ಕರ್ನಾಟಕ

karnataka

ETV Bharat / bharat

ನೀವು ಒಮಿಕ್ರಾನ್​ ವ್ಯಾಪಿತ ದೇಶದಿಂದ ಬರುತ್ತಿದ್ದೀರಾ.. ಆರ್​​ಟಿಪಿಸಿಆರ್ ಟೆಸ್ಟ್​ಗೆ​ ಈಗಲೇ ನೋಂದಣಿ ಮಾಡಿಕೊಳ್ಳಿ - ಭಾರತ ಪ್ರವೇಶಕ್ಕೆ ಕೊರೊನಾ ಟೆಸ್ಟ್​ಗೆ ಮುಂಗಡ ನೋಂದಣಿ​ ಕಡ್ಡಾಯ

ದೇಶದ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಕೋಲ್ಕತ್ತಾ ವಿಮಾನ ನಿಲ್ದಾಣಗಳಿಗೆ ಬರುವ ವಿದೇಶ ಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ ಟೆಸ್ಟ್​ ಮಾಡಿಸಿಕೊಳ್ಳಲು ಮೊದಲೇ ನೋಂದಣಿ ಮಾಡಿಕೊಳ್ಳಬೇಕು.

RT-PCR tests compulsory
ಆರ್​​ಟಿಪಿಸಿಆರ್ ಟೆಸ್ಟ್​ಗೆ​ ನೋಂದಣಿ ಮಾಡಿಕೊಳ್ಳಿ

By

Published : Dec 14, 2021, 10:12 PM IST

ಹೈದರಾಬಾದ್:ದೇಶದಲ್ಲಿ ಒಮಿಕ್ರಾನ್​ ವೈರಸ್​ ಹಾವಳಿಗೆ ಆರಂಭದಲ್ಲಿಯೇ ತಡೆಹಾಕಲು ಕೇಂದ್ರ ಸರ್ಕಾರ ವಿದೇಶಿ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿಯೊಂದನ್ನು ಕಡ್ಡಾಯಗೊಳಿಸಿದೆ.

ಡಿಸೆಂಬರ್​ 19 ರ ಮಧ್ಯರಾತ್ರಿಯಿಂದ ಒಮಿಕ್ರಾನ್​ ಗಂಡಾಂತರ ಅನುಭವಿಸುತ್ತಿರುವ ದೇಶಗಳಿಂದ ಭಾರತಕ್ಕೆ ಬರಬೇಕಾದರೆ ವಿಮಾನದ ಟಿಕೆಟ್​ ಬುಕ್​ ಜೊತೆಗೆ, ಕೊರೊನಾ ಆರ್​ಟಿ-ಪಿಸಿಆರ್​ ಟೆಸ್ಟ್​ಗೂ ಕೂಡ ಮುಂಗಡವಾಗಿ ಕಾಯ್ದಿರಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸುತ್ತೋಲೆ ಹೊರಡಿಸಿದೆ.

ಸದ್ಯ ಒಮಿಕ್ರಾನ್​ ವೈರಸ್​ನ ಗಂಡಾಂತರ ಎದುರಿಸುತ್ತಿರುವ ದೇಶಗಳಾದ ಅಮೆರಿಕ, ಯುರೋಪಿಯನ್ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್​ಸ್ವಾನಾ, ಚೀನಾ, ಘಾನಾ, ಮಾರಿಷಸ್, ನ್ಯೂಜಿಲ್ಯಾಂಡ್, ಜಿಂಬಾಬ್ವೆ, ತಾಂಜೇನಿಯಾ, ಹಾಂಕಾಂಗ್ ಮತ್ತು ಇಸ್ರೇಲ್​ಗಳಿಂದ ಬರುವ ಪ್ರಯಾಣಿಕರು ಕಡ್ಡಾಯ ಕೊರೊನಾ ಟೆಸ್ಟ್​ಗೆ ಒಳಗಾಗಬೇಕು.

ಇದನ್ನೂ ಓದಿ: ಕಾಶಿ ಯಾತ್ರೆ ಮುಗಿಸಿ ರಾಜಧಾನಿಗೆ ಹಿಂದಿರುಗಿದ ಪ್ರಧಾನಿ

ಒಂದು ವೇಳೆ ಟೆಸ್ಟ್​ಗೆ ಕಾದಿರಿಸದಿದ್ದರೆ, ಅಂತಹ ಪ್ರಯಾಣಿಕರ ಮೇಲೆ ಸಂಬಂಧಿತ ವಿಮಾನಯಾನ ಸಂಸ್ಥೆಗಳೇ ನಿಗಾ ವಹಿಸಬೇಕು. ವಿಮಾನ ನಿಲ್ದಾಣದಲ್ಲಿ ನೋಂದಣಿ ಕೇಂದ್ರವನ್ನು ಆರಂಭಿಸಬೇಕು ಎಂದು ಸೂಚಿಸಿದೆ. ದೇಶದ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ಕೋಲ್ಕತ್ತಾ ವಿಮಾನ ನಿಲ್ದಾಣಗಳಲ್ಲಿ ಇದೀಗ ಕಟ್ಟೆಚ್ಚರ ವಹಿಸಲಾಗಿದೆ.

For All Latest Updates

TAGGED:

ABOUT THE AUTHOR

...view details