ಸಾರ್ವಜನಿಕ ವಲಯದ ಆಸ್ತಿಗೆ ರಕ್ಷಣೆ ನೀಡುವ CISF ಸಂಸ್ಥಾಪನಾ ದಿನ - ಸಿಐಎಸ್ಎಫ್ ಸಂಸ್ಥಾಪನಾ ದಿನ
ಸಾರ್ವಜನಿಕ ವಲಯದ ಪ್ರಮುಖ ಸಂಸ್ಥೆಗಳಿಗೆ ಭದ್ರತೆ ಒದಗಿಸುವ ಸಲುವಾಗಿ ಮಾರ್ಚ್ 10, 1969ರಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಇಂದಿಗೆ 51 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. 5 ದಶಕದ ಅವಧಿಯಲ್ಲಿ ಈ ವಿಶೇಷ ಪಡೆ ದೇಶದ ಅಮೂಲ್ಯ ಆಸ್ತಿಗಳನ್ನು ಸಂರಕ್ಷಿಸುವಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಂಸ್ಥಾಪನಾ ದಿನ
By
Published : Mar 10, 2021, 6:01 AM IST
ಪರಿಚಯ :ರಾಂಚಿಯ ಹೆಚ್‌ಇಸಿಯಲ್ಲಿ ಸಂಭವಿಸಿದ ಪ್ರಮುಖ ಬೆಂಕಿ ಅವಘಡದ ನಂತರ 1969 ರಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಅಸ್ತಿತ್ವಕ್ಕೆ ಬಂತು. ಕಳೆದ 50 ವರ್ಷಗಳಲ್ಲಿ ಈ ಪಡೆಯು ಅನೇಕ ಏರಿಳಿತಗಳನ್ನು ಕಂಡಿದೆ. ಸಾರ್ವಜನಿಕ ವಲಯದ ಸಂಸ್ಥೆಗಳ ನೌಕರರಿಗೆ ರಕ್ಷಣೆ ಮತ್ತು ಸುರಕ್ಷತೆ ನೀಡುವುದು ಮತ್ತು ಆಸ್ತಿಯನ್ನು ಸಂರಕ್ಷಿಸುವ ಸಲುವಾಗಿ ಈ ಪಡೆಯನ್ನು ಸ್ಥಾಪಿಸಲಾಗಿದೆ.
ಭದ್ರತೆಯ ಕ್ರಿಯಾತ್ಮಕ ಸ್ವರೂಪದ ಬದಲಾಗುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ, ಈ ಪಡೆಯು ಕೈಗಾರಿಕಾ ಭದ್ರತಾ ಶಕ್ತಿಯಾಗಿರುವುದರಿಂದ ಬಹು-ಪ್ರತಿಭಾನ್ವಿತ, ಬಹು-ಕಾರ್ಯ ಮತ್ತು ಬಹುಮುಖಿ ಶಕ್ತಿಯಾಗಿ ರೂಪಾಂತರಗೊಂಡಿದೆ ಮತ್ತು ವೃತ್ತಿಪರ ಸೇವೆಗಳ ಸ್ವರೂಪವನ್ನು ವಿಕಸನಗೊಳಿಸಿದೆ. ನವೀಕರಿಣಗೊಂಡು ಭವಿಷ್ಯದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ.
ನೀತಿಗಳು:
ದೃಷ್ಟಿಕೋನ- ಆಂತರಿಕ ಭದ್ರತೆಯನ್ನು ಎತ್ತಿಹಿಡಿಯುವ ಮತ್ತು ರಾಷ್ಟ್ರದ ನಿರ್ಣಾಯಕ ಮೂಲಸೌಕರ್ಯ ಮತ್ತು ಸ್ವತ್ತುಗಳನ್ನು ಭದ್ರಪಡಿಸುವ ಪ್ರಧಾನ ಬಹುಮುಖಿ ಶಕ್ತಿಯಾಗಿರುವುದು.
ಕಾರ್ಯ - ಸಂಪನ್ಮೂಲಗಳ ಅತ್ಯುತ್ತಮ ಬಳಕೆ, ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವುದು ಮತ್ತು ಪ್ರಮುಖ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಮತ್ತು ಸಮಗ್ರ ಭದ್ರತಾ ಪರಿಹಾರಗಳನ್ನು ಒದಗಿಸುವ ಮೂಲಕ ಸಂಸ್ಥೆಯ ಉದ್ದೇಶವನ್ನು ಕಡಿಮೆ ವೆಚ್ಚದಲ್ಲಿ ನಿರ್ವಹಿಸುವುದು.
ಧ್ಯೇಯವಾಕ್ಯ - ರಕ್ಷಣೆ ಮತ್ತು ಭದ್ರತೆ
ಇಥೋಸ್ - ಇಥೋಸ್ ಮುಖ್ಯವಾಗಿ ವ್ಯಕ್ತಿ, ಗುಂಪು, ಸಂಘಟನೆಯ ಮಾರ್ಗದರ್ಶನ ನಂಬಿಕೆಗಳನ್ನು ಸೂಚಿಸುತ್ತದೆ. ಉದಾ: ರಾಷ್ಟ್ರಕ್ಕೆ ಸೇವೆ, ತಾರತಮ್ಯರಹಿತವಾಗಿರುವುದು ಇತ್ಯಾದಿ. ಇಥೋಸ್ “ಜೀವನ ಮಾರ್ಗ” ವನ್ನು ವ್ಯಾಖ್ಯಾನಿಸುತ್ತದೆ. ಇದು ಜನರ ಗುಂಪಿನ ಜೀವಂತ ಮನೋಭಾವ.
ನೈತಿಕತೆ - ಎತಿಕ್ಸ್ ಅಥವಾ ನೈತಿಕತೆ ಎಂಬ ಪದವು ಗ್ರೀಕ್ ಪದ “ಇಥೋಸ್” ನಿಂದ ಬಂದಿದೆ. ಇದು ಒಂದು ಗುಂಪು, ಸಮುದಾಯ ಅಥವಾ ಜನರನ್ನು ವ್ಯಾಪಿಸಿರುವ ಪಾತ್ರ, ಮಾರ್ಗದರ್ಶನ ನಂಬಿಕೆಗಳು, ಮಾನದಂಡಗಳು ಅಥವಾ ಆದರ್ಶಗಳನ್ನು ಸೂಚಿಸುತ್ತದೆ. ಸರಳ ಪದಗಳಲ್ಲಿ ನೈತಿಕತೆಯು ಮಾನದಂಡಗಳ ಒಂದು ಗುಂಪು ಅಥವಾ ಒಂದು ಕೋಡ್ ಅಥವಾ ಮೌಲ್ಯ ವ್ಯವಸ್ಥೆ. ಇದರ ಮೂಲಕ ಮಾನವ ಕ್ರಿಯೆಗಳನ್ನು ಸರಿ ಅಥವಾ ತಪ್ಪು, ಒಳ್ಳೆಯದು ಅಥವಾ ಕೆಟ್ಟದು ಎಂದು ನಿರ್ಧರಿಸಲಾಗುತ್ತದೆ.
ಮೌಲ್ಯಗಳು - ಮೌಲ್ಯ ವ್ಯವಸ್ಥೆಯು ವ್ಯಕ್ತಿಯ ನಡವಳಿಕೆಯನ್ನು ಮಾರ್ಗದರ್ಶಿಸುವ ಮತ್ತು ಪ್ರಭಾವಿಸುವ ಚೌಕಟ್ಟಾಗಿದೆ. ಜನರ ನಡವಳಿಕೆ ಮತ್ತು ಗ್ರಹಿಕೆ, ವ್ಯಕ್ತಿತ್ವ ಮತ್ತು ಪ್ರೇರಣೆಯಿಂದ ಮೌಲ್ಯಗಳನ್ನು ಗ್ರಹಿಸಬಹುದು.
ಸಿಐಎಸ್ಎಫ್ ಸಂಸ್ಥಾಪನಾ ದಿನ: ಸಿಐಎಸ್ಎಫ್ ಸಂಸ್ಥಾಪನಾ ದಿನವನ್ನು ಪ್ರತಿವರ್ಷ ಮಾರ್ಚ್ 10 ರಂದು ಆಚರಿಸಲಾಗುತ್ತದೆ. ಮಾರ್ಚ್ 10, 1969 ರಂದು ಸುಮಾರು 3,129 ಸಿಬ್ಬಂದಿಯೊಂದಿಗೆ ಸಂಸತ್ನ ವಿಶೇಷ ಕಾಯ್ದೆಯಡಿ ಸಿಐಎಸ್ಎಫ್ ಅನ್ನು ಸ್ಥಾಪಿಸಲಾಯಿತು. ಹೆಸರೇ ಸೂಚಿಸುವಂತೆ ದೇಶದ ಕೈಗಾರಿಕಾ ಸಂಸ್ಥೆಗಳ ರಕ್ಷಣೆ ಮತ್ತು ಸುರಕ್ಷತೆಗಾಗಿ ಇದನ್ನು ರಚಿಸಲಾಗಿದೆ.
ಸಿಐಎಸ್ಎಫ್ ಕುರಿತು :
ಸಿಐಎಸ್ಎಫ್ ಒಕ್ಕೂಟ ಸಶಸ್ತ್ರ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಾಯ್ದೆ, 1968 (1968 ರ 50) ರ ಅಡಿ ಇದನ್ನು ಸ್ಥಾಪಿಸಲಾಗಿದೆ.
1969 ರಲ್ಲಿ, 3,129 ಸಿಬ್ಬಂದಿಯೊಂದಿಗೆ ಇದನ್ನು ಸ್ಥಾಪಿಸಲಾಯಿತು.
ಸಿಐಎಸ್ಎಫ್ 12 ಮೀಸಲು ಬೆಟಾಲಿಯನ್ಗಳು, 8 ತರಬೇತಿ ಸಂಸ್ಥೆಗಳು ಮತ್ತು 63 ಇತರ ಅಂಗಗಳನ್ನು ಹೊಂದಿದೆ.
ನಿಯಮದ ಪ್ರಕಾರ, ಸಿಐಎಸ್ಎಫ್ ಸಂಸ್ಥೆಗಳ ಸಿಬ್ಬಂದಿ, ಆಸ್ತಿ ಮತ್ತು ಸಂಸ್ಥೆಗಳ ಸುರಕ್ಷತೆಗೆ ಭದ್ರತೆ ಒದಗಿಸುತ್ತದೆ.
ಸಿಐಎಸ್ಎಫ್ ಬಾಹ್ಯಾಕಾಶ ಇಲಾಖೆ, ಪರಮಾಣು ಇಂಧನ ಇಲಾಖೆ, ವಿಮಾನ ನಿಲ್ದಾಣಗಳು, ದೆಹಲಿ ಮೆಟ್ರೋ, ಬಂದರುಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಭಾರತೀಯ ಆರ್ಥಿಕತೆಯ ಮೂಲ ಕ್ಷೇತ್ರಗಳಾದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಿದ್ಯುತ್, ಕಲ್ಲಿದ್ದಲು, ಉಕ್ಕು ಮತ್ತು ಗಣಿಗಾರಿಕೆ ಸೇರಿದಂತೆ ವಿವಿಧ ಪ್ರಮುಖ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುತ್ತದೆ.
ಸಿಐಎಸ್ಎಫ್ ದೆಹಲಿಯ ಕೆಲವು ಖಾಸಗಿ ವಲಯದ ಘಟಕಗಳು ಮತ್ತು ಪ್ರಮುಖ ಸರ್ಕಾರಿ ಕಟ್ಟಡಗಳಿಗೆ ರಕ್ಷಣೆ ನೀಡುತ್ತಿದೆ.
ಪ್ರಸ್ತುತ, ಸಿಐಎಸ್ಎಫ್ ಝಡ್ ಪ್ಲಸ್, ಝಡ್, ಎಕ್ಸ್, ವೈ ಎಂದು ವರ್ಗೀಕರಿಸಲಾದ ವ್ಯಕ್ತಿಗಳಿಗೆ ಕೂಡ ಭದ್ರತೆಯನ್ನು ಒದಗಿಸುತ್ತಿದೆ.
ಕಸ್ಟಮೈಸ್ ಮಾಡಿದ ಮತ್ತು ಮೀಸಲಾದ ಅಗ್ನಿಶಾಮಕ ವಿಭಾಗವನ್ನು ಹೊಂದಿರುವ ಏಕೈಕ ಪಡೆ ಸಿಐಎಸ್ಎಫ್.
ಸಿಐಎಸ್ಎಫ್ ಸರಿದೂಗಿಸುವ ವೆಚ್ಚದ ಶಕ್ತಿಯಾಗಿದೆ.
ಸಿಐಎಸ್ಎಫ್ ಸಂಸ್ಥಾಪನಾ ದಿನ :
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನೇರವಾಗಿ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆ ಮತ್ತು ಇದರ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ. ಸಿಐಎಸ್ಎಫ್ 1969 ರಲ್ಲಿ ಮೂರು ಬೆಟಾಲಿಯನ್ಗಳೊಂದಿಗೆ ಅಸ್ತಿತ್ವಕ್ಕೆ ಬಂದವು. ಸಾರ್ವಜನಿಕ ವಲಯದ ಉದ್ಯಮಗಳಿಗೆ (ಪಿಎಸ್‌ಯು) ಸಮಗ್ರ ಭದ್ರತಾ ಅಥವಾ ರಕ್ಷಣೆಯನ್ನು ಒದಗಿಸುತ್ತದೆ.
ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣದೊಂದಿಗೆ ನಾಲ್ಕು ದಶಕಗಳ ಅವಧಿಯಲ್ಲಿ ಈ ಪಡೆಯ ಸಿಬ್ಬಂದಿ ಸಂಖ್ಯೆ 1, 48, 321 ಆಗಿದೆ. ಸಿಐಎಸ್ಎಫ್ ಇಂದು ಕೇವಲ ಪಿಎಸ್‌ಯು ಕೇಂದ್ರಿತ ಸಂಸ್ಥೆಯಾಗಿ ಉಳಿದಿಲ್ಲ. ಬದಲಾಗಿ, ಇದು ದೇಶದ ಪ್ರಮುಖ ಬಹು-ನುರಿತ ಭದ್ರತಾ ಸಂಸ್ಥೆಯಾಗಿ ಮಾರ್ಪಟ್ಟಿದೆ. ಇದು ವಿವಿಧ ಪ್ರದೇಶಗಳಲ್ಲಿ ದೇಶದ ಪ್ರಮುಖ ನಿರ್ಣಾಯಕ ಮೂಲಸೌಕರ್ಯ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುತ್ತದೆ.
ಸಿಐಎಸ್ಎಫ್ ಪ್ರಸ್ತುತ ಪರಮಾಣು ಸಂಸ್ಥೆ, ಬಾಹ್ಯಾಕಾಶ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ವಿದ್ಯುತ್ ಸ್ಥಾವರಗಳು, ಸೂಕ್ಷ್ಮ ಸರ್ಕಾರಿ ಕಟ್ಟಡಗಳು ಮತ್ತು ಪಾರಂಪರಿಕ ಸ್ಮಾರಕಗಳಿಗೆ ಭದ್ರತೆಯನ್ನು ಒದಗಿಸುತ್ತಿದೆ. ಪಸ್ತುತ 300 ಕೈಗಾರಿಕಾ ಘಟಕಗಳು, ಸರ್ಕಾರಿ ಮೂಲಸೌಕರ್ಯ ಯೋಜನೆಗಳು ಮತ್ತು ಭಾರತದಾದ್ಯಂತ ಇರುವ ಸೌಲಭ್ಯಗಳು ಮತ್ತು ಸಂಸ್ಥೆಗಳಿಗೆ ರಕ್ಷಣೆಯನ್ನು ಒದಗಿಸುತ್ತದೆ.
ಸಾಧನೆಗಳು :
ಚಿನ್ನ
ಬೆಳ್ಳಿ
ಕಂಚು
ಒಟ್ಟು
ಅಂತಾರಾಷ್ಟ್ರೀಯ -2019
07
03
02
12
ಇತರೆ ಟೂರ್ನಮೆಂಟ್ 2019
-
01
02
03
ಮುಖ್ಯಾಂಶಗಳು :
ಸಂಸ್ಥಾಪನಾ ದಿನದಂದು ಸಿಐಎಸ್ಎಫ್ ಅಧಿಕಾರಿಗಳು ಪರೇಡ್ ನಡೆಸುತ್ತಾರೆ
ಸೇವಾ ಸಿಬ್ಬಂದಿಗೆ ವಿಶೇಷ ಮತ್ತು ಶ್ರೇಷ್ಠ ಸೇವೆಗಳಿಗಾಗಿ ಪದಕಗಳನ್ನು ನೀಡಲಾಗುತ್ತದೆ
ಪ್ರಧಾನಿ ಹುತಾತ್ಮರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡುತ್ತಾರೆ.
ದೇಶದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಿಐಎಸ್ಎಫ್ ಜೊತೆ ಸಹಕರಿಸಲು ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.
ಸಿಐಎಸ್ಎಫ್ ಏರೋಸ್ಪೇಸ್, ಪರಮಾಣು, ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿನ ಕೆಲವು ಪ್ರಮುಖ ಸಂಸ್ಥೆಗಳ ಮೂಲಕ ದೇಶವನ್ನು ರಕ್ಷಿಸುತ್ತದೆ.
ವಿಪತ್ತು ನಿರ್ವಹಣೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.