ನವದೆಹಲಿ:ಭವಿಷ್ಯ ನಿಧಿಯ ಮೇಲಿನ ಬಡ್ಡಿದರವನ್ನು ಕಡಿತ ಮಾಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಅಲ್ಲದೇ, ಇತರೆ ಸಣ್ಣ ಉಳಿತಾಯ ಯೋಜನೆಗಳು ನೀಡುವ ಬಡ್ಡಿದರಕ್ಕಿಂತ ಉದ್ಯೋಗಿಗಳ ಭವಿಷ್ಯ ನಿಧಿಗೆ ನೀಡಲಾಗುವ ಬಡ್ಡಿದರ ಉತ್ತಮವಾಗಿದೆ ಎಂದು ಹೇಳಿದೆ.
ಈ ಬಗ್ಗೆ ರಾಜ್ಯಸಭೆಯಲ್ಲಿ ವಿನಿಯೋಗ ಮಸೂದೆಗಳ ಮೇಲೆ ನಡೆದ ಚರ್ಚೆಯಲ್ಲಿ ಉತ್ತರ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ನಿಗದಿ ಮಾಡುವ ಅಧಿಕಾರ ಇಪಿಎಫ್‌ಒ ಕೇಂದ್ರೀಯ ಮಂಡಳಿಗೆ ಇದೆ. ಅದು ಆಯಾ ಕಾಲಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ. ಈಗಿರುವ ಶೇ.8.4 ರಿಂದ 8.1ಕ್ಕೆ ಇಳಿಸುವ ನಿರ್ಧಾರ ಮಂಡಳಿಗೆ ಸೇರಿದ್ದು. ಅಲ್ಲದೇ, ಇದು ಉತ್ತಮ ನಿರ್ಧಾರ ಎಂದು ಹೇಳಿದ್ದಾರೆ.