡಿಚೆರ್ಲಾ ಗಣಿಗಳಿಂದ ಕಲ್ಲಿದ್ದಲನ್ನು ಬೇರೆ ರಾಜ್ಯಗಳಿಗೆ ಪೂರೈಸುವಂತೆ ಕೇಂದ್ರ ಸರ್ಕಾರದ ಕೆಲವು ಉನ್ನತ ಅಧಿಕಾರಿಗಳು ಎಸ್‌ಸಿಸಿಎಲ್ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದಾರೆ ಎಂದು ಕುಮಾರ್ ಹೇಳಿದ್ದು, ತಾಡಿಚೆರ್ಲಾ ಕಲ್ಲಿದ್ದಲನ್ನು ಇತರ ರಾಜ್ಯಗಳಿಗೆ ಸಾಗಿಸುವುದು ನ್ಯಾಯಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Last Updated : Oct 17, 2021, 2:18 PM IST

ABOUT THE AUTHOR

...view details