ನವದೆಹಲಿ: ಕೋವಾಕ್ಸಿನ್ ಬಳಕೆಗೆ ಅನುಮತಿ ನೀಡಿರುವುದಕ್ಕೆ ಕೇಳಿ ಬರುತ್ತಿರುವ ಟೀಕೆಗಳಿಗೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, ಸಾರ್ವಜನಿಕರ ಹಿತಾಸಕ್ತಿಗಾಗಿ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ತುರ್ತು ಪರವಾನಗಿ ನೀಡಲಾಗಿದೆ. ಹಾಗೂ ಲಸಿಕೆ ರೂಪಾಂತರಿ ವೈರಸ್ ಮೇಲೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಾಬೀತುಪಡಿಸಿದೆ ಎಂದು ಪವಾರ್ ಹೇಳಿದ್ದಾರೆ.
ಮೂರನೇ ಹಂತದ ಪರೀಕ್ಷೆಯ ಡೇಟಾ ಪ್ರಕಟಿಸುವ ಮೊದಲು ಕೋವಾಕ್ಸಿನ್ ಅನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕೇಂದ್ರವು ಗಣನೆಗೆ ತೆಗೆದುಕೊಂಡಿದೆಯೇ? ಕೇಂದ್ರ ಸರ್ಕಾರವು ಕೋವಾಕ್ಸಿನ್ ಹೊಸ ಪ್ರಯೋಗದ ನಿಯಮಗಳನ್ನು ಅನುಸರಿಸಲಿಲ್ಲ ಎಂದು ತಿಳಿದಿದೆಯೇ? ಡ್ರಗ್ಸ್ ಅಂಡ್ ಹ್ಯೂಮನ್ಸ್ -2019 '26 ನೇ ಹಂತದ ಪ್ರಯೋಗಗಳಲ್ಲಿ 2020ರ ಡಿಸೆಂಬರ್ 30 ಮತ್ತು 2021ರ ಜನವರಿ 2 ರ ನಡುವೆ ನಡೆಸಲಾಗಿದೆಯೇ? ಸಭೆಯಲ್ಲಿ ಡ್ರಗ್ ಕಂಟ್ರೋಲ್ ಆಫ್ ಇಂಡಿಯಾ (ಡಿಸಿಜಿಐ) ತಜ್ಞರ ಸಮಿತಿ ಕೋವ್ಯಾಕ್ಸಿನ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬದಲಾಯಿಸಿ ಅನುಮೋದಿಸಿದ್ದು. ಕ್ಲಿನಿಕಲ್ ಟ್ರಯಲ್‌ಗೆ ಅನುಮತಿ ಕೊಟ್ಟಿದ್ದಾರಾ? ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಸಚಿವರು ಈ ಸ್ಪಷ್ಟನೆಯ ಉತ್ತರ ನೀಡಿದ್ದಾರೆ.
ಭಾರತದ ಬಯೋಟೆಕ್ ಕಂಪನಿಯು ಹೊಸ ಔಷಧ ಮತ್ತು ಮಾನವರ ಮೇಲಿನ ಪ್ರಯೋಗಗಳ ನಿಯಮಗಳ ಪ್ರಕಾರ ರಸಾಯನಶಾಸ್ತ್ರ, ಉತ್ಪಾದನೆ ಮತ್ತು ನಿಯಂತ್ರಣ (CMC), ವೈದ್ಯಕೀಯೇತರ (ಪ್ರಾಣಿ ಅಧ್ಯಯನಗಳು) ಡೇಟಾವನ್ನು ಸಂಪೂರ್ಣವಾಗಿ ಸಲ್ಲಿಸಿದೆ. ಈ ನಿಷಯವನ್ನು ಕೇಂದ್ರ ಔಷಧ ನಿಯಂತ್ರಣ ಮಂಡಲಿ ಪರಿಶೀಲಿಸಿ ಬಳಿಕವೇ ಕೋವ್ಯಾಕ್ಸಿನ್ ಉತ್ಪಾದನೆ, ಮಾರ್ಕೆಟಿಂಗ್‌ಗೆ ಅನುಮತಿ ನೀಡಿದೆ.