ಕರ್ನಾಟಕ

karnataka

ETV Bharat / bharat

ಈಶಾನ್ಯದ 2 ರಾಜ್ಯಗಳಲ್ಲಿ AFSPA 6 ತಿಂಗಳು ವಿಸ್ತರಣೆ.. ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ಕೇಂದ್ರ ಸರ್ಕಾರವು ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನ ಪ್ರಕ್ಷುಬ್ಧ ಪ್ರದೇಶಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು (ಎಎಫ್‌ಎಸ್‌ಪಿಎ) ಇನ್ನೂ 6 ತಿಂಗಳವರೆಗೆ ವಿಸ್ತರಿಸಿದೆ. ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಸೂಚನೆ ಪ್ರಕಾರ ಅರುಣಾಚಲದ 3 ಜಿಲ್ಲೆಗಳು ಮತ್ತು ನಾಗಾಲ್ಯಾಂಡ್‌ನ 9 ಜಿಲ್ಲೆಗಳಲ್ಲಿ AFSPA ಸಂಪೂರ್ಣವಾಗಿ ಜಾರಿಯಾಗಲಿದೆ.

Centre extends AFSPA in nagaland  armed forces special power act extended  afspa extends in Arunachal Pradesh  nagaland and arunachal declared as disturbed area  Centre extends AFSPA  ಈಶಾನ್ಯದ 2 ರಾಜ್ಯಗಳಲ್ಲಿ AFSPA ವ್ಯಾಪ್ತಿ ವಿಸ್ತರಣೆ  ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ  ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ  ಶಾಂತಿ ಕಾಪಾಡಲು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ  ನಾಗಾಲ್ಯಾಂಡ್‌ನ 9 ಜಿಲ್ಲೆಗಳನ್ನು AFSPA ಜಾರಿ  ಈಶಾನ್ಯದಲ್ಲಿ ಶಾಶ್ವತ ಶಾಂತಿ
ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

By

Published : Oct 1, 2022, 10:49 AM IST

ನವದೆಹಲಿ: ಸುದೀರ್ಘ ಕಾಲದಿಂದ ಇತ್ಯರ್ಥವಾಗದೇ ಉಳಿದುಕೊಂಡಿದ್ದ ಅಸ್ಸೋಂ-ಮೇಘಾಲಯ ನಡುವಿನ ಅಂತರರಾಜ್ಯ ಗಡಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಈಶಾನ್ಯ ರಾಜ್ಯಗಳಾಗಿರುವ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್​ನಲ್ಲಿ ಶಾಂತಿ ಕಾಪಾಡಲು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ(AFSPA)ಯನ್ನು 6 ತಿಂಗಳು ವಿಸ್ತರಿಸಿದೆ.

ಅರುಣಾಚಲ ಪ್ರದೇಶದಲ್ಲಿ ಮುಂದಿನ 6 ತಿಂಗಳವರೆಗೆ ತಿರಾಪ್, ಚಾಂಗ್ಲಾಂಗ್ ಮತ್ತು ಲಾಂಗ್‌ಡಿಂಗ್ ಜಿಲ್ಲೆಗಳಲ್ಲಿ AFSPA ಸಂಪೂರ್ಣವಾಗಿ ಜಾರಿಯಾಗಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಇದಲ್ಲದೆ, ನಮ್ಸಾಯಿ ಜಿಲ್ಲೆಯ ನಮ್ಸಾಯಿ ಮತ್ತು ಮಹದೇವಪುರ ಎರಡು ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳನ್ನು ಕದಡಿದ ಪ್ರದೇಶಗಳಲ್ಲಿ ಇರಿಸಲಾಗಿದೆ.

ನಾಗಾಲ್ಯಾಂಡ್‌ನ 9 ಜಿಲ್ಲೆಗಳನ್ನು AFSPA ಜಾರಿಯಾಗಿದೆ ಎಂದು ಘೋಷಿಸಲಾಗಿದೆ. ಇದಲ್ಲದೇ ನಾಲ್ಕು ಜಿಲ್ಲೆಗಳ 16 ಪೊಲೀಸ್ ಠಾಣೆ ಪ್ರದೇಶಗಳನ್ನು ಅಶಾಂತ ಎಂದು ಘೋಷಿಸಲಾಗಿದೆ. ಈ ಸ್ಥಳಗಳಲ್ಲಿಯೂ ಸಹ AFSPA ಇಂದಿನಿಂದ ಮುಂದಿನ 6 ತಿಂಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಮೊದಲು 31 ಮಾರ್ಚ್ 2022 ರಂದು ನಾಗಾಲ್ಯಾಂಡ್, ಅಸ್ಸೋಂ ಮತ್ತು ಮಣಿಪುರ ರಾಜ್ಯಗಳಲ್ಲಿ AFSPA ಅಡಿಯಲ್ಲಿ ತೊಂದರೆಗೊಳಗಾದ ಪ್ರದೇಶಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಈಶಾನ್ಯದಲ್ಲಿ ಶಾಶ್ವತ ಶಾಂತಿಯನ್ನು ತರಲು ಮತ್ತು ಉಗ್ರವಾದವನ್ನು ಕೊನೆಗೊಳಿಸಲು ಮೋದಿ ಸರ್ಕಾರದ ಹಲವಾರು ಒಪ್ಪಂದಗಳು ಮತ್ತು ನಿರಂತರ ಪ್ರಯತ್ನಗಳಿಂದಾಗಿ ಎಎಫ್‌ಎಸ್‌ಪಿಎ ಅಡಿಯಲ್ಲಿನ ಪ್ರದೇಶಗಳಲ್ಲಿ ಭದ್ರತಾ ಪರಿಸ್ಥಿತಿಯಲ್ಲಿನ ಸುಧಾರಣೆಯು ತ್ವರಿತ ಅಭಿವೃದ್ಧಿಯ ಫಲಿತಾಂಶವಾಗಿದೆ ಎಂದು ಅಮಿತ್ ಶಾ ಹೇಳಿದ್ದರು.

ಉಗ್ರಗಾಮಿ ಘಟನೆಗಳು ಕಡಿಮೆ: ಕೇಂದ್ರ ಸರ್ಕಾರದ ಪ್ರಕಾರ 2014 ಕ್ಕೆ ಹೋಲಿಸಿದರೆ 2021 ರಲ್ಲಿ ಉಗ್ರಗಾಮಿ ಘಟನೆಗಳಲ್ಲಿ ಶೇಕಡಾ 74 ರಷ್ಟು ಕಡಿಮೆಯಾಗಿದೆ. ಇದಲ್ಲದೆ, ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಸಾವಿನಲ್ಲಿ ಕ್ರಮವಾಗಿ ಶೇಕಡಾ 60 ಮತ್ತು ಶೇಕಡಾ 84 ರಷ್ಟು ಇಳಿಕೆಯಾಗಿದೆ. ಸರ್ಕಾರದ ಪ್ರಕಾರ ಕಳೆದ ಕೆಲವು ವರ್ಷಗಳಲ್ಲಿ 7000 ಉಗ್ರಗಾಮಿಗಳು ಶರಣಾಗಿದ್ದಾರೆ ಎಂದು ಹೇಳಿದೆ.

ರಾಜ್ಯಗಳ ಈ ಪ್ರದೇಶಗಳಲ್ಲಿ AFSPA ಮುಕ್ತಿ: ಮೋದಿ ಸರ್ಕಾರವು ಭದ್ರತಾ ಪರಿಸ್ಥಿತಿಯನ್ನು ಸುಧಾರಿಸಿದ ಕಾರಣ AFSPA ಅಡಿಯಲ್ಲಿ ತೊಂದರೆಗೊಳಗಾದ ಪ್ರದೇಶದ ಅಧಿಸೂಚನೆಯನ್ನು 2015 ರಲ್ಲಿ ತ್ರಿಪುರಾ ಮತ್ತು 2018 ರಲ್ಲಿ ಮೇಘಾಲಯದಿಂದ ಸಂಪೂರ್ಣವಾಗಿ ತೆಗೆದುಹಾಕಲಾಯಿತು. 1990 ರಿಂದ ಇಡೀ ಅಸ್ಸೋಂನಲ್ಲಿ ತೊಂದರೆಗೊಳಗಾದ ಪ್ರದೇಶ ಅಧಿಸೂಚನೆ ಜಾರಿಯಲ್ಲಿತ್ತು. 2014 ರಲ್ಲಿ ಮೋದಿ ಪ್ರಧಾನಿಯಾದ ನಂತರ ಭದ್ರತಾ ಪರಿಸ್ಥಿತಿಯಲ್ಲಿ ಸುಧಾರಣೆಯಿಂದಾಗಿ ಏಪ್ರಿಲ್ 1, 2022 ರಿಂದ ಅಸ್ಸೋಂನ 23 ಜಿಲ್ಲೆಗಳನ್ನು ಸಂಪೂರ್ಣವಾಗಿ ಮತ್ತು ಒಂದು ಜಿಲ್ಲೆಯನ್ನು AFSPA ಪರಿಣಾಮದಿಂದ ಭಾಗಶಃ ತೆಗೆದುಹಾಕಲಾಯಿತು.

ಮಣಿಪುರದ ಇಂಫಾಲ್ ಪುರಸಭೆಯನ್ನು ಹೊರತುಪಡಿಸಿ 2004 ರಿಂದ ಡಿಸ್ಟರ್ಬ್ಡ್ ಏರಿಯಾ ಘೋಷಣೆ ನಡೆಯುತ್ತಿದೆ. ಆದರೆ ಸರ್ಕಾರವು ಏಪ್ರಿಲ್ 1 ರಿಂದ 6 ಜಿಲ್ಲೆಗಳ 15 ಪೊಲೀಸ್ ಠಾಣೆ ಪ್ರದೇಶಗಳನ್ನು ತೊಂದರೆಗೊಳಗಾದ ಪ್ರದೇಶದ ಅಧಿಸೂಚನೆಯಿಂದ ಹೊರಗಿಟ್ಟಿದೆ. ಇದಲ್ಲದೇ 2015ರಲ್ಲಿ ಅರುಣಾಚಲ ಪ್ರದೇಶದ 3 ಜಿಲ್ಲೆಗಳು ಮತ್ತು ಅಸ್ಸೋಂನಿಂದ 20 ಕಿ.ಮೀ. ಎಎಫ್‌ಎಸ್‌ಪಿಎ ಪಟ್ಟಿ ಮತ್ತು ಇತರ 9 ಜಿಲ್ಲೆಗಳಲ್ಲಿ 16 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನ್ವಯಿಸುತ್ತಿತ್ತು. ಅದು ಕ್ರಮೇಣ ಕಡಿಮೆಯಾಗುತ್ತಿದೆ. ಈಗ ಇದು ಕೇವಲ 3 ಜಿಲ್ಲೆಗಳಲ್ಲಿ ಮತ್ತು 1 ಇತರ ಜಿಲ್ಲೆಯ 2 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನ್ವಯಿಸುತ್ತದೆ.

ಇದರೊಂದಿಗೆ 1995 ರಿಂದ ಇಡೀ ನಾಗಾಲ್ಯಾಂಡ್‌ನಲ್ಲಿ ತೊಂದರೆಗೊಳಗಾದ ಪ್ರದೇಶ ಅಧಿಸೂಚನೆ ಜಾರಿಯಲ್ಲಿದೆ. ಎಎಫ್‌ಎಸ್‌ಪಿಎಯನ್ನು ಹಂತ ಹಂತವಾಗಿ ತೆಗೆದುಹಾಕಲು ರಚಿಸಲಾಗಿದ್ದ ಸಮಿತಿಯ ಶಿಫಾರಸನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಏಪ್ರಿಲ್ 1, 2022 ರಿಂದ ಜಾರಿಗೆ ಬರುವಂತೆ ನಾಗಾಲ್ಯಾಂಡ್‌ನ 7 ಜಿಲ್ಲೆಗಳ 15 ಪೊಲೀಸ್ ಠಾಣೆಗಳಿಂದ ತೊಂದರೆಗೊಳಗಾದ ಪ್ರದೇಶದ ಅಧಿಸೂಚನೆಯನ್ನು ತೆಗೆದುಹಾಕಲಾಗಿದೆ.

ಓದಿ:ಈಶಾನ್ಯದ 3 ರಾಜ್ಯಗಳಲ್ಲಿ AFSPA ವ್ಯಾಪ್ತಿ ಕಡಿತ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ABOUT THE AUTHOR

...view details