ಕರ್ನಾಟಕ

karnataka

ETV Bharat / bharat

ಟ್ಯಾಗೋರ್ ಹೂಸ್ಟನ್​ಗೆ ಭೇಟಿ ನೀಡಿದ ಶತಮಾನೋತ್ಸವ ಆಚರಣೆ - ಟ್ಯಾಗೋರ್ ಹೂಸ್ಟನ್‌ ಭೇಟಿ ನೀಡಿದ ಶತಮಾನೋತ್ಸವ

ಫೆಬ್ರವರಿ 1921 ರಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಹೂಸ್ಟನ್‌ಗೆ ಭೇಟಿ ನೀಡಿದ ಶತಮಾನೋತ್ಸವವನ್ನು ರೇ ಮಿಲ್ಲರ್ ಪಾರ್ಕ್‌ನ ಟ್ಯಾಗೋರ್ ಗ್ರೋವ್ ಸ್ಮಾರಕದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಟ್ಯಾಗೋರ್ ಅವರ ಸಾರ್ವತ್ರಿಕತೆ ಮತ್ತು ವಿಶ್ವ ಶಾಂತಿಯ ಸಂದೇಶವನ್ನು ಎತ್ತಿ ತೋರಿಸಲಾಯಿತು.

Centenary celebration for Tagore
ಟ್ಯಾಗೋರ್ ಹೂಸ್ಟನ್‌ ಭೇಟಿ ನೀಡಿದ ಶತಮಾನೋತ್ಸವ ಆಚರಣೆ

By

Published : Feb 17, 2021, 12:00 PM IST

ಹೂಸ್ಟನ್:ಫೆಬ್ರವರಿ 1921 ರಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಹೂಸ್ಟನ್‌ಗೆ ಭೇಟಿ ನೀಡಿದ ಶತಮಾನೋತ್ಸವವನ್ನು ರೇ ಮಿಲ್ಲರ್ ಪಾರ್ಕ್‌ನ ಟ್ಯಾಗೋರ್ ಗ್ರೋವ್ ಸ್ಮಾರಕದಲ್ಲಿ ಆಚರಿಸಲಾಯಿತು. ಬಳಿಕ ವರ್ಚುಯಲ್ ಮೂಲಕ ಸಂಗೀತ ಕಾರ್ಯಕ್ರಮ ನಡೆಸಲಾಯಿತು.

ಕೊರೊನಾ ಸಾಂಕ್ರಾಮಿಕದ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಟ್ಯಾಗೋರ್ ಸೊಸೈಟಿ ಆಫ್ ಹೂಸ್ಟನ್ ಟಿಎಸ್​​ಹೆಚ್​ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೂಸ್ಟನ್‌ನ ಕಾನ್ಸುಲೇಟ್ ಜನರಲ್ ಅಸೀಮ್ ಮಹಾಜನ್ ಸೇರಿದಂತೆ ಕೆಲವು ಆಹ್ವಾನಿತ ಅತಿಥಿಗಳು ಮಾತ್ರ ಭಾಗವಹಿಸಿದ್ದರು. ಶತಮಾನೋತ್ಸವ ಕಾರ್ಯಕ್ರಮದಲ್ಲಿ ಟ್ಯಾಗೋರ್ ಅವರ ಸಾರ್ವತ್ರಿಕತೆ ಮತ್ತು ವಿಶ್ವ ಶಾಂತಿಯ ಸಂದೇಶ ಎತ್ತಿ ತೋರಿಸಲಾಯಿತು.

ರೇ ಮಿಲ್ಲರ್ ಪಾರ್ಕ್‌ನಲ್ಲಿ 2013ರಲ್ಲಿ ಅನಾವರಣಗೊಂಡ ಟಾಗೋರ್‌ನ ಜೀವ ಗಾತ್ರದ ಕಂಚಿನ ಪ್ರತಿಮೆ ಹೊಂದಿದೆ. ಕವಿಯ ಜನ್ಮಸ್ಥಳವಾದ ಕೋಲ್ಕತ್ತಾ ಮತ್ತು ಯುಎಸ್​​ನಲ್ಲಿ ಮೊದಲನೆಯದಾಗಿ ನಿರ್ಮಿಸಲಾದ ಕವಿಯ ಆರನೇ ಪೂರ್ಣ ಆಕೃತಿ ಇದು.

ಈ ವೇಳೆ ಮಾತನಾಡಿದ ಹೂಸ್ಟನ್‌ನ ಕಾನ್ಸುಲೇಟ್ ಜನರಲ್ ಅಸೀಮ್ ಮಹಾಜನ್, ಒಂದು ಶತಮಾನದ ಹಿಂದೆ ಟಾಗೋರ್ ಅವರು ಹೂಸ್ಟನ್‌ಗೆ ಭೇಟಿ ನೀಡಿದ ಮಹತ್ವದ ಸಂದರ್ಭವನ್ನು ಆಚರಿಸುವುದು ಅದ್ಭುತವಾಗಿದೆ. ಅವರ ಎರಡನೇ ಖಂಡಾಂತರ ಉಪನ್ಯಾಸ ಪ್ರವಾಸದ ಭಾಗವಾಗಿ ಅಮೆರಿಕದ ರೈಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಿದರು.

ಇದು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಅವರ ಸಾಹಿತ್ಯ ಮತ್ತು ಇತರ ಕೃತಿಗಳಲ್ಲಿ ಸಾಕಷ್ಟು ಆಸಕ್ತಿಯನ್ನು ಹುಟ್ಟುಹಾಕಿತು ಎಂದು ರವೀಂದ್ರನಾಥ ಟ್ಯಾಗೋರ್ ಅವರ ಪ್ರವಾಸಗಳು, ಬರಹಗಳು, ಅಂತಾರಾಷ್ಟ್ರೀಯ ಸಹೋದರತ್ವದ ದೃಷ್ಟಿಕೋನಗಳ ಬಗ್ಗೆ ವಿವರಿಸಿದರು.

ABOUT THE AUTHOR

...view details