ಕರ್ನಾಟಕ

karnataka

ETV Bharat / bharat

ಸಿಇಸಿ ಸುಶೀಲ್ ಚಂದ್ರ, ಇಸಿ ರಾಜೀವ್ ಕುಮಾರ್​ಗೆ ಕೊರೊನಾ ಪಾಸಿಟಿವ್ - ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ

ಸಿಇಸಿ ಸುಶೀಲ್ ಚಂದ್ರ ಹಾಗೂ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಕೊರೊನಾ ಸೋಂಕಿದ್ದು, ಇಬ್ಬರು ಅಧಿಕಾರಿಗಳು ಸದ್ಯ ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ. ಇಬ್ಬರು ಆನ್‌ಲೈನ್‌ನಲ್ಲಿ ನಿಯಮಿತವಾಗಿ ಸಭೆ ನಡೆಸುತ್ತಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿವೆ.

CEC Chandra
ಸಿಇಸಿ ಸುಶೀಲ್ ಚಂದ್ರ

By

Published : Apr 20, 2021, 5:38 PM IST

ನವದೆಹಲಿ:ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುಶೀಲ್ ಚಂದ್ರ ಹಾಗೂ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸದ್ಯ ಉನ್ನತ ಚುನಾವಣಾ ಸಂಸ್ಥೆಯ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ವರ್ಚುಯಲ್ ಮೋಡ್‌ನಲ್ಲಿ ನಿರ್ವಹಿಸುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಬಗ್ಗೆ ಇಬ್ಬರು ಅಧಿಕಾರಿಗಳು ಆನ್‌ಲೈನ್‌ನಲ್ಲಿ ನಿಯಮಿತವಾಗಿ ಸಭೆ ನಡೆಸುತ್ತಿದ್ದಾರೆ ಎಂದು ಚುನಾವಣಾ ಆಯೋಗ (ಇಸಿ) ಮೂಲಗಳು ತಿಳಿಸಿವೆ.

ಇಬ್ಬರು ಅಧಿಕಾರಿಗಳು ಸದ್ಯ ವರ್ಕ್ ಫ್ರಂ ಹೋಂ ಮಾಡುತ್ತಿದ್ದು, ತಮ್ಮ ಕೋವಿಡ್​ ರಿಪೋರ್ಟ್​ ಬರುವ ಮುನ್ನ ಯಾವ ರೀತಿ ಕೆಲಸ ಮಾಡುತ್ತಿದ್ದರೋ, ಪಾಸಿಟಿವ್ ಬಂದಾಗಲೂ ಅದೇ ಕಾರ್ಯಕ್ಷಮತೆ ತೋರಿಸುತ್ತಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಹಾಗಾಗಿ ಪಶ್ಚಿಮ ಬಂಗಾಳದ ಮತದಾನದ ಸಿದ್ಧತೆಗಳಿಗೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

ಏಪ್ರಿಲ್ 13 ರಂದು ಸುನಿಲ್ ಅರೋರಾ ನಿವೃತ್ತಿಯಾದ ಬಳಿಕ ಸುಶೀಲ್ ಚಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.

ABOUT THE AUTHOR

...view details