ನಾಸಿಕ್, ಮಹಾರಾಷ್ಟ್ರ: ನಾಸಿಕ್‌ನ ತ್ರಯಂಬಕೇಶ್ವರ ಆಶ್ರಮ ಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ಮುಟ್ಟಿನ ಕಾರಣದಿಂದಾಗಿ ಸಸಿ ನೆಡಲು ನಿರಾಕರಿಸಲಾಗಿತ್ತು. ಈ ವಿಷಯ ರಾಜ್ಯಾದ್ಯಂತ ಚರ್ಚೆಯಾಗುತ್ತಿರುವಾಗ ಇಂತಹ ಮೂಢನಂಬಿಕೆಯನ್ನು ಹೋಗಲಾಡಿಸಲು ನಾಸಿಕ್‌ನ ‘ಮೂಢನಂಬಿಕೆ ನಿರ್ಮೂಲನಾ ಸಮಿತಿ’ಯ ರಾಜ್ಯ ಕಾರ್ಯಾಧ್ಯಕ್ಷ ಅವರು ತಮ್ಮ ಮಗಳ ಮೊದಲ ಪಿರಿಡ್ ಅನ್ನು ಆಚರಣೆ ಮಾಡಿದ್ದಾರೆ.
ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಕೃಷ್ಣ ಚಂದಗುಡೆ ಮತ್ತು ಅವರ ಪತ್ನಿ ವಿದ್ಯಾ ಚಂದಗುಡೆ ತಮ್ಮ ಮಗಳ ಮೊದಲ ಪಿರಿಯಡ್ ಕಾರ್ಯಕ್ರಮವನ್ನು ಆಚರಿಸಲು ಆಮಂತ್ರಣ ಪತ್ರವನ್ನು ಸಹ ನೀಡಿ ಹಲವರನ್ನು ಆಹ್ವಾನಿಸಿದ್ದಾರೆ. ಮುಟ್ಟನ್ನು ಮೂಢನಂಬಿಕೆ ಎಂದು ಪರಿಗಣಿಸದೇ ದೈಹಿಕ ಚಟುವಟಿಕೆಯ ಒಂದು ಭಾಗ ಎಂದು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೃಷ್ಣಾ ಜಡಗುಡೆ ಹೇಳಿದರು.
ನಾಸಿಕ್‌ನ ಚಂದಗುಡೆ ದಂಪತಿಗಳು ತಮ್ಮ ಹದಿಮೂರನೇ ವಯಸ್ಸಿನಲ್ಲಿ ತಮ್ಮ ಮಗಳು ಯಶೋದಾ ಚಂದ್‌ಗುಡೆ ಅವರ ಮೊದಲ ಪಿರಿಯಡ್ ಕಾರ್ಯಕ್ರಮ ಆಚರಿಸಿದರು. ಆಧುನಿಕ, ವೈಜ್ಞಾನಿಕ ಯುಗದಲ್ಲಿ ಇಂದಿಗೂ ಸಮಾಜದಲ್ಲಿ ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ಮುಕ್ತವಾಗಿ ಚಲಿಸಲು ಸಾಧ್ಯವಾಗುತ್ತಿಲ್ಲ.