ಕುಪ್ವಾರಾ(ಜಮ್ಮು ಕಾಶ್ಮೀರ):ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಲೈನ್ ಆಫ್ ಕಂಟ್ರೋಲ್)ಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಒಪ್ಪಂದವು ಸೈನಿಕರಿಗೆ ಅನುಕೂಲಕರವಾಗಿದೆ. ಇದು ಸಾವು-ನೋವುಗಳನ್ನು ಕಡಿಮೆ ಮಾಡಿದೆ ಎಂದು ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಕೆರಾನ್ ಸೆಕ್ಟರ್‌ನಲ್ಲಿ ಬ್ರಿಗೇಡಿಯರ್ ತಪಸ್ ಕುಮಾರ್ ಮಿಶ್ರಾ ಈಟಿವಿ ಭಾರತಕ್ಕೆ ತಿಳಿಸಿದರು.
ತಪಸ್ ಕುಮಾರ್ ಮಿಶ್ರಾ ಕುಪ್ವಾರದ ಕೆರಾನ್ ಸೆಕ್ಟರ್‌ನಲ್ಲಿ 268 ಪದಾತಿ ದಳದ ಮುಖ್ಯಸ್ಥರಾಗಿದ್ದಾರೆ. ಇವರ ನೇತೃತ್ವದಲ್ಲಿ ಪಡೆಗಳು ಎಲ್ಒಸಿಯಲ್ಲಿ ಕಾವಲು ಕಾಯುತ್ತಿವೆ. 55 ಕಿ.ಮೀ ಉದ್ದದ ಮೇಲ್ವಿಚಾರಣೆಯನ್ನು ಮಿಶ್ರಾ ನಿರ್ವಹಿಸುತ್ತಿದ್ದಾರೆ.