ಕರ್ನಾಟಕ

karnataka

ETV Bharat / bharat

ಕೋವ್ಯಾಕ್ಸಿನ್‌ ಶೆಲ್ಫ್-ಲೈಫ್ 12 ತಿಂಗಳ ವಿಸ್ತರಣೆಗೆ ಸಿಡಿಎಸ್‌ಸಿಒ ಅನುಮೋದನೆ: ಭಾರತ್‌ ಬಯೋಟೆಕ್‌ - ಐಸಿಎಂಆರ್‌

ಹೈದರಾಬಾದ್‌ ಮೂಲಕ ಭಾರತ್‌ ಬಯೋಟೆಕ್‌ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಗುಡ್‌ ನ್ಯೂಸ್‌ ನೀಡಿದ್ದು, ಕೋವ್ಯಾಕ್ಸಿನ್‌ ಗುಣಮಟ್ಟದ ನಿರ್ದಿಷ್ಟ ಅವಧಿಯನ್ನು ತಯಾರಿಕೆಯ ದಿನಾಂಕದಿಂದ 12 ತಿಂಗಳವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.

cdsco has approved extension of self life of covaxin up to 12 months
ಕೋವ್ಯಾಕ್ಸಿನ್‌ ಶೆಲ್ಫ್-ಲೈಫ್ 12 ತಿಂಗಳವರೆಗೆ ವಿಸ್ತರಣೆಗೆ ಸಿಡಿಎಸ್‌ಸಿಒ ಅನುಮೋದನೆ: ಭಾರತ್‌ ಬಯೋಟೆಕ್‌

By

Published : Nov 3, 2021, 5:50 PM IST

ಹೈದರಾಬಾದ್‌: ಭಾರತ್ ಬಯೋಟೆಕ್‌ನ ಕೋವಿಡ್‌ ಲಸಿಕೆ ಕೋವ್ಯಾಕ್ಸಿನ್‌ ಅವಧಿಯನ್ನು ತಯಾರಿಕೆಯ ದಿನಾಂಕದಿಂದ 12 ತಿಂಗಳವರೆಗೆ ವಿಸ್ತರಿಸಲು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಅನುಮೋದಿಸಿದೆ ಎಂದು ಭಾರತ್‌ ಬಯೋಟೆಕ್‌ ಹೇಳಿದೆ.

ಕೋವ್ಯಾಕ್ಸಿನ್‌ ಗುಣಮಟ್ಟವನ್ನು ನಿರ್ದಿಷ್ಟ ಅವಧಿ(ಶೆಲ್ಫ್-ಲೈಫ್) ವಿಸ್ತರಣೆಯ ಈ ಅನುಮೋದನೆಯು ಹೆಚ್ಚುವರಿ ಸ್ಥಿರತೆಯ ಡೇಟಾ ಲಭ್ಯತೆಯನ್ನು ಆಧರಿಸಿದೆ. ಇದನ್ನು ಸಿಡಿಎಸ್‌ಸಿಒಗೆ ಸಲ್ಲಿಸಲಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಕೋವಾಕ್ಸಿನ್‌ನ ಶೆಲ್ಫ್-ಲೈಫ್ ಅನ್ನು 6 ರಿಂದ 24 ತಿಂಗಳವರೆಗೆ ವಿಸ್ತರಿಸಬೇಕೆಂದು ಭಾರತದ ಔಷಧ ನಿಯಂತ್ರಕರಿಗೆ ಪತ್ರ ಬರೆಯಲಾಗಿತ್ತು.

ಕೋವ್ಯಾಕ್ಸಿನ್‌ ಶೆಲ್ಫ್-ಲೈಫ್ 12 ತಿಂಗಳವರೆಗೆ ವಿಸ್ತರಣೆಗೆ ಸಿಡಿಎಸ್‌ಸಿಒ ಅನುಮೋದನೆ: ಭಾರತ್‌ ಬಯೋಟೆಕ್‌

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ಗೆ ಎರಡರಿಂದ ಎಂಟು ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿದಾಗ ಆರು ತಿಂಗಳ ಶೆಲ್ಫ್-ಲೈಫ್‌ನೊಂದಿಗೆ ಕೋವಾಕ್ಸಿನ್ ಮಾರಾಟ ಮತ್ತು ವಿತರಣೆಗೆ ಈ ಮೊದಲು ಅನುಮತಿ ನೀಡಲಾಗಿತ್ತು.

2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿದಾಗ ಶೆಲ್ಫ್-ಲೈಫ್ ಅನ್ನು ಆರು ತಿಂಗಳಿಂದ 24 ತಿಂಗಳವರೆಗೆ ವಿಸ್ತರಿಸಲು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಭಾರತ್‌ ಬಯೋಟೆಕ್‌ ತಿಳಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌) ಹಾಗೂ ಭಾರತ್ ಬಯೋಟೆಕ್ ಜಂಟಿಯಾಗಿ ಕೋವ್ಯಾಕ್ಸಿನ್‌ ಲಸಿಕೆಯನ್ನುಅಭಿವೃದ್ಧಿಪಡಿಸಿದೆ.

For All Latest Updates

ABOUT THE AUTHOR

...view details