ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್​-ಬಿಜೆಪಿ ಗುದ್ದಾಟ​: 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್ ತೆಗೆಯುವಂತೆ ಟ್ವಿಟ್ಟರ್​ಗೆ ಕೇಂದ್ರದ ತಾಕೀತು! - ಟೂಲ್​ ಕಿಟ್​ ನ್ಯೂಸ್​,

ಕೋವಿಡ್ ನಿರ್ವಹಣೆ ಸಂಬಂಧ ಕೇಂದ್ರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಬಳಸಿದ ಟೂಲ್‌ಕಿಟ್‌ನ ಟ್ವೀಟ್‌ಗಳಿಗೆ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್ ಬಳಕೆಯಲ್ಲಿ ಟ್ವಿಟರ್‌ ನಡೆಗೆ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೇ ಅದನ್ನು ತೆಗೆದು ಹಾಕಿ ಎಂದು ಸೂಚಿಸಿದೆ.

manipulated media  Centre asks Twitter to remove 'manipulated media' tag  tweets related to toolkit  ಮ್ಯಾನಿಪ್ಯುಲೇಟೆಡ್ ಮೀಡಿಯಾ  ಮ್ಯಾನಿಪ್ಯುಲೇಟೆಡ್ ಮೀಡಿಯಾ ಟ್ಯಾಗ್  ಮ್ಯಾನಿಪ್ಯುಲೇಟೆಡ್ ಮೀಡಿಯಾ ಟ್ಯಾಗ್​ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಪತ್ರ  ಮ್ಯಾನಿಪ್ಯುಲೇಟೆಡ್ ಮೀಡಿಯಾ ಸುದ್ದಿ
'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್ ತೆಗೆದು ಹಾಕುವಂತೆ ಟ್ವಿಟ್ಟರ್​ಗೆ ಕೇಂದ್ರ ಸರ್ಕಾರ ತಾಕೀತು

By

Published : May 22, 2021, 8:00 AM IST

ನವದೆಹಲಿ:ಕೊರೋನಾ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರವನ್ನು ಗುರಿಯಾಗಿಸಲು ಬಳಸಿದ ಕಾಂಗ್ರೆಸ್ ಟೂಲ್‌ಕಿಟ್‌ನ ಸಂಬಂಧ ಟ್ವೀಟ್‌ ಗಳಿಗಾಗಿ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್ ಬಳಸಿದ್ದ ಟ್ವಿಟ್ಟರ್ ಕ್ರಮಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಅದನ್ನು ತೆಗೆದು ಹಾಕುವಂತೆ ಟ್ವಿಟ್ಟರ್​ಗೆ ಪತ್ರ ಬರೆದಿದೆ.

ಈ ವಿಷಯವು ಕಾನೂನು ಜಾರಿ ಸಂಸ್ಥೆಯ ಮುಂದೆ ಬಾಕಿ ಇರುವುದರಿಂದ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್ ಅನ್ನು ತೆಗೆದುಹಾಕುವಂತೆ ಸರ್ಕಾರ ಟ್ವಿಟ್ಟರ್​ಗೆ ಪತ್ರ ಬರೆದಿದೆ. ಈ ವಿಷಯವು ತನಿಖೆಯಲ್ಲಿರುವ ವೇಳೆ ಸಾಮಾಜಿಕ ಮಾಧ್ಯಮ ವೇದಿಕೆ ತಾನು ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ತನಿಖೆಯು ವಿಷಯದ ನಿಖರತೆಯನ್ನು ನಿರ್ಧರಿಸುತ್ತದೆ ಹೊರತು ಟ್ವಿಟ್ಟರ್ ಅಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಟ್ವಿಟ್ಟರ್​ನ ಜಾಗತಿಕ ತಂಡಕ್ಕೆ ಬಲವಾದ ಆಕ್ಷೇಪ ಸೂಚಿಸಿ ಪತ್ರ ಬರೆದಿದೆ. ಆ ಪತ್ರದಲ್ಲಿ ಕೆಲವು ರಾಜಕೀಯ ನಾಯಕರು ಮಾಡಿದ ಟ್ವೀಟ್‌ಗಳಲ್ಲಿ 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್‌ಗೆ ತನ್ನ ಆಕ್ಷೇಪಣೆಯನ್ನು ಉಲ್ಲೇಖಿಸಿದೆ.

'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಟ್ಯಾಗ್ ತೆಗೆದು ಹಾಕುವಂತೆ ಟ್ವಿಟ್ಟರ್​ಗೆ ಕೇಂದ್ರ ಸರ್ಕಾರ ತಾಕೀತು

ಟೂಲ್‌ಕಿಟ್‌ನ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ಸ್ಥಳೀಯ ಕಾನೂನು ಜಾರಿ ಸಂಸ್ಥೆಯ ಮುಂದೆ ಸಂಬಂಧಪಟ್ಟ ಪಕ್ಷಗಳಲ್ಲಿ ಒಬ್ಬರು ಈಗಾಗಲೇ ದೂರು ನೀಡಿದ್ದಾರೆ. ಅದೀಗ ತನಿಖೆ ಹಂತದಲ್ಲಿದೆ ಎಂದು ಟ್ವಿಟ್ಟರ್​ಗೆ ಬರೆದ ಪತ್ರದಲ್ಲಿ ಸಚಿವಾಲಯ ಹೇಳಿದೆ.

ಸ್ಥಳೀಯ ಕಾನೂನು ಜಾರಿ ಸಂಸ್ಥೆ ತನಿಖೆಯನ್ನು ನಡೆಸುತ್ತಿರುವಾಗ ಟ್ವಿಟ್ಟರ್ ಈ ವಿಷಯದಲ್ಲಿ ಏಕಪಕ್ಷೀಯವಾಗಿ ತೀರ್ಮಾನಕ್ಕೆ ಬಂದಿದೆ. ಟ್ವಿಟ್ಟರ್​ನ ಇಂತಹ ಟ್ಯಾಗಿಂಗ್ ಪೂರ್ವಾಗ್ರಹ ಮತ್ತು ಸ್ಥಳೀಯ ಕಾನೂನು ಜಾರಿ ಸಂಸ್ಥೆಯ ತನಿಖೆಯನ್ನು ದಿಕ್ಕು ತಪ್ಪಿಸುವ ಉದ್ದೇಶಪೂರ್ವಕ ಪ್ರಯತ್ನವೆಂದು ತೋರುತ್ತದೆ. ನ್ಯಾಯಯುತ ತನಿಖಾ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಪ್ರಯತ್ನ ಮತ್ತು ಸ್ಪಷ್ಟವಾದ ಅತಿಕ್ರಮಣ ಎಂದು ಟ್ವಿಟ್ಟರ್ ಇಂತಹ ಏಕಪಕ್ಷೀಯ ಕ್ರಮವನ್ನು ಸಚಿವಾಲಯ ಖಂಡಿಸಿದೆ.

ಇದು ಸಂಪೂರ್ಣವಾಗಿ ಅನಗತ್ಯವಾಗಿದೆ. ಟ್ವಿಟರ್ ಏಕಪಕ್ಷೀಯವಾಗಿ ಮುಂದುವರಿಯಲು ಮತ್ತು ಕೆಲವು ಟ್ವೀಟ್‌ಗಳನ್ನು 'ಮ್ಯಾನಿಪ್ಯುಲೇಟೆಡ್' ಎಂದು ಹೆಸರಿಸಲು ಆಯ್ಕೆ ಮಾಡಿದೆ ಎಂದು ಸಚಿವಾಲಯ ತನ್ನ ಪತ್ರದಲ್ಲಿ ತಿಳಿಸಿದೆ.

ಇಂತಹ ಕ್ರಮವು ಬಳಕೆದಾರರ ಅಭಿಪ್ರಾಯ ವಿನಿಮಯಕ್ಕೆ ಅನುಕೂಲವಾಗುವ ತಟಸ್ಥ ಮತ್ತು ಪಕ್ಷಪಾತವಿಲ್ಲದ ವೇದಿಕೆಯಾಗಿ ಟ್ವಿಟ್ಟರ್ ನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಬಹುದು. ಅಲ್ಲದೆ, ಟ್ವಿಟ್ಟರ್ ನ ಸ್ಥಿತಿ "ಮಧ್ಯವರ್ತಿ" ಯಾಗಿ ಪ್ರಶ್ನಾರ್ಥಕ ಚಿಹ್ನೆಯಾಗಲಿದೆ.

ಮೋದಿ ಸರ್ಕಾರವನ್ನು ಗುರಿಯಾಗಿಸಲು ಕಾಂಗ್ರೆಸ್ ಸಿದ್ಧಪಡಿಸಿದ ಟೂಲ್​ಕಿಟ್ ಕುರಿತು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟ್ವೀಟ್ ಮಾಡಿರುವ ಟ್ವಿಟ್ಟರ್ ಅನ್ನು 'ಮ್ಯಾನಿಪ್ಯುಲೇಟೆಡ್ ಮೀಡಿಯಾ' ಎಂದು ಟ್ವಿಟರ್ ಲೇಬಲ್ ಮಾಡಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಕೋವಿಡ್ ನಿರ್ವಹಣೆ ಸಂಬಂಧ ಕೇಂದ್ರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಬಳಸಿದ ಟೂಲ್‌ಕಿಟ್‌ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವ ಸ್ಮೃತಿ ಇರಾನಿ, ಪಕ್ಷದ ವಕ್ತಾರ ಸಂಬಿತ್ ಪಾತ್ರಾ, ಪಕ್ಷದ ಮುಖಂಡ ಬಿ.ಎಲ್.ಸಂತೋಷ್ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರಿ ಕಾಂಗ್ರೆಸ್ ಮಂಗಳವಾರ ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೋವಿಡ್​ ಸಾಂಕ್ರಾಮಿಕ ರೋಗದ ಬಗ್ಗೆ ಟೂಲ್‌ಕಿಟ್‌ನ ತನಿಖೆ ನಡೆಸಬೇಕು ಮತ್ತು ಅವರ ವಿರುದ್ಧದ ಆರೋಪಗಳು ನಿಜವೆಂದು ಕಂಡುಬಂದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಅಮಾನತುಗೊಳಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಮಂಗಳವಾರ ಸಲ್ಲಿಸಿದೆ.

ABOUT THE AUTHOR

...view details