ಪಾಟ್ನಾ: ಬಿಹಾರದ 105 ವರ್ಷದ ಮಹಿಳೆಯೊಬ್ಬರು ಕೇವಲ 11 ದಿನಗಳ ಕಾಲ ಮನೆಯಲ್ಲಿ ಹೋಮ್ ಐಸೋಲೇಶನ್ ಆಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಿ ಗೆದ್ದಿದ್ದಾರೆ.
ಹೌದಮ್ಮ ಹೌದು, ನೀ ಬಲು ಗಟ್ಟಿ.. ಕೋವಿಡ್ ಹಿಮ್ಮೆಟ್ಟಿಸಿದ ಬಿಹಾರದ 105ರ ಅಜ್ಜಿ.. - ಹೋಮ್ ಐಸೋಲೇಶನ್
ಕೊರೊನಾ ಪಾಸಿಟಿವ್ ದೃಢಪಟ್ಟ ಕೂಡಲೇ ಕುಟುಂಬವು ಪ್ರತ್ಯೇಕವಾಗಿ ಮನೆಯಲ್ಲಿಯೇ ಐಸೋಲೇಟ್ ಆಗಿ ವ್ಯಾಕ್ಸಿನ್ ಹಾಗೂ ಔಷಧಿ ತೆಗೆದುಕೊಂಡಿತು..

old woman
ಪಾಟ್ನಾದ ದೇಮಂತಿ ದೇವಿ(105) ಅವರ ಕುಟುಂಬದವರಿಗೆ ಏಪ್ರಿಲ್ 11 ರಂದು ಕೋವಿಡ್ ಪಾಸಿಟಿವ್ ಬಂದಿತ್ತು. ಕೊರೊನಾ ಪಾಸಿಟಿವ್ ದೃಢಪಟ್ಟ ಕೂಡಲೇ ಕುಟುಂಬವು ಪ್ರತ್ಯೇಕವಾಗಿ ಮನೆಯಲ್ಲಿಯೇ ಐಸೋಲೇಟ್ ಆಗಿ ವ್ಯಾಕ್ಸಿನ್ ಹಾಗೂ ಔಷಧಿ ತೆಗೆದುಕೊಂಡಿತು.
ನಂತರ ಏಪ್ರಿಲ್ 22ರಂದು ಇಡೀ ಕುಟುಂಬದ ವರದಿ ನೆಗೆಟಿವ್ ಬಂದಿದೆ. ಇನ್ನು, ಇದೇ ಕುಟುಂಬದ 105 ವರ್ಷದ ದೇಮಂತಿ ದೇವಿ ಜ್ವರ ಮತ್ತು ಗಂಟಲಿನ ನೋವು ಕಾಣಿಸಿಕೊಂಡಿದ್ದು, ಸದ್ಯ ಆರೋಗ್ಯವಾಗಿದ್ದಾರೆ. ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ಇಡೀ ಕುಟುಂಬದ ಜನ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.