ಕರ್ನಾಟಕ

karnataka

ETV Bharat / bharat

ಮೇ 2ರೊಳಗೆ ಸರ್ಕಾರಿ ಮನೆ ಖಾಲಿ ಮಾಡುವಂತೆ ಎಂಟು ಕಲಾವಿದರಿಗೆ ಕೇಂದ್ರದ ತಾಕೀತು - ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ

ಪದ್ಮಶ್ರೀ ಪುರಸ್ಕೃತ, 90 ವರ್ಷದ ಕಲಾವಿದ ಮಾಯಾಧರ್​ ರಾವುತ್​ ಅವರನ್ನು ಖಾಲಿ ಮಾಡಿಸಿದ ಮರು ದಿನವೇ ಇತರ ಎಂಟು ಕಲಾವಿದರಿಗೂ ಮೇ 2ರೊಳಗೆ ಮನೆ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಸರ್ಕಾರಿ ಮನೆ ಖಾಲಿ ಮಾಡುವಂತೆ ಎಂಟು ಕಲಾವಿದರಿಗೆ ಕೇಂದ್ರದ ತಾಕೀತು
ಸರ್ಕಾರಿ ಮನೆ ಖಾಲಿ ಮಾಡುವಂತೆ ಎಂಟು ಕಲಾವಿದರಿಗೆ ಕೇಂದ್ರದ ತಾಕೀತು

By

Published : Apr 28, 2022, 7:50 PM IST

ನವದೆಹಲಿ:ಹಿರಿಯ ಕಲಾವಿದರಿಗೆ ಸರ್ಕಾರಿ ವಸತಿ ಸೌಲಭ್ಯ ತೊರೆಯುವ ಸಮಯ ಬಂದಿದೆ. ಹಲವು ವರ್ಷಗಳಿಂದ ಒದಗಿಸಿದ್ದ ವಸತಿಯನ್ನು ಖಾಲಿ ಮಾಡುವಂತೆ ಎಂಟು ಜನ ಕಲಾವಿದರಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಪದ್ಮಶ್ರೀ ಪುರಸ್ಕೃತ, 90 ವರ್ಷದ ಕಲಾವಿದ ಮಾಯಾಧರ್​ ರಾವುತ್​ ಅವರನ್ನು ಖಾಲಿ ಮಾಡಿಸಿದ ಮರು ದಿನವೇ ಇತರ ಕಲಾವಿದರಿಗೂ ಇದರ ಬಿಸಿ ತಟ್ಟಿದೆ.

ಅನೇಕ ವರ್ಷಗಳಿಂದ ಮಂಜೂರಾಗಿದ್ದ ವಸತಿ ಸೌಲಭ್ಯವು 2014ರಲ್ಲೇ ಸ್ಥಗಿತವಾಗಿದೆ. ಅದೇ ರೀತಿಯಾಗಿ ಸರ್ಕಾರಿ ವಸತಿ ವ್ಯವಸ್ಥೆ ಪಡೆದಿದ್ದ 28 ಕಲಾವಿದರ ಪೈಕಿ ಸುಮಾರು ಎಂಟು ಮಂದಿ ಇನ್ನೂ ಹಾಗೆ ಉಳಿದುಕೊಂಡಿದ್ಧಾರೆ. ಖಾಲಿ ಮಾಡುವಂತೆ ಅನೇಕ ಬಾರಿ ಸೂಚನೆ ನೀಡಿದ್ದರೂ ವಸತಿಗಳನ್ನು ಬಿಟ್ಟುಕೊಟ್ಟಿಲ್ಲ. ವಸತಿ ಖಾಲಿ ಮಾಡುವುದಾಗಿ ಹೇಳಿ ಸಮಯಾವಕಾಶವನ್ನೂ ಪಡೆದಿದ್ದರು.

ಅಲ್ಲದೇ, ಮೇ 2ರೊಳಗೆ ಖಾಲಿ ಮಾಡುವ ಕುರಿತು ಲಿಖಿತವಾಗಿ ಅವರೇ ತಿಳಿಸಿದ್ದಾರೆ. ಅಂತೆಯೇ ಈಗ ಆ ದಿನಾಂಕದೊಳಗೆ ತೊರೆಯುವಂತೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ತಿಂಗಳಿಗೆ 20 ಸಾವಿರಕ್ಕಿಂತ ಕಡಿಮೆ ಆದಾಯಯುಳ್ಳ 40 ಕಲಾವಿದರು ಸಂಸ್ಕೃತಿ ಸಚಿವಾಲಯದ ಶಿಫಾರಸಿನ ಮೇರೆಗೆ ವಿಶೇಷ ಕೋಟಾದಡಿ ವಸತಿ ಮಂಜೂರು ಮಾಡುವ ಅವಕಾಶ ಇತ್ತು.

ಇತ್ತ,ಏಪ್ರಿಲ್​ ಅಂತ್ಯದ ವೇಳೆಗೆ ಭಾರತೀಯ ಶಾಸ್ತ್ರೀಯ ಕಲಾವಿದೆ ರೀಟಾ ಗಂಗೂಲಿ ಸೇರಿ ಇತರರಿಗೆ ವಸತಿ ಖಾಲಿ ಮಾಡುವಂತೆ ದೆಹಲಿ ಹೈಕೋರ್ಟ್​​ನ ಏಕಸದಸ್ಯ ಪೀಠ ಸೂಚಿಸಿತ್ತು. ಇದನ್ನು ಪ್ರಶ್ನಿಸಿದ ರೀಟಾ ಗಂಗೂಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನವೀನ್ ಚಾವ್ಲಾ ಅವರ ವಿಭಾಗೀಯ ಪೀಠವು ಕೂಡ ರೀಟಾ ಅವರ ಮನವಿಯನ್ನು ತಳ್ಳಿ ಹಾಕಿತ್ತು. ಹೆಚ್ಚುವರಿಯಾಗಿ ಒಂದೂ ದಿನವೂ ಕೊಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ:ಮಧ್ಯಪ್ರದೇಶ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಕಮಲ್​ನಾಥ್​ ರಾಜೀನಾಮೆ

ABOUT THE AUTHOR

...view details