ಕರ್ನಾಟಕ

karnataka

ETV Bharat / bharat

ಬಂಡೋಪಾಧ್ಯಾಯ ಎತ್ತಂಗಡಿ.. ಟಿಎಂಸಿ - ಬಿಜೆಪಿ ಜಟಾಪಟಿ - Centre- Bengal tussle over Alapan Bandopadhyay all set for a horrid slander

ಟಿಎಂಸಿ ರಾಜ್ಯಸಭಾ ಸದಸ್ಯ ಸುಖೇಂಡು ಶೇಖರ್ ರಾಯ್, ಬಂಗಾಳದ ಜನತೆ ಮೋದಿ, ಅಮಿತ್ ಶಾರನ್ನು ಸೋಲಿಸುವ ಮೂಲಕ ಅವಮಾನ ಮಾಡಿದ್ದಾರೆ. ಹಾಗಾಗಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಟಿಎಂಸಿ - ಬಿಜೆಪಿ ಜಟಾಪಟಿ
ಟಿಎಂಸಿ - ಬಿಜೆಪಿ ಜಟಾಪಟಿ

By

Published : May 29, 2021, 4:50 PM IST

ಕೋಲ್ಕತ್ತಾ : ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರನ್ನು ಕೇಂದ್ರ ಸರ್ಕಾರ ವಾಪಸ್ ಕರೆಸಿಕೊಂಡಿದೆ.

ಬಂಗಾಳದಿಂದ ವಾಪಸ್ ಕರೆಸಿಕೊಂಡಿರುವ ಅವರನ್ನು ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವಾಲಯಕ್ಕೆ ನೇಮಕ ಮಾಡಲಾಗಿದೆ.

ಶುಕ್ರವಾರ ಸಿಎಂ ಮಮತಾ ಬ್ಯಾನರ್ಜಿ ಅವರ ಜತೆ ಅಲಪನ್ ಬಂಡೋಪಾಧ್ಯಾಯ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಯಾಸ್ ಚಂಡಮಾರುತದಿಂದ ಉಂಟಾಗಿದ್ದ ಹಾನಿ ಕುರಿತು ವರದಿ ಸಲ್ಲಿಸಿದ್ದರು. ಬಳಿಕ ಕೇಂದ್ರ ಸರ್ಕಾರ ಕರೆದಿದ್ದ ಪುನರ್ ಪರಿಶೀಲನಾ ಸಭೆಗೆ ಅವರು ಗೈರಾಗಿದ್ದರು. ಅವರ ಈ ನಡೆ ಕೇಂದ್ರ ಸರ್ಕಾರವನ್ನು ತೀವ್ರ ಮುಖಭಂಗಕ್ಕೆ ಒಳಗಾಗುವಂತೆ ಮಾಡಿತ್ತು.

ಅಲಪನ್ ಬಂಡೋಪಾಧ್ಯಾಯ ಅವರ ಅಧಿಕಾರವಧಿ ಮೇ 24 ಕ್ಕೆ ಕೊನೆಗೊಂಡಿತ್ತು. ಸಿಎಂ ಮಮತಾ ಬ್ಯಾನರ್ಜಿ ಕೋರಿಕೆಯ ಮೇರೆಗೆ ಅವರ ಸೇವಾವಧಿಯನ್ನು ಮೂರು ತಿಂಗಳವರೆಗೆ ವಿಸ್ತರಣೆ ಮಾಡಲಾಗಿತ್ತು. ಇದಾಗಿ ನಾಲ್ಕೇ ದಿನಕ್ಕೆ ಸರ್ಕಾರ ಬಂಡೋಪಾಧ್ಯಾಯರನ್ನು ವಾಪಸ್ ಕರೆಸಿಕೊಂಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್, ಬಂಗಾಳದ ಜನತೆ ಮೋದಿ, ಅಮಿತ್ ಶಾರನ್ನು ಸೋಲಿಸುವ ಮೂಲಕ ಅವಮಾನ ಮಾಡಿದ್ದಾರೆ. ಹಾಗಾಗಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಕೊರೊನಾದಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ₹5 ಲಕ್ಷ.. ಸಿಎಂ ಸ್ಟಾಲಿನ್

ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು, ಬಂಡೋಪಾಧ್ಯಾಯರು ಕೇಂದ್ರ ಸರ್ಕಾರದ ಕರ್ತವ್ಯಕ್ಕೆ ಅರ್ಹರೆಂದು ಅವರನ್ನು ವಾಪಸ್ ಕರೆಸಿಕೊಂಡಿದೆ. ಈ ಆಡಳಿತಾತ್ಮಕ ನಿರ್ಧಾರಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ABOUT THE AUTHOR

...view details