ನವದೆಹಲಿ: ಇತಿಹಾಸದಲ್ಲಿ ಈ ವರ್ಷ ಖಾಸಗೀಕರಣದ ವಿಷಯದಲ್ಲಿ ಪ್ರಮುಖವಾಗಿ ದಾಖಲಾಗುತ್ತದೆ. ಈ ವಿಚಾರದಲ್ಲಿ ನನಗೆ ಬಹಳ ಆತ್ಮವಿಶ್ವಾಸವಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿದ್ದಾರೆ.
ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ನಲ್ಲಿ ಆಯೋಜಿಸಲಾಗಿದ್ದ ಪಿಜಿಪಿಎಂಎಎಕ್ಸ್ ಲೀಡರ್ಶಿಪ್ ಸಮಿಟ್ 2021 ಉದ್ದೇಶಿಸಿ ಅವರು ಮಾತನಾಡಿದರು. ಈ ವರ್ಷದ ಬಜೆಟ್ನಲ್ಲಿ ಹೇಳಿದಂತೆ ಖಾಸಗೀಕರಣದಿಂದ ಸುಮಾರು 1.75 ಲಕ್ಷ ಕೋಟಿ ಆದಾಯ ಗಳಿಸುವ ಗುರಿ ಸಾಧಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.