ನವದೆಹಲಿ :ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 26 ಕೋಟಿಗೂ ಅಧಿಕ ಕೋವಿಡ್ ಡೋಸ್ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಭಾರತ ಸರ್ಕಾರದ ಮೂಲಕ ಮತ್ತು ರಾಜ್ಯಗಳ ನೇರ ಖರೀದಿ ವಿಭಾಗದ ಮೂಲಕ ಈವರೆಗೆ 26,64,84,350 ಲಸಿಕೆಯನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, 1.53 ಕೋಟಿಗಿಂತ ಹೆಚ್ಚು (1,53,79,233) ಕೋವಿಡ್ ಲಸಿಕೆ ಡೋಸ್ಗಳು ಇನ್ನೂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಬಳಿಯಿವೆ. ಇದಲ್ಲದೆ, 4 ಲಕ್ಷಕ್ಕೂ ಹೆಚ್ಚು (4,48,760) ಲಸಿಕೆ ಪ್ರಮಾಣಗಳನ್ನು ಶೀಘ್ರದಲ್ಲೇ ರಾಜ್ಯಗಳಿಗೆ ಕಳಿಸಲಾಗುವುದು ಎಂದು ತಿಳಿಸಿದೆ. ಕೋವಿಡ್ ವ್ಯಾಕ್ಸಿನೇಷನ್ನ ಉದಾರೀಕರಣ ಮತ್ತು ವೇಗವರ್ಧಿತದ 3ನೇ ಕಾರ್ಯತಂತ್ರವು ಮೇ 1, 2021ರಿಂದ ಪ್ರಾರಂಭವಾಗಿದೆ.