ಕರ್ನಾಟಕ

karnataka

ETV Bharat / bharat

ಸರ್ಕಾರಿ ವೆಚ್ಚದಲ್ಲಿ ಉಕ್ರೇನ್​ನಿಂದ 22,500 ಭಾರತೀಯರ ರಕ್ಷಣೆ: ಕೇಂದ್ರ ಸರ್ಕಾರ - ರಾಜ್ಯಸಭೆಗೆ ಉಕ್ರೇನ್​ ರಕ್ಷಣಾ ಕಾರ್ಯಾಚರಣೆ ಮಾಹಿತಿ

ಉಕ್ರೇನ್​ ಗಡಿ ದೇಶಗಳಾದ ಹಂಗೇರಿ, ರೊಮೇನಿಯಾ, ಪೋಲೆಂಡ್​ನಿಂದ 22,500 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ. ಅದರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಿದೆ ಎಂದು ಕೇಂದ್ರ ಸಚಿವ ವಿಕೆ ಸಿಂಗ್​ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

central-government
ಕೇಂದ್ರ ಸರ್ಕಾರ

By

Published : Mar 21, 2022, 8:47 PM IST

ನವದೆಹಲಿ: ಫೆಬ್ರವರಿ 1 ಮತ್ತು ಮಾರ್ಚ್ 11 ರ ನಡುವೆ 22,500 ಭಾರತೀಯ ನಾಗರಿಕರನ್ನು ಉಕ್ರೇನ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ವಿಮಾನಯಾನ ಖಾತೆ ರಾಜ್ಯ ಸಚಿವ ನಿವೃತ್ತ ಜನರಲ್ ವಿ.ಕೆ.ಸಿಂಗ್ ರಾಜ್ಯಸಭೆಗೆ ತಿಳಿಸಿದರು.

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬಳಿಕ ಅಂದರೆ ಫೆ.26 ರಿಂದ ಕೇಂದ್ರ ಸರ್ಕಾರ ಉಕ್ರೇನ್‌ನ ನೆರೆಯ ದೇಶಗಳಾದ ಹಂಗೇರಿ, ರೊಮೇನಿಯಾ ಮತ್ತು ಪೋಲೆಂಡ್‌ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಿದೆ ಎಂದು ಅವರು ಹೇಳಿದರು.

ಭಾರತೀಯರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಆಪರೇಷನ್​ ಗಂಗಾ ಕಾರ್ಯಾಚರಣೆಯಡಿ ಸುಮಾರು 90 ವಿಮಾನಗಳಲ್ಲಿ 22,500 ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರನ್ನು ಕರೆತರಲಾಗಿದೆ. ವಾಯುಪಡೆಗೆ ಸೇರಿದ 14 ವಿಮಾನಗಳು ಕೂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ ಎಂದು ಅವರು ಹೇಳಿದರು.

ಇದನ್ನೂಓದಿ:2018-2020ರಲ್ಲಿ 1 ಲಕ್ಷಕ್ಕೂ ಅಧಿಕ ಸೇನಾ ನೇಮಕಾತಿ : ಕೇಂದ್ರ ಸಚಿವ ರಾಜನಾಥ್ ಸಿಂಗ್

ABOUT THE AUTHOR

...view details