ಕರ್ನಾಟಕ

karnataka

ETV Bharat / bharat

ಕೊರೋನಾ ಅಬ್ಬರ.. ಮಾಸ್ಕ ಕಡ್ಡಾಯ ಮತ್ತು ಟಿ 3 ಸೂತ್ರಕ್ಕೆ ಕೇಂದ್ರದ ಸೂಚನೆ - ಕೊರೋನಾ ಅಬ್ಬರ

ದೇಶದಲ್ಲೂ ರೂಪಾಂತರಿ ಕೊರೋನಾ ಕೇಸ್​ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಭೆ ಮಾಡಿ ಸೂಚನೆಗಳನ್ನು ಹೊರಡಿಸಿದೆ.

central govt guidelines for corona
ಪ್ರಧಾನಿ ನರೇಂದ್ರ ಮೋದಿ

By

Published : Dec 23, 2022, 7:19 AM IST

ನವದೆಹಲಿ​: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನದಲ್ಲಿರಿಸಿ ಮತ್ತು ದೇಶದಲ್ಲಿ ಪತ್ತೆಯಾದ ಹೊಸಾ ರೂಪಾಂತರಿ ವೈರಾಣು ಬಿಎಘ್​ 7, ಬಿಎಫ್​ 12 ಪತ್ತೆಯಾದ ಹಿನ್ನೆಲೆಯಲ್ಲಿ ಕೋವಿಡ್ -19 ರ ಕುರಿತು ಸಾರ್ವಜನಿಕ ಆರೋಗ್ಯ ಪ್ರಕ್ರಿಯೆಯ ಸ್ಥಿತಿಗತಿ ಮತ್ತು ಸನ್ನದ್ಧತೆ ಪರಿಶೀಲಿಸುವ ಉನ್ನತ ಮಟ್ಟದ ಸಭೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ, ಗೃಹ ಸಚಿವ ಅಮಿತ್​ ಶಾ, ವೈಮಾನಿಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಉನ್ನತ ಅಧಿಕಾರಿಗಳು ಸಭೆಯಲ್ಲಿ ವರ್ಚುಯಲ್​ ಮೂಲಕ ಭಾಗವಹಿಸಿದ್ದರು.

ಡಿಸೆಂಬರ್ 24 ರಿಂದ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಬರುವ ಪ್ರಯಾಣಿಕರನ್ನು ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಹಿಂದೆ ಮೂರು ಅಲೆಗಳಲ್ಲಿ ಅನುಸರಿಸಿದ T 3 ಸೂತ್ರ(ಟೆಸ್ಟ್​, ಟ್ರೇಸ್​, ಟ್ರೀಟ್​)ವನ್ನು ಕೇಂದ್ರೀಕರಿಸುವ ಮೂಲಕ ಮುನ್ನೆಚ್ಚರಿಕಾ ಅಗತ್ಯ ಕ್ರಮಗಳನ್ನು ನಡೆಸಲು ಸೂಚಿಸಲಾಗಿದೆ.

  • ಕೋವಿಡ್ ಇನ್ನೂ ಮುಗಿದಿಲ್ಲ ಎಂದು ಕೋವಿಡ್‌ ಕುರಿತು ಸ್ಪಷ್ಟ ಸಂದೇಶ ನೀಡಿದ ಪ್ರಧಾನಮಂತ್ರಿಗಳು ಕಟ್ಟುನಿಟ್ಟಿನ ಮುಂಜಾಗರೂಕತೆಗೆ ಸಲಹೆ ನೀಡಿದರು. ವಿಶೇಷವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ನಡೆಯುತ್ತಿರುವ ಪರೀಕ್ಷಣಾ ಕಣ್ಗಾವಲು ಕ್ರಮವ್ಯವಸ್ಥೆಗಳನ್ನು ಇನ್ನೂ ಬಲಪಡಿಸಲು ಅಧಿಕಾರಿಗಳಿಗೆ ಪ್ರಧಾನಮಂತ್ರಿ ಅವರು ನಿರ್ದೇಶನ ನೀಡಿದ್ದಾರೆ.
  • ಕೋವಿಡ್ ನಿರ್ದಿಷ್ಟ ಸೌಲಭ್ಯಗಳನ್ನು ಪೂರ್ವಭಾವಿಯಾಗಿ ಆಕ್ಸಿಜನ್ ಸಿಲಿಂಡರ್‌ಗಳು, ಪಿ.ಎಸ್‌.ಎ. ಪ್ಲಾಂಟ್‌ಗಳು, ವೆಂಟಿಲೇಟರ್‌ಗಳು ಮತ್ತು ಮಾನವ ಸಂಪನ್ಮೂಲ ಸೇರಿದಂತೆ ಆಸ್ಪತ್ರೆಯ ಮೂಲಸೌಕರ್ಯಗಳ ಕಾರ್ಯಾಚರಣೆಯ ಸಿದ್ಧತೆ ಖಚಿತಪಡಿಸಿಕೊಳ್ಳಲು ಸೂಚನೆ.
  • ಕ್ರಿಸ್​ ಮಸ್​ ಮತ್ತು ಹೊಸ ವರ್ಷಾಚರಣೆಯ ದೃಷ್ಟಿಯಿಂದ, ಕಿಕ್ಕಿರಿದ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸುಗಳನ್ನು ಕಡ್ಡಾಯವಾಗಿ ಧರಿಸುವುದು ಸೇರಿದಂತೆ, ಕೋವಿಡ್ ಕುರಿತು ಸೂಕ್ತ ಮುನ್ನೆಚ್ಚರಿಕೆ ಮತ್ತು ನಡವಳಿಕೆಗಳನ್ನು ಎಲ್ಲ ಸಮಯದಲ್ಲೂ ಕಟ್ಟುನಿಟ್ಟಾಗಿ ಅನುಸರಿಸುವಂತೆ ಹಾಗೂ ವಿಶೇಷವಾಗಿ ಆರೋಗ್ಯ ಸಮಸ್ಯೆಯವರು, ದುರ್ಬಲರು ಮತ್ತು ವಯಸ್ಸಾದ ವರ್ಗದವರುಗಳಿಗೆ ಇಂತಹ ಮುನ್ನೆಚ್ಚರಿಕೆ ಪ್ರಮಾಣಗಳನ್ನು ಪ್ರತಿದಿನವೂ ಪಾಲಿಸಲು ಪ್ರೋತ್ಸಾಹಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ:ಮತ್ತೆ ಶುರುವಾಯ್ತು ಕೋವಿಡ್ ಆತಂಕ: ಇಂದು ಉನ್ನತ ಮಟ್ಟದ ಸಭೆ ಕರೆದ ಮೋದಿ

ABOUT THE AUTHOR

...view details