ಕೋಲ್ಕತ್ತಾ: ವಿಧಾನ ಸಭಾ ಚುನಾವಣೆಗಳ ನಂತರ ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದಿರುವ ರಾಜಕೀಯ ಹಿಂಸಾಚಾರದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರದ ನಾಲ್ಕು ಸದಸ್ಯರನ್ನೊಳಗೊಂಡ ನಿಯೋಗವೊಂದು ಇಲ್ಲಿಗೆ ಆಗಮಿಸಿದ್ದು, ರಾಜಭವನಕ್ಕೆ ಭೇಟಿ ನೀಡಿದೆ.
ಪ. ಬಂಗಾಳಕ್ಕೆ ಕೇಂದ್ರ ನಿಯೋಗ ಭೇಟಿ; ರಾಜಕೀಯ ಹಿಂಸಾಚಾರ ಸ್ಥಿತಿಯ ಅವಲೋಕನ
ವಿಧಾನ ಸಭಾ ಚುನಾವಣೆಗಳ ನಂತರ ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ರಾಜಕೀಯ ಹಿಂಸಾಚಾರ ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಸರ್ಕಾರದ ನಿಯೋಗವು ರಾಜ್ಯಕ್ಕೆ ಭೇಟಿ ನೀಡಿದೆ.
ಪ. ಬಂಗಾಳಕ್ಕೆ ಕೇಂದ್ರ ನಿಯೋಗ ಭೇಟಿ; ರಾಜಕೀಯ ಹಿಂಸಾಚಾರ ಸ್ಥಿತಿಯ ಅವಲೋಕನ
ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಗೋವಿಂದ ಮೋಹನ ನೇತೃತ್ವದ ನಿಯೋಗವು ರಾಜಭವನದಲ್ಲಿ ಈ ಕುರಿತು ರಾಜ್ಯಪಾಲ ಜಗದೀಪ್ ಧಂಕರ್ ಅವರೊಂದಿಗೆ ಚರ್ಚೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ರಾಜ್ಯದ ಒಟ್ಟಾರೆ ಕಾನೂನು ಸುವ್ಯವಸ್ಥೆ ಕುರಿತಾಗಿ ರಾಜ್ಯಪಾಲರೊಂದಿಗೆ ವಿಚಾರ ವಿನಿಮಯ ನಡೆದಿದೆ.
ರಾಜ್ಯ ಗೃಹ ಕಾರ್ಯದರ್ಶಿಯವರೊಂದಿಗೂ ನಿಯೋಗ ಚರ್ಚೆ ನಡೆಸಿದೆ. ರಾಜ್ಯದಲ್ಲಿ ಭದ್ರತಾ ವ್ಯವಸ್ಥೆ ಲೋಪದ ಉಂಟಾಗಿರುವ ಆರೋಪಗಳ ಹಿನ್ನೆಲೆಯಲ್ಲಿ ಕೇಂದ್ರ ನಿಯೋಗವು ರಾಜ್ಯಕ್ಕೆ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.