ನವದೆಹಲಿ:ಅಂತಾರಾಷ್ಟ್ರೀಯ ಗಡಿ (ಎಲ್ಒಸಿ) ಸೇರಿದಂತೆ ಇತರ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ರಕ್ಷಣಾ ಮುಖ್ಯಸ್ಥ ( ಸಿಡಿಎಸ್ ) ಜನರಲ್ ಬಿಪಿನ್ ರಾವತ್ ಗುರುವಾರ ಜಮ್ಮು ಸೆಕ್ಟರ್ಗೆ ಆಗಮಿಸಿದ್ದಾರೆ.
ಜಮ್ಮು ಏರ್ಬೇಸ್ ಮೇಲೆ ಉಗ್ರರು ದಾಳಿ ನಡೆಸಿದ ವಾರದ ಬಳಿಕ ರಾವತ್ ಜಮ್ಮುವಿಗೆ ಭೇಟಿ ನೀಡುತ್ತಿದ್ದಾರೆ. ಭಯೋತ್ಪಾದಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡಲು ಉಗ್ರರು ಡ್ರೋನ್‌ಗಳನ್ನು ಬಳಸುವುದರ ಬಗ್ಗೆ ಜನರಲ್ ರಾವತ್ ಕಳವಳ ವ್ಯಕ್ತಪಡಿಸಿದ್ದಾರೆ. ಕಳೆದ ಜೂನ್‌ನಲ್ಲಿ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಎಲ್ಎಸಿ ಕೇಂದ್ರ ವಲಯಕ್ಕೆ ರಾವತ್ ಭೇಟಿ ನೀಡಿದ್ದರು.