ಕರ್ನಾಟಕ

karnataka

ETV Bharat / bharat

CBI, ED ಅಧಿಕಾರಾವಧಿ 5 ವರ್ಷ ವಿಸ್ತರಣೆಗೆ ಕೇಂದ್ರದಿಂದ ಸುಗ್ರೀವಾಜ್ಞೆ - ಜಾರಿ ನಿರ್ದೇಶನಾಲಯದ (ಇಡಿ) ನಿರ್ದೇಶಕ ಮತ್ತು ಕೇಂದ್ರೀಯ ತನಿಖಾ ದಳ

ಜಾರಿ ನಿರ್ದೇಶನಾಲಯ (ಇಡಿ) ನಿರ್ದೇಶಕ ಮತ್ತು ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸುವ ಕ್ರಮಕ್ಕೆ ಕೇಂದ್ರ ಮುಂದಾಗಿದೆ..

CBI, ED ಅಧಿಕಾರಾವಧಿ 5 ವರ್ಷ ವಿಸ್ತರಣೆಗೆ ಕೇಂದ್ರದಿಂದ ಸುಗ್ರೀವಾಜ್ಞೆ
CBI, ED ಅಧಿಕಾರಾವಧಿ 5 ವರ್ಷ ವಿಸ್ತರಣೆಗೆ ಕೇಂದ್ರದಿಂದ ಸುಗ್ರೀವಾಜ್ಞೆ

By

Published : Nov 14, 2021, 7:42 PM IST

ನವದೆಹಲಿ: ಜಾರಿ ನಿರ್ದೇಶನಾಲಯದ (ಇಡಿ) ( Enforcement Directorate) ನಿರ್ದೇಶಕ ಮತ್ತು ಕೇಂದ್ರೀಯ ತನಿಖಾ ದಳದ (ಸಿಬಿಐ) (director and Central Bureau of Investigation) ನಿರ್ದೇಶಕರ ಅಧಿಕಾರಾವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸಲು ಕೇಂದ್ರ ಮುಂದಾಗಿದೆ.

ಪ್ರಸ್ತುತ 2003ರ ಕೇಂದ್ರ ಜಾಗೃತ ಆಯೋಗದ (CVC) ಕಾಯಿದೆಯ ಮೂಲಕ ಎರಡು ವರ್ಷಗಳ ಅಧಿಕಾರಾವಧಿಗೆ CBI ಮತ್ತು EDನಿರ್ದೇಶಕರನ್ನು ನೇಮಿಸಲಾಗಿದೆ. ಕೇಂದ್ರವು 5 ವರ್ಷಗಳ ಅವಧಿಗೆ ತಂದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ತಮ್ಮ ಒಪ್ಪಿಗೆಯನ್ನು ನೀಡಿದ್ದಾರೆ.

ರಾಷ್ಟ್ರಪತಿಗಳು ಹೊರಡಿಸಿದ ಸುಗ್ರೀವಾಜ್ಞೆ ಪ್ರಕಾರ, ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ, 1946ರ ವಿಭಾಗ 4Bರಲ್ಲಿ, ಉಪ-ವಿಭಾಗ (1)ರಲ್ಲಿ, ಈ ಕೆಳಗಿನ ನಿಬಂಧನೆಗಳನ್ನು ಸೇರಿಸಲಾಗುವುದು. ಅವುಗಳೆಂದರೆ,-"ನಿರ್ದೇಶಕರು ತಮ್ಮ ಆರಂಭಿಕ ನೇಮಕಾತಿಯ ಮೇಲೆ ಅಧಿಕಾರವನ್ನು ಹೊಂದಿರುವ ಅವಧಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ, ವಿಭಾಗ 4A ರ ಉಪ-ವಿಭಾಗ (1) ರ ಅಡಿಯಲ್ಲಿ ಸಮಿತಿಯ ಶಿಫಾರಸಿನ ಮೇರೆಗೆ ಮತ್ತು ಲಿಖಿತವಾಗಿ ದಾಖಲಿಸಬೇಕಾದ ಕಾರಣಗಳಿಗಾಗಿ ಒಂದು ಒಂದು ವರ್ಷದವರೆಗೆವಿಸ್ತರಿಸಬಹುದು" ಎಂದಿದೆ.

ಹಾಗೆ "ಮುಂದೆ ಒದಗಿಸಿದರೆ, ಆರಂಭಿಕ ನೇಮಕಾತಿಯಲ್ಲಿ ನಮೂದಿಸಲಾದ ಅವಧಿಯನ್ನು ಒಳಗೊಂಡಂತೆ ಒಟ್ಟು ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಅಂತಹ ಯಾವುದೇ ವಿಸ್ತರಣೆಯನ್ನು ನೀಡಲಾಗುವುದಿಲ್ಲ" ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ABOUT THE AUTHOR

...view details