ಕರ್ನಾಟಕ

karnataka

ETV Bharat / bharat

Bank Jobs: ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ 1000 ಮ್ಯಾನೇಜರ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ.. ಪದವೀಧರರಿಗೆ ಅವಕಾಶ - ಈಟಿವಿ ಭಾರತ್​ ಕನ್ನಡ

ಗ್ರೇಡ್​​ ಸ್ಕೇಲ್​ 2 ಹುದ್ದೆಗಳು ಇವಾಗಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

central Bank of India invited application for Manager post
central Bank of India invited application for Manager post

By

Published : Jul 4, 2023, 12:07 PM IST

ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ ದೇಶಾದ್ಯಂತ 1000 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ತನ್ನ 4500 ಬ್ರಾಂಚ್​ಗಳಲ್ಲಿ ಖಾಲಿ ಇರುವ ಮುಖ್ಯವಾಹಿನಿಯ ಮ್ಯಾನೇಜರ್​​ ಹುದ್ದೆ ನೇಮಕಾತಿಗೆ ಆದೇಶ ಹೊರಡಿಸಿದೆ. ಗ್ರೇಡ್​​ ಸ್ಕೇಲ್​ 2 ಹುದ್ದೆಗಳು ಇವಾಗಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಹಾಕಬುದಾಗಿದೆ.

ಹುದ್ದೆ ವಿವರ: ಮುಖ್ಯವಾಹಿನಿ ವರ್ಗದ ಮಿಡಲ್​ ಮ್ಯಾನೇಜ್​ಮೆಂಟ್​ ಗ್ರೇಡ್​ ಸ್ಕೇಲ್​ 2ನ 1000 ಮ್ಯಾನೇಜರ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು. ಈ ಹುದ್ದೆಗಳಿಗೆ ಮಾಸಿಕ 69,810 ರೂ. ವೇತನ ನಿಗದಿ ಮಾಡಲಾಗಿದೆ.

ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 32 ವರ್ಷ ಮೀರಿರಬಾರದು. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 175 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ. ಇತರೆ ಅಭ್ಯರ್ಥಿಗಳಿಗೆ 850 ರೂ. ಅರ್ಜಿ ಶುಲ್ಕ ವಿಧಿಸಲಾಗಿದೆ.

ಹುದ್ದೆ ಅನುಭವ: ಖಾಸಗಿ ವಲಯದ ಬ್ಯಾಂಕ್​ ಅಥವಾ ಆರ್​ಆರ್​ಬಿಯಲ್ಲಿ ಕನಿಷ್ಠ ಮೂರು ವರ್ಷ ಹುದ್ದೆ ಮಾಡಿದ ಅನುಭವ. ಅಥವಾ ಎಂಬಿಎ ಪದವೀಧರರು ಆರ್​ಆರ್​ಬಿ, ಖಾಸಗಿ ವಲಯದ ಬ್ಯಾಂಕ್​ಗಳಲ್ಲಿ ಕ್ಲರ್ಕ್​ ಆಗಿ ಕೆಲಸ ಮಾಡಿದ್ದರೆ ಆರು ವರ್ಷದ ಹುದ್ದೆ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅಧಿಸೂಚನೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಮುನ್ನ ಅಧಿಕೃತ ಅಧಿಸೂಚನೆಯನ್ನು ಪರಿಶೀಲನೆ ನಡೆಸಿ ಮುಂದುವರೆಯತಕ್ಕದ್ದು. ಅರ್ಜಿ ಸಲ್ಲಿಕೆ ಮಾಡುವಾಗ ನಿಖರ ಮಾಹಿತಿ ಮತ್ತು ವಿವರಗಳನ್ನು ಭರ್ತಿ ಮಾಡಬೇಕು. ಆನ್​ಲೈನ್​ ಅರ್ಜಿ ಶುಲ್ಕದ ಮಾಹಿತಿಯನ್ನು ಭರಿಸಬೇಕು. ಈ ಹುದ್ದೆಗೆ ಜುಲೈ 1 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 15 ಆಗಿದೆ. ಈ ಹುದ್ದೆಗಳ ಆಯ್ಕೆಗೆ ಲಿಖಿತ ಪರೀಕ್ಷೆ ತಾತ್ಕಾಲಿಕವಾಗಿ ಆಗಸ್ಟ್​​ ಎರಡು ಅಥವಾ ಮೂರನೇ ವಾರದಲ್ಲಿ ನಡೆಯಬಹುದು.

ಈ ಹುದ್ದೆ ಕುರಿತು ವಿವರವಾದ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಅಭ್ಯರ್ಥಿಗಳು ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾದ ಅಧಿಕಕೃತ ಜಾಲತಾಣ centralbankofindia.co.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: IBPS Recruitment: ಪಿಎನ್​ಬಿ ಸೇರಿದಂತೆ ಹಲವು ಬ್ಯಾಂಕ್​ಗಳಲ್ಲಿ 4045 ಕ್ಲರ್ಕ್​ ಹುದ್ದೆಗೆ ನೇಮಕಾತಿ; ಪದವಿ ಆದವರಿಗೆ ಅವಕಾಶ

ABOUT THE AUTHOR

...view details