ಕರ್ನಾಟಕ

karnataka

ETV Bharat / bharat

ಮತ್ತೆ ಯೋಗಿ ಆದಿತ್ಯನಾಥ ಬೆನ್ನಿಗೆ ನಿಂತ ಬಿಜೆಪಿ ಹೈಕಮಾಂಡ್​​... ನಾಯಕತ್ವ ಬದಲಾವಣೆಗೆ ಫುಲ್​ ಸ್ಟಾಪ್​!

2022ರಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸದ್ಯ ಬಿಜೆಪಿಯ ಆದ್ಯತೆಯ ವಿಷಯವಾಗಿದೆ. ಹೀಗಾಗಿಯೇ ಪಕ್ಷ ಮತ್ತೊಮ್ಮೆ ಯೋಗಿ ಆದಿತ್ಯನಾಥ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುವ ಮುನ್ಸೂಚನೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Central leadership has thrown its weight behind Yogi Adityanath
ಯುಪಿ ಚುನಾವಣೆ ಸನ್ನಿಹಿತ; ಮತ್ತೆ ಸಿಎಂ ಯೋಗಿ ನೇತೃತ್ವದಲ್ಲೇ ಹೋರಾಟ

By

Published : Jun 2, 2021, 8:55 PM IST

ಹೈದರಾಬಾದ್:ರಾಜ್ಯ ಬಿಜೆಪಿಯಲ್ಲಿ ಬಿಎಸ್​ವೈ ಬದಲಾವಣೆಗೆ ಚರ್ಚೆ ನಡೆದಿರುವಂತೆ ಉತ್ತರ ಪ್ರದೇಶದಲ್ಲೂ ಇಂತಹದ್ದೇ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರ ವಿರುದ್ಧವೂ ನಡೆದಿತ್ತು. ಆದರೆ ಆ ಉಹಾಪೋಹಗಳಿಗೆ ಹೈಕಮಾಂಡ್​ ತೆರೆ ಎಳೆಯುವ ಪ್ರಯತ್ನ ಮಾಡಿದ್ದು, ಮುಂದಿನ ಚುನಾವಣೆಗೂ ಅವರನ್ನೇ ನಾಯಕನನ್ನಾಗಿ ಮಾಡುವುದಾಗಿ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ ಎಂಬ ವರದಿ ಈಗ ಹೊರ ಬಿದ್ದಿದೆ.

ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಸಂಪೂರ್ಣ ಬೆಂಬಲಿಸಿದ್ದು, ಅವರ ವಿರುದ್ಧ ಪಕ್ಷದಲ್ಲಿ ಕೇಳಿಬಂದ ಅಪಸ್ವರಗಳಿಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದೆ.

ರಾಜ್ಯ ಬಿಜೆಪಿಯಲ್ಲಿನ ಭಿನ್ನಮತವು ಚುನಾವಣೆಯಲ್ಲಿ ಮುಳುವಾಗಬಹುದು ಎಂಬುದನ್ನು ಲೆಕ್ಕಾಚಾರ ಹಾಕಿರುವ ಬಿಜೆಪಿ ಕೇಂದ್ರ ನಾಯಕತ್ವ, ಭಿನ್ನಮತೀಯರ ಅಹವಾಲುಗಳನ್ನು ಸಹ ಆಲಿಸಲಾಗುವುದು ಎಂದು ಹೇಳಿದೆ. ಆದರೆ, ಸಾರ್ವಜನಿಕ ವಲಯದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಬಹುದಾದ ಯಾವುದೇ ಚಟುವಟಿಕೆಗಳನ್ನು ಸಹಿಸಲಾಗದು ಎಂದೂ ಪಕ್ಷ ಎಚ್ಚರಿಕೆ ನೀಡಿದೆ.

2022ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಸದ್ಯ ಬಿಜೆಪಿಯ ಆದ್ಯತೆಯ ವಿಷಯವಾಗಿದೆ. ಹೀಗಾಗಿಯೇ ಪಕ್ಷ ಮತ್ತೊಮ್ಮೆ ಯೋಗಿ ಆದಿತ್ಯನಾಥ ನೇತೃತ್ವದಲ್ಲಿಯೇ ಚುನಾವಣೆ ಎದುರಿಸುವ ಮುನ್ಸೂಚನೆ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಿಎಂ ವಿರುದ್ಧದ ಎಲ್ಲ ದೂರುಗಳನ್ನು ಆಲಿಸಿದ ಹೈಕಮಾಂಡ್

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​. ಸಂತೋಷ ಚುನಾವಣಾ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳಲು ಈಗಾಗಲೇ ರಾಜಧಾನಿ ಲಖನೌದಲ್ಲಿ ಬೀಡು ಬಿಟ್ಟಿರುವುದು ಗಮನಾರ್ಹ. ರಾಜ್ಯದ ಹಲವಾರು ಮುಖಂಡರೊಂದಿಗೆ ಅವರು ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಕೋವಿಡ್​ ಸ್ಥಿತಿ ನಿರ್ವಹಣೆ, ಜನತೆಯಲ್ಲಿ ಅತೃಪ್ತಿಯ ಭಾವನೆ, ಸರ್ಕಾರ ಹಾಗೂ ಹಿರಿಯ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ ಮುಂತಾದ ವಿಷಯಗಳ ಬಗ್ಗೆ ರಾಜ್ಯ ನಾಯಕರು ಸಂತೋಷ ಅವರ ಗಮನ ಸೆಳೆದಿದ್ದಾರೆ.

ರಾಜ್ಯದ ಸಚಿವರು ಹಾಗೂ ನಾಯಕರೊಂದಿಗೆ ಸಂತೋಷ ಮುಕ್ತವಾಗಿ ಚರ್ಚೆ ನಡೆಸಿದ್ದು, ಪ್ರತಿಯೊಬ್ಬರೂ ತಮ್ಮ ಸಿಟ್ಟನ್ನು ಹೊರಹಾಕಲು ಅವರು ಅವಕಾಶ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಸಿಎಂ ಆದಿತ್ಯನಾಥ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಪರಿಣಾಮಕಾರಿಯಾಗಿ ಬಿಂಬಿಸುವುದೇ ಎಲ್ಲರ ಏಕೈಕ ಗುರಿಯಾಗಿರಬೇಕೆಂದು ಅವರು ಎಲ್ಲ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯೋಗಿ ಬೆನ್ನಿಗೆ ನಿಂತ ಕೇಂದ್ರ ಬಿಜೆಪಿ ವರಿಷ್ಠರು

"ಕೇವಲ ಐದು ವಾರಗಳಲ್ಲಿ ಯೋಗಿ ನೇತೃತ್ವದ ಯುಪಿ ಸರ್ಕಾರವು ಪ್ರತಿದಿನ ದಾಖಲಾಗುತ್ತಿದ್ದ ಹೊಸ ಕೋವಿಡ್​ ಪ್ರಕರಣಗಳನ್ನು ಶೇ 93 ರಷ್ಟು ಕಡಿಮೆ ಮಾಡಿದೆ. ಉತ್ತರ ಪ್ರದೇಶದ ಜನಸಂಖ್ಯೆ 20 ಕೋಟಿಗೂ ಮೀರಿದೆ ಎಂಬುದು ಗಮನದಲ್ಲಿರಲಿ. ಒಂದು ಮುನಿಸಿಪಾಲಿಟಿಯಷ್ಟು ದೊಡ್ಡ, ಕೇವಲ 1.5 ಕೋಟಿ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದ ಸಿಎಂ ಕೋವಿಡ್​ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಅಂಥದರಲ್ಲಿ ಯೋಗಿ ಆದಿತ್ಯನಾಥ ಬಹಳಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ." ಎಂದು ಬಿ.ಎಲ್​. ಸಂತೋಷ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಲಖನೌ ರಾಜಕೀಯ ಪಡಸಾಲೆಯಲ್ಲಿ ಯೋಗಿ ವಿರುದ್ಧ ಹಲವಾರು ಧ್ವನಿ ಕೇಳಿಬಂದಿದ್ದವು. ಆದರೆ ಕೇಂದ್ರದ ಉನ್ನತ ನಾಯಕರೇ ನೇರವಾಗಿ ದೆಹಲಿಯಿಂದ ಬಂದಿಳಿದಿದ್ದು, ಎಲ್ಲ ಭಿನ್ನಮತೀಯ ನಾಯಕರೊಂದಿಗೆ ಮುಖಾಮುಖಿ ಚರ್ಚೆ ನಡೆಸಿದ್ದಾರೆ. ಈ ಮೂಲಕ ಸಿಎಂ ಆದಿತ್ಯನಾಥ ಅವರೇ ರಾಜ್ಯ ಬಿಜೆಪಿಯ ಮುಖ್ಯ ನಾಯಕರಾಗಿರುವರು ಹಾಗೂ 2022ರ ಚುನಾವಣೆ ಅವರ ನೇತೃತ್ವದಲ್ಲೇ ನಡೆಯಲಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ABOUT THE AUTHOR

...view details