ಗೋರಖ್‌ಪುರ: ಎರಡು ದಿನಗಳ ಗೋರಖ್‌ಪುರ ಪ್ರವಾಸದಲ್ಲಿರುವ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್, ನಾಥ ಪಂಥದ ಗುರು ಗೋರಖನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಗೋರಖನಾಥ ದೇವಾಲಯಕ್ಕೆ ಭೇಟಿ ನೀಡಿದ ಸಿಡಿಎಸ್ ಬಿಪಿನ್ ರಾವತ್ - ಎರಡು ದಿನಗಳ ಗೋರಖ್‌ಪುರ ಪ್ರವಾಸದಲ್ಲಿರುವ ಬಿಪಿನ್ ರಾವತ್
ಎರಡು ದಿನಗಳ ಗೋರಖ್‌ಪುರ ಪ್ರವಾಸದಲ್ಲಿರುವ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಸಿಎಂ ಯೋಗಿ ಅದಿತ್ಯನಾಥ್ ಕೂಡ ಜತೆಯಾಗಿ ಇಲ್ಲಿನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಗೋರಖನಾಥ ದೇವಾಲಯಕ್ಕೆ ಭೇಟಿ ನೀಡಿದ ಬಿಪಿನ್ ರಾವತ್
ಈ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ರಾವತ್ ಅವರಿಗೆ ಜೊತೆಯಾಗಿದ್ದರು. ಇನ್ನು ಈ ದೇವಾಲಯದ ಒಳಗೆ ಬರುವ ಮುನ್ನ ಸಿಎಂ ಯೋಗಿ ಅವರು ರಾವತ್ಗೆ ನಾಥ ಸಂಪ್ರದಾಯದ ವಿವಿಧ ದೇವತೆಗಳ ಬಗ್ಗೆ ಮಾಹಿತಿ ನೀಡಿದರು. ಹಾಗೆಯೇ ದೇವಾಲಯ ಆವರಣದ ಸನ್ನದ್ಧತೆ ಮತ್ತು ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಗೋರಖನಾಥ ದೇವಾಲಯದ ಟ್ರಸ್ಟ್ನಿಂದ ನಿರ್ಮಾಣ ಆಗುತ್ತಿರುವ ಮಹಾರಾಣಾ ಪ್ರತಾಪ್ ಶಿಕ್ಷಣ ಮಂಡಳಿಯ ಶಂಕುಸ್ಥಾಪನೆಯನ್ನು ಕಳೆದ ಶುಕ್ರವಾರವಷ್ಟೇ ಉದ್ಘಾಟಿಸಲಾಗಿದೆ. ಈ ವೇಳೆಯೂ ರಾವತ್ ಮತ್ತು ಆದಿತ್ಯನಾಥ್ ಮುಖ್ಯ ಅತಿಥಿಯಾಗಿದ್ದರು.