ಜಮ್ಮು: ಪಾಕಿಸ್ತಾನ ರೇಂಜರ್ ಯೋಧರು ಮಂಗಳವಾರ ಬೆಳಗ್ಗೆ ಕದನ ವಿರಾಮ ಉಲ್ಲಂಘಿಸಿದ್ದು, ಭಾರತದ ಗಡಿ ರಕ್ಷಣಾ ಪಡೆ (ಬಿಎಸ್ಎಫ್) ಯೋಧರ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಕದನವಿರಾಮ ಉಲ್ಲಂಘನೆ ಮಾಡಲಾಗಿದೆ. ಜಮ್ಮು ಜಿಲ್ಲೆಯ ಆರ್ನಿಯಾ ಸೆಕ್ಟರ್ನಲ್ಲಿ ನಡೆದ ಗುಂಡಿನ ದಾಳಿಗೆ ಬಿಎಸ್ಎಫ್ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಪಾಕ್ನಿಂದ ಕದವಿರಾಮ ಉಲ್ಲಂಘನೆ: ಬಿಎಸ್ಎಫ್ ದಿಟ್ಟ ಉತ್ತರ - ಈಟಿವಿ ಭಾರತ ಕನ್ನಡ
ಮಂಗಳವಾರ ಬೆಳಗ್ಗೆ ಪಾಕಿಸ್ತಾನ ಕದನವಿರಾಮದ ಉಲ್ಲಂಘನೆ ಮಾಡಿದೆ. ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಭಾರತದ ಬಿಎಸ್ಎಫ್ ಯೋಧರು ದಿಟ್ಟ ಉತ್ತರ ನೀಡಿದ್ದಾರೆ.
ಇಂದು ಬೆಳಗ್ಗೆ ಗಸ್ತು ತಿರುಗುತ್ತಿದ್ದ ಬಿಎಸ್‌ಎಫ್ ಯೋಧರ ಮೇಲೆ ಪಾಕಿಸ್ತಾನ ರೇಂಜರ್‌ಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ, ಬಿಎಸ್‌ಎಫ್ ಜಮ್ಮು ಪಡೆಗಳು ತಕ್ಕ ಉತ್ತರವನ್ನು ನೀಡಿವೆ ಎಂದು ಬಿಎಸ್‌ಎಫ್ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಎಸ್ ಪಿ ಎಸ್ ಸಂಧು ತಿಳಿಸಿದ್ದಾರೆ. ಭಾರತದ ಕಡೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಬಿಎಸ್ಎಫ್ ಜಮ್ಮುವಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಫೆಬ್ರವರಿ 2020 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನವೀಕರಿಸಿದ ಕದನ ವಿರಾಮಕ್ಕೆ ಭಾರತ ಮತ್ತು ಪಾಕಿಸ್ತಾನ ಒಪ್ಪಿಕೊಂಡಿವೆ. ಕೆಲ ಬಾರಿ ಕದನವಿರಾಮ ಉಲ್ಲಂಘನೆ ಆಗಿದ್ದರೂ, ಈ ಒಪ್ಪಂದದಿಂದ ಗಡಿ ನಿವಾಸಿಗಳು ಮತ್ತು ಗಡಿ ನಿಯಂತ್ರಣ ರೇಖೆ, ಅಂತರರಾಷ್ಟ್ರೀಯ ಗಡಿಯಲ್ಲಿ ಕೃಷಿ ಚಟುವಟಿಕೆಗಳನ್ನು ಪುನರಾರಂಭಿಸಿದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ.